,

Win

“ಮನೆ ಮಂದಿ ನನ್ನನ್ನು ಸಾಯಲು ಬಿಟ್ಟಿದ್ದರು “; ಕೇಂದ್ರ ಸಚಿವೆ ಸ್ಮತಿ ಇರಾನಿಯ ಕರುಣಾಜನಕ ಕಥೆ.

ದೇಶದಲ್ಲಿ ಹೆಣ್ಣು ಸಮಾಜದ ಅಪವಾದ ಎನ್ನುವ ನಂಬಿಕೆ ಇಟ್ಟುಕೊಂಡಿರುವವರಿಗೆ ದೇಶದ ಯುವ ಕ್ಯಾಬಿನೆಟ್ ಸಚಿವೆ ಸ್ಮತಿ ಇರಾನಿಯ ಕತೆ ಕಣ್ಣು ತೆರೆಸುವಂತಹದ್ದಾಗಿದೆ. ನರೇಂದ್ರಮೋದಿ ಸರಕಾರದ ಸಚಿವೆ ಸ್ಮತಿ ಇರಾನಿ ಹುಟ್ಟಿದಾಗಲೆ ಮನೆ ಮಂದಿ  ಹೆಣ್ಣು ಶಾಪ ಎಂದು ಕುಟುಕಲು ಆರಂಭಿಸಿದ್ದರು.
ಆದರೆ ಈವತ್ತು ಸ್ಮತಿ ಕೇಂದ್ರ ಸರಕಾದಲ್ಲಿ ಸಚಿವೆ ಆಗಿದ್ದಾರೆ. ಶಕ್ತಿಶಾಲಿ ಸಚಿವೆ ಆಗಿದ್ದಾರೆ. ಇದರ ಶ್ರೇಯಸ್ಸು ಪ್ರಗತಿಶೀಲವಾಗಿ ಚಿಂತಿಸಿದ ಅವರ ತಂದೆ ತಾಯಿಗಳಿಗೆ ಸಲ್ಲಬೇಕಾಗಿದೆ. ಬಾಲ್ಯದಲ್ಲಿ ಸ್ಮತಿ ಭಾರೀ ಗಂಭೀರ ರೋಗಕ್ಕೀಡಾಗಿದ್ದರು. ಈ  ಸ್ಥಿತಿಯಲ್ಲಿ ಕುಟುಂಬದ ಹಿರಿಯ ಮಹಿಳೆಯರು ಯಾವುದೇ ಬಟ್ಟೆ ಇಲ್ಲದೆ ಬರೀ ಮಣ್ಣಲ್ಲಿ ಮಲಗಿಸಿದ್ದರು. ಸಾಯುವುದಿದ್ದರೆ ಸಾಯಲಿ ಎಂದು.
ಸ್ಮತಿ ಇಂಡಿಯ ಟುಡೆಯೊಂದಿಗೆ ಈ ಘಟನೆಯ ಕುರಿತು ಸ್ಮರಿಸಿಕೊಂಡಿದ್ದಾರೆ.” ನನ್ನ ಅಮ್ಮ ವಿರೊಧಿಸಿದಾಗ ಹೆಣ್ಣು ಮಗುಇದು  ಇದು ಸತ್ತರೆ ನಿನ್ನ ಜೀವನ ಸುಲಭವಾಗಬಹುದು ಎಂದು ಹೇಳಿದ್ದರು. . ತಂದೆ ತಾಯಿ ಪ್ರಗತಿಶೀಲ ವಿಚಾರದವರಾದ್ದರಿಂದ ನಾನು ಇಲ್ಲಿಗೆ ಬಂದು ತಲುಪಿದೆ” ಎಂದು ಸ್ಮತಿ ತನ್ನಜೀವನ ಘಟನೆಗಳನ್ನು ಸ್ಮರಿಸಿಕೊಂಡಿದ್ದಾರೆ.
ದಿಲ್ಲಿಯ ಬಡ ಕುಟುಂಬದಲ್ಲಿ ಹುಟ್ಟಿದ ಸ್ಮತಿ ಇರಾನಿ ಟೆಂಟ್ ಶಾಲೆಯಲ್ಲಿ ಬಾಲ್ಯದಲ್ಲಿ ಕಲಿತಿದ್ದರು. ” ನನ್ನ ಬಾಲ್ಯದ ಆದಿನಗಳು ಹೇಗಿವೆಯೆಂದರೆ ನಾನಾಗ ಐದನೆ ತರಗತಿಯಲ್ಲಿ ಕಲಿಯುತ್ತಿದ್ದೆ. ಆಗ ಪೈಲೆಟ್ ಪೆನ್ ಹೊಸದಾಗಿ ಬಂದಿತ್ತು. ಅದನ್ನು ಖರೀದಿಸಲು ನನ್ ನಬಳಿ ಹಣ ಇರಲಿಲ್ಲ. ನನಗೆ ನಾನು ಈ ಸ್ಥಿತಿಯಲ್ಲಿ ಯಾಕೆ ಬಂದಿದ್ದೇನೆ ಎಂದು ಗೊತ್ತಾಗುತ್ತಿರಲಿಲ್ಲ. ಎಂದು ಸ್ಮತಿ ನೆನಪಿಸಿಕೊಂಡಿದ್ದಾರೆ.

 

ಮೂವರು ಸಹೋದರಿಯರಲ್ಲಿ ಹಿರಿಯರಾದ ಸ್ಮತಿ  ತನ್ನ ಕಾಲಿನಲ್ಲಿ ನಿಲ್ಲಲಿಕ್ಕಾಗಿ ಮುಂಬೈಗೆ ಬಂದಾಗ ಅಲ್ಲಿ ಮೆಕ್‍ಡೊನಾಲ್ಡ್‍ನಲ್ಲಿ ಗುಡಿಸುವ ಕೆಲಸ ವೈಟರ್ ಕೆಲಸ ಮಾಡಿದ್ದಾರೆ. ಆದರೆ ಅವರು ಎದೆಗುಂದಲಿಲ್ಲ. ನಂತರ ಅವರು ಕ್ಯೋಂಕಿ ಸಾಸ್‍ಭಿ ಕಭೀ ಬಹೂ ಥಿ ಟಿವಿ ಧಾರಾವಾಹಿಯಲ್ಲಿ ತುಳಸಿಯ ಪಾತ್ರ ಮಾಡಿದ ಬಳಿಕ ಅವರಿಗೆ ಗುರುತು ಸಿಕ್ಕಿತು. ಈವತ್ತಿಗೂ ಅವರು ಈ ಉಪನಾಮದಲ್ಲಿ ಗುರುತಿಸಿಕೊಳ್ಳುತ್ತಾರೆ.

 

ಮಳೆಯಲ್ಲಿ ನೆನೆದ ಬಳಿಕ ಹುಡುಗಿಯರ ಮೂಡ್ ಹೇಗಿರುತ್ತೇ ಗೊತ್ತಾ ?

ಈ ವಿಮಾನದಲ್ಲಿ ಪ್ರಯಾಣಿಸುವವರು ವಸ್ತ್ರ ಧರಿಸುವಂತಿಲ್ಲ !