,

LOL

ಇತರರಿಗಿಂತ ನಿಮಗೇ ಯಾಕೆ ಸೊಳ್ಳೆ ಹೆಚ್ಚು ಕಡಿಯುತ್ತಿದೆ

ಎಲ್ಲಿಯವರೆಗೆ ನಿಮ್ಮ ಫ್ಯಾನ್, ಕೂಲರ್ ಇತ್ಯಾದಿ ಚಾಲೂ ಇರುವವರೆಗೆ ಸರಿ. ಇಲ್ಲದಿದ್ದರೆ ಕರೆಂಟು ಹೋದರೆ ನಿಮ್ಮ ಜೀವನವನ್ನು ಸೊಳ್ಳೆಗಳು ಅಸಹನೀಯ ಗೊಳಿಸುತ್ತದೆ. ಸೆಕೆಗಾಲದಲ್ಲಿ ಹೀಗೆ ಇನ್ನು ಚಳಿಗಾಲದಲ್ಲಿ ಅತ್ಯಧಿಕ ಸೊಳ್ಳೆಗಳು ಚುಚ್ಚುತ್ತವೆ. ಆಗ ಈ ಸೊಳ್ಳೆಗಳು ತಮಗೇ ಯಾಕೆ ಕಚ್ಚುತ್ತಿವೆ ಎಂದು ಯೋಚಿಸಿ ತಲೆ ಹಾಳು ಮಾಡಿಕೊಳ್ಳುತ್ತೇವೆ.
ಇದಕ್ಕೆ ಮನೆಯವರು ನಿನ್ನಲ್ಲಿ ಅದಕ್ಕೆ ಹೆಚ್ಚು ಪ್ರೀತಿ ಎನ್ನುತ್ತಾರೆ!. ಕೆಲವರು ನೀನು ತುಂಬ ಸಿಹಿ ತಿನ್ನುವೆ ಆದ್ದರಿಂದ ಸೊಳ್ಳೆಗಳು ನಿನಗೆ ಕಚ್ಚುತ್ತಿವೆ ಎಂದು ಹೇಳುತ್ತಾರೆ.ಆದರೆ ಇವೆಲ್ಲವೂ ಸುಮ್ಮನೆ ಹೇಳುವ ಮಾತುಗಳಾಗಿವೆ.
ಸೊಳ್ಳೆ ನಿಮ್ಮ ಶರೀರದಿಂದ ಹೊರಡುವ ದುರ್ಗಂಧ ಅಥವಾ ನಿಮ್ಮ ಕೊಳಕು ಸಾಕ್ಸ್‍ನಿಂದ ಪ್ರೇರಿತವಾಗಿ ಸೊಳ್ಳೆಗಳು  ಕಡಿಯುತ್ತವೆ ಎಂದು ಲಂಡನ್ ಸ್ಕೂಲ್ ಆಫ್ ಹೈಜಿನ್ ಆಂಡ್ ಟ್ರಾಫಿಕಲ್ ಮೆಡಿಸಿನ್ ತಿಳಿಸಿದೆ. ಜೆನೆಟಿಕ್ ಅರ್ಥಾತ್ ಅನುವಂಶಿ ಕ  ಕಾರಣದಿಂದ ಸೊಳ್ಳೆಗಳು ಕಚ್ಚುತ್ತಿವೆಯೇ ಎಂದು ಅದು ಸಂಶೋಧನೆ ನಡೆಸಿತ್ತು.

 

ಅದು 200 ಸಾಕ್ಸ್‍ಗಳಲ್ಲಿ ಸಂಶೋಧನೆ ನಡೆಸಿತು. ರಕ್ತದ ಪರೀಕ್ಷೆ ನಡೆಸಿತು. ಆದರೆ ಇವೆಲ್ಲವೂ ಸೊಳ್ಳೆ ಕಚ್ಚಲು ಕಾರಣಗಳಲ್ಲ ದೇಹದ ವಾಸನೆಯಿಂದ ಪ್ರೇರಣೆಗೆ ಗೊಂಡು ಸೊಳ್ಳೆಗಳು ಮನುಷ್ಯನಿಗೆ ಕಚ್ಚುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.
ಹೈಜಿನ್ ಸ್ಕೂಲ್ ಅವಳಿ ಮಕ್ಕಳಲ್ಲಿ ಸಂಶೋಧನೆ ನಡೆಸಿ ನೋಡಿತು. ಅವರೆಲ್ಲರೂ ಒಟ್ಟಿಗೆ ಹುಟ್ಟಿದವರು. ಇವರಲ್ಲಿಒಬ್ಬೊರೊಬ್ಬರಿಗೆ ಹೋಲುವ ಅವಳಿಮಕ್ಕಳು ಕೂಡಾ ಇದ್ದರು. ಇನ್ನು ಜೆಂಡರ್ ಹೋಲಿಕೆಯಿಲ್ಲದ ಮಕ್ಕಳು ಕೂಡಾ ಇದ್ದರು. ಇದರಿಂದ ಅನುವಂಶಿಕ ಕಾರಣದಿಂದ ಸೊಳ್ಳೆಗಳು ಕಡಿಯುವುದಿಲ್ಲ ಎಂದು ಪತ್ತೆಯಾಗಿದೆ.

 

ಅವಳಿಗಳನ್ನು ಸಂಶೋಧನೆಗೆ ಯಾಕೆ ಆಯ್ಕೆ ಮಾಡಿಕೊಳ್ಳಲಾಯಿತೆಂದರೆ ಕಳೆದ ಸಲ ಸಂಶೋಧನೆಯಲ್ಲಿ ಪರಸ್ಪರ ಹೋಲಿಕೆ ಇರುವ ಅವಳಿಗಳಿಗೆ ಸೊಳ್ಳೆ ಹೆಚ್ಚು ಕಚ್ಚುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿತ್ತು.
ಜೂನ್ 2016ರಲ್ಲಿ  ಸಂಶೋಧನೆ ನಡೆಸಿದ ಜೇಮ್ಸ್ ಲಾಗನ್ ” ನಾವು ಜೆನೆಟಿಕ್ಸ್ ಅರ್ಥಾತ್ ಅನುವಂಶೀಯತೆಯ ಬಗ್ಗೆ ಕಡಿಮೆ ಅರಿತಿದ್ದೇವೆ. ಸೊಳ್ಳೆ ಕಚ್ಚುವುದು ದೇಹದ ದುರ್ಗಂಧದ ಕಾರಣದಿಂದ ಎಂದು ಸಂಶೋಧನೆಯಲ್ಲಿ ಪತ್ತೆಯಾಗಿದೆ” ಎಂದು ತಿಳಿಸಿದ್ದಾರೆ.

ಹುಡುಗಿಯರ ಹೆಸರಲ್ಲಿ ನಕಲಿ ಖಾತೆ ತೆರೆದವರಿಗೆ ಕೆಟ್ಟಸುದ್ದಿ !

ಪ್ರಧಾನಿ ಮೋದಿಯ ಇಸ್ರೇಲ್ ಭೇಟಿಯ ವೇಳೆ,ಸೋಶಿಯಲ್ ಮೀಡಿಯದಲ್ಲಿ ಕ್ವೀನ್ ಆದ ಹುಡುಗಿ!