,

ಮನೆಯಲ್ಲಿ ಕೂತು ಲಕ್ಷಾಂತರರುಪಾಯಿ ಸಂಪಾದಿಸುತ್ತಿದ್ದಾನೆ ಈ ಬಾಲಕ; ಹೇಗೆ ಗೊತ್ತಾ ?

ಯಾವುದೇ ವ್ಯಕ್ತಿಯಲ್ಲಿ ಟ್ಯಾಲೆಂಟ್ ಇದ್ದರೆ ಅಂತಹವರನ್ನು ಯಾರಿಂದಲೂ ತಡೆಹಿಡಿಯಲು ಸಾಧ್ಯವಿಲ್ಲ.  ಕೆಲವರಿಗೆ ತಮ್ಮ ಕನಸು ಈಡೇರಿಸಿಕೊಳ್ಳಲು  ಇಡೀ ಜೀವನವನ್ನೇ ವ್ಯಯಿಸಬೇಕಾಗುತ್ತದೆ. ಮತ್ತು ಕೆಲವರಿಗೆ ತಮ್ಮ ಟ್ಯಾಲೆಂಟ್‍ನಲ್ಲಿತಮ್ಮೆಲ್ಲ ಕನಸ್ಸು ಬಹುಬೇಗನೆ ಈಡೇರಿ ಬಿಡುತ್ತದೆ.

ಇಂತಹವರಲ್ಲಿ ಆರುವರ್ಷದ ಈ ಮಗು ಕೂಡಾ ಇದ್ದಾನೆ. ವಯಸ್ಸಿನಲ್ಲಿ ಕೇವಲ ಆರುವರ್ಷ ಮಾತ್ರ ಆತನಿಗೆ ಆಗಿದೆ.  ಅಷ್ಟರಲ್ಲಿಯೇ ಅವನು ಬಹಳಷ್ಟು ಸಂಪಾದಿಸಿದ್ದಾನೆ.

ವೀಡಿಯೊ ಮಾಡಿ ಸ್ಟಾರ್ ಆದ:

ಈ ಮಗುವಿನ ಹೆಸರು ನಿಹಾಲ್ ರಾಜ್. ಕೊಚ್ಚಿಯಲ್ಲಿ ಅವನ ಮನೆಯಿದೆ. ನಿಹಾಲ್  ಮೊದಲು ತನ್ನ ತಾಯಿಯ ಜೊತೆ ಕಿಚನ್‍ನಲ್ಲಿ ಸಹಾಯಮಾಡುತ್ತಿದ್ದ.  ಆಗ ಅವನ ತಂದೆ ಅದರ ವೀಡಿಯೊ ಚಿತ್ರೀಕರಿಸುತ್ತಿದ್ದರು. ತಂದೆ ಈ ವೀಡಿಯೊವನ್ನು ತನ್ನ ಫೇಸ್‍ಬುಕ್ ಖಾತೆಗೆ ಪೋಸ್ಟ್ ಮಾಡಿದರು.ಅದು ಬಹಳ ವೈರಲ್ ಆಯಿತು.

ಕೆಲವರುನಿಹಾಲ್‍ನ ತಂದೆಗೆ ಯೂಟ್ಯೂಬ್‍ನಲ್ಲಿ ವೀಡಿಯೊ ಹಾಕಲು ಹೇಳಿದರು. ನಿಹಾಲ್‍ನ ತಂದೆ ಯೂಟ್ಯೂಬ್‍ನಲ್ಲಿ ಕಿಚಾಟ್ಯೂಬ್ ಚ್ಯಾನೆಲ್ ಮಾಡಲು ನಿರ್ಧರಿಸಿದರು. ಇದರಲ್ಲಿ ನಿಹಾಲನ ವೀಡಿಯೊ ಅಪ್‍ಲೋಡ್ ಮಾಡಲಾಗುತ್ತಿದೆ. ಇವನ ಯುಟ್ಯೂಬ್ ಚ್ಯಾನೆಲ್ 2015ರಲ್ಲಿ ಲಾಂಚ್ ಆಗಿದೆ. ನಂತರ ಅವನು ಜನಪ್ರಿಯನಾದನು.

ಜಗತ್ತಿನ ಪುಟ್ಟ ಶೆಫ್:

ಈ ವೀಡಿಯೊ ಮೂಲಕ ಜನರಿಗೆ ತನ್ನ ಶೈಲಿಯಲ್ಲಿ ಆಹಾರ ತಯಾರಿ ಕಲಿಸುತ್ತಿದ್ದಾನೆ. ಇದು ದೊಡ್ಡ ಗೃಹಿಣಿಯರಿಗೂ ಸಾಧ್ಯವಿಲ್ಲದ ವಿಷಯವಾಗಿದೆ. ಈ ಚ್ಯಾನೆಲ್ ಬಹಳ ಜನಪ್ರಿಯಗೊಂಡಿತು. ಮತ್ತುಕಮರ್ಶಿಯಲ್ ಮತ್ತು ಜನಪ್ರಿಯತೆ ಹೆಚ್ಚುತ್ತಾ ಹೋಯಿತು. ಇದರಿಂದಾಗಿ ನಿಹಾಲ್ ತಿಂಗಳಲ್ಲಿ ಲಕ್ಷಾಂತರ ರೂಪಾಯಿ  ಸಂಪಾದಿಸುತ್ತಿದ್ದಾನೆ. ನಿಹಾಲ್‍ನ ಕುಕಿಂಗ್ ಸ್ಕಿಲ್‍ಗಾಗಿ ಅವನಿಗೆ ಬಹಳಷ್ಟು ಪ್ರಶಸ್ತಿಗಳು ಸಿಕ್ಕಿವೆ. ಇವನು ಜಗತ್ತಿನ ಪ್ರಸಿದ್ಧ ಶೆಫ್ ಸಂಜೀವ್ ಕಪೂರ್‍ರನ್ನು ಭೇಟಿಯಾಗಿದ್ದಾನೆ.

ನಿಹಾಲ್ ಅಮೆರಿಕದ ಜನಪ್ರಿಯ ಶೋ ಎಲೆನ್ ಡಿ ಜನರೆಸ್‍ನಲ್ಲಿ ಪುಟ್ಟು ತಿಂಡಿ ತಯಾರಿಸಿ ಪ್ರಶಸ್ತಿ ಪಡೆದಿದ್ದಾನೆ. ನಿಹಾಲ್‍ನ ಕುಕ್ ಶೋದಲ್ಲಿ ಬಹಳ ಇನ್ನೋಟಿವ್ ಡಿಸ್ಸೆಸ್ ಇರುತ್ತದೆ.

ಕೈದಿ ಮಹಿಳೆಯ ಮಗುವುಗೆ ಮೊಲೆಹಾಲುಣಿಸಿದ ಮಹಿಳಾ ಪೊಲೀಸ್ ಅಧಿಕಾರಿ!

ಭಾರತದ ಗುರುಕುಲ ಪದ್ಧತಿಯನ್ನು ಅಳವಡಿಸಿದ ಫಿನ್ ಲ್ಯಾಂಡ್ ; ಯಾಕೆ ಗೊತ್ತಾ ?