,

OMG

ವಾಹನ ಚಲಾವಣೆ ಲೈಸೆನ್ಸ್‍ ಗೆ  ಬರಲಿದೆ ಹೊಸ ನಿಯಮ ;  ಡ್ರೈವಿಂಗ್ ಟೆಸ್ಟ್ ಹೇಗಿರಲಿದೆ ಗೊತ್ತಾ ?

ಡ್ರೈವಿಂಗ್ ಲೈಸನ್ಸ್ ಮಾಡಿಸಿಕೊಳ್ಳಲು ಈಗ ಹೊಸ ವ್ಯವಸೆಯನ್ನು ಎದುರಿಸಬೇಕಾಗುತ್ತದೆ. ಯಾಕೆಂದರೆ ಅದಕ್ಕಾಗಿ ಹೊಸ ನಿಯಮ ರೂಪಿಸಲಾಗುತ್ತಿದೆ.

ಡ್ರೈವಿಂಗ್ ಲೈಸೆನ್ಸ್‍ಗಾಗಿ ಸಿಮ್ಯುಲೆಟರ್ ಡ್ರೈವ್ ಟೆಸ್ಟ್ ಪಾಸು ಆಗುವುದು ಕಡ್ಡಾಯವಾಗಿದೆ. ಇದಿಲ್ಲದೆ ಈಗ ಲೈಸನ್ಸ್ ಸಿಗುವುದಿಲ್ಲ.

ಇದನ್ನು ಮೊದಲು ಡೆಹ್ರಾಡೂನ್‍ನಲ್ಲಿ ಜಾರಿಗೆ ತರಲಾಗಿದೆ. ಇಂತಹ ಟೆಸ್ಟ್‍ನಿಂದಾಗಿ ಶೇ. 60ರಷ್ಟು  ಜನರು ಫೈಲಾಗಿದ್ದಾರೆ. ಫೈಲಾದವರಲ್ಲಿ 45ವರ್ಷ ವಯಸ್ಸಿಗಿಂತ ಹೆಚ್ಚಾಗಿರುವವರು ಜಾಸ್ತಿಯಿದ್ದಾರೆ.  ಈಗ ಸಿಮ್ಯುಲೆಟರ್ ಡ್ರೈವಿಂಗ್‍ಟೆಸ್ಟ್ ಪಾಸು ಅಗದೆ ಲೈಸೆನ್ಸ್ ಸಿಗುವುದಿಲ್ಲ. ಆದರೆ ಯುವಕರು ಮತ್ತು ವೀಡಿಯೊ ಆಡುವವರು ಈ  ಟೆಸ್ಟ್ ಸುಲಭದಲ್ಲಿ ಪಾಸಾಗುತ್ತಾರೆ.

ಸಿಮ್ಯುಲೇಟರ್ ಡ್ರೈವ್ ಟೆಸ್ಟ್ ವೀಡಿಯೊಗೇಮ್ ಆಡುವಂತಿದೆ. ಕಂಪ್ಯೂಟರ್ ಮತ್ತು ಮೊಬೈಲ್‍ನಲ್ಲಿ ಕಾರ್ ರೇಸ್ ಆಡಿದ ಯುವಕರಿಗೆ ಈ ಟೆಸ್ಟ್ ಸುಲಭದಲ್ಲಿ ಪಾಸು ಮಾಡಬಹುದಾಗಿದೆ. ಆದರೆ 45ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಇದರಲ್ಲಿ ಫೈಲಾಗುತ್ತಾರೆ. ಹೀಗಿರುವಾಗ ಡ್ರೈವಿಂಗ್ ಲೈಸೆನ್ಸ್ ಮಾಡುವುದಕ್ಕಾಗಿ ಆರ್‍ಟಿಒದಲ್ಲಿ ಸಿಮ್ಯುಲೆಟರ್ ಡ್ರೈವ್ ಟೆಸ್ಟ್ ಕೊಡುವ ಮೊದಲು ವೀಡಿಯೊಗೇಮ್ ಅಥವಾ ಮೊಬೈಲ್‍ನಲ್ಲಿ ಕಾರು ರೇಸ್‍ನ ಅಭ್ಯಾಸ ಮಾಡುವುದು ಉತ್ತಮವಾಗಿದೆ.

ವಾಸ್ತವದಲ್ಲಿ ಹೆಚ್ಚಿನ ಅಪಘಾತಗಳು ಚಾಲಕರ ತಪ್ಪಿನಿಂದನಡೆಯುತ್ತವೆ. ಸಂಚಾರದ ನಿಯಮ ಗೊತ್ತಿಲ್ಲದೆ ಅಪಘಾತ ಸಂಭವಿಸುತ್ತದೆ ಎಂದು ಸಾರಿಗೆ ಇಲಾಖೆಯ ಅಭಿಪ್ರಾಯವಾಗಿದೆ. ಆದ್ದರಿಂದ ಡ್ರೈವಿಂಗ್ ಲೈಸೆನ್ಸ್ ಮಾಡುವ ಪ್ರಕ್ರಿಯೆಯಲ್ಲಿ ಸಿಮ್ಯುಲೇಟರ್ ಟೆಸ್ಟ್ ಡ್ರೈವ್ ಕಡ್ಡಾಯಗೊಳಿಸಲಾಗಿದೆ. ಈ ಟೆಸ್ಟ್‍ನಲ್ಲಿ ಪಾಸಾದವರು ಬಳಿಕ ಮ್ಯಾನ್ಯುವಲ್ ಡ್ರೈವಿಂಗ್ ಟೆಸ್ಟ್ ಮಾಡಿಸಿಕೊಳ್ಳಬಹುದಾಗಿದೆ. ಮ್ಯಾನುವೆಲ್ ಡ್ರೈವಿಂಗ್‍ಗಾಗಿ ಆರ್‍ಟಿಒ ಪರಿಸರದಲ್ಲಿ ಕಾರು ಚಲಾಯಿಸಬೇಕಾಗುತ್ತದೆ.

ಸಿಮ್ಯುಲೆಟರ್ ಟೆಸ್ಟ್ ಡ್ರೈವ್ ಮೆಶಿನ್ ಕಾರು ಡ್ರೈವಿಂಗ್ ಕ್ಯಾಬಿನ್‍ನ ರೀತಿಯಲ್ಲಿದೆ. ಇದರಲ್ಲಿ ಗೇರ್, ಇಂಡಿಕೇಟರ್, ಸ್ಪೀಡ್‍ಕ್ಲಚ್ ಮತ್ತು ಬ್ರೇಕ್ ಇದೆ. ಲೈಸೆನ್ಸ್ ಮಾಡಿಸಿಕೊಳ್ಳುವವರು ಸಿಮ್ಯುಲೆಟರ್ ಡ್ರೈವ್ ಸೀಟನ್‍ನಲ್ಲಿ ಕುಳಿತು ಆಪರೇಟ್ ಮಾಡಬೇಕಾಗುತ್ತದೆ.  ಕಾರು ಸರಿಯಾದ ರೀತಿಯಲ್ಲಿ ಆಪರೇಟ್ ಆಗುತ್ತಿದೆಯೇ,ಎನ್ನುವುದು ಬಳಿಯಲ್ಲಿರುವ ಸ್ಕ್ರೀನ್‍ನಲ್ಲಿ ಬರುತ್ತದೆ.ಎಪ್ಪತ್ತಕಿಂತ ಕಡಿಮೆ ಅಂಕ ಬರುವವರು  ಈ ಟೆಸ್ಟ್ ಡ್ರೈವ್‍ನಲ್ಲಿ ಫೈಲಾಗುತ್ತಾರೆ.

 

ಗ್ಯಾಸ್ ಸಿಲೆಂಡರ್‍ನಲ್ಲಿ ಬರೆದಿರುವ ಈ ನಂಬರಿನ ಅರ್ಥವೇನು ಗೊತ್ತೇ ?

ವೇಸ್ಟ್ ಪ್ಲಾಸ್ಟಿಕ್ ಗಳನ್ನು ಉಪಯೋಗಿಸಿ ರಸ್ತೆ ನಿರ್ಮಿಸಿಸುವುದು ಹೇಗೆ ನೋಡಿ !