,

Love

ಮನೆಮಠ ತೊರೆದು ಬಂದ ವಿದೇಶಿ ಹುಡುಗಿ: ಇವರ ಫೇಸ್ಬುಕ್ ಪ್ರೇಮ ಹೇಗಿತ್ತು ಗೊತ್ತಾ ?

ಹೊಸದಿಲ್ಲಿ: ಪ್ರೀತಿ ಅಂಧವಾಗಿದೆ ಎನ್ನಲಾಗುತ್ತದೆ.ಪ್ರೀತಿಸುವ ವ್ಯಕ್ತಿಗಳು ಏನು ಬೇಕಾದರೂ ಮಾಡಬಲ್ಲರು. ಇದರ ಜೀವಂತ ಉದಾಹರಣೆ ಇತ್ತೀಚೆಗೆ ಸಿಕ್ಕಿದೆ. ಹರಿಯಾಣದ ಯಮುನಾನಗರದ ಯುವಕನನ್ನು ಭೇಟಿಯಾಗಲು ಬ್ರೆಝಿಲ್‍ನಿಂದ ಓರ್ವ ಯುವತಿ ತನ್ನೆಲ್ಲವನ್ನು ತೊರೆದು ಭಾರತಕ್ಕೆ ಬಂದಿದ್ದಾಳೆ. ಇಬ್ಬರೂ  ಮೊದಲ ಭೇಟಿ  ಫೇಸ್‍ಬುಕ್‍ನಲ್ಲಿ ಆಗಿದ್ದರು. ನಂತರ ಚಾಟ್ ಆರಂಭವಾಗಿತ್ತು. ಕ್ರಮೇಣದ ಅದು ಪ್ರೇಮದಲ್ಲಿ ಬದಲಾಯಿತು. ತನ್ನ ಪ್ರೇಮಿಯನ್ನು ಪಡೆಯುವುದಕ್ಕಾಗಿ ಬ್ರೆಝೆಲಿನ ಮಾರ್ಥ  ದಿಲ್ಲಿಗೆ ಬಂದಳು.

ಮಾರ್ಥಳಿಗೆ ಮದುವೆಯಾಗಿದೆ. ಇಬ್ಬರು  ಮಕ್ಕಳ ತಾಯಿ ಕೂಡಾ ಆಗಿದ್ದಾಳೆ. ಅವಳು ತಮ್ಮ ಪತಿಗೆ ತಿಳಿಸದೆ ಟೂರಿಸ್ಟ್ ವೀಸಾದಲ್ಲಿ ದಿಲ್ಲಿಗೆ  ಬಂದಿದ್ದಾಳೆ. ಮತ್ತು ತನ್ನ ಪ್ರೇಮಿ ಬಳಿಗೆ ತಲುಪಿದ್ದಾಳೆ. ಅತ್ತ ಮಾರ್ಥ ತುಂಬಾ ಹೊತ್ತು ಮನೆಗೆ ಬರದ್ದು  ಕಂಡು ಪತಿ ಪೊಲೀಸರಿಗೆ ದೂರು ನೀಡಿದ್ದರು. ನಂತರ ಬ್ರೆಝಿಲ್‍ನ ಪೊಲೀಸರು ಅವಳನ್ನುಹುಡುಕ ತೊಡಗಿದ್ದರು. ಆಗ ಅವರಿಗೆ ಆಶ್ಚರ್ಯದ ವಿಷಯ ಗೊತ್ತಾಯಿತು. ಪೊಲೀಸರಿಗೆ ಟೂರಿಸ್ಟ್ ವೀಸಾದಲ್ಲಿ ಮಾರ್ಥ ಭಾರತಕ್ಕೆ ಬಂದಿರುವುದು ಗೊತ್ತಾಯಿತು. ಬ್ರೆಝಿಲ್ ಎಂಬೆಸಿಯನ್ನು ಸಂಪರ್ಕಿಸಿ ಅವಳಿರುವ ಲೊಕೇಶನ್  ಪತ್ತೆಮಾಡಲಾಯಿತು.

ಆದರೆ,ದಿಲ್ಲಿಯ ತುಗಲಕ್ ರೋಡ್ ಠಾಣೆ ವ್ಯಾಪ್ತಿಯಲ್ಲಿ ಲೊಕೇಶನ್ ಗೊತ್ತಾಯಿತು. ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಲಾಯಿತು.  ದಿಲ್ಲಿ ಪೊಲೀಸರುಹುಡುಕಲು ತೊಡಗಿದರು. ಸಾಡೌರ್ ಎನ್ನುವಲ್ಲಿ ಮಾರ್ಥ  ಇರುವುದು ಗೊತ್ತಾಯಿತು. ಗುರುವಾರ ರಾತ್ರೆ ದಿಲ್ಲಿ ಪೊಲೀಸ್ ಬ್ರೆಝಿಲ್ ಎಂಬೆಸಿಯ ಅಧಿಕಾರಿಗಳು  ಸಡೌರ್ ಮಾರ್ಥಳೊಂದಿಗೆ ಭೇಟಿಯಾದರು. ಮಾರ್ಥಾ ತಾನು ಅನಂತನನ್ನು ಪ್ರೀತಿಸುವುದನ್ನು ತಿಳಿಸಿದ್ದಾಳೆ. ಮತ್ತು ಅವನನ್ನುಭೇಟಿಯಾಗಲು ಅವಳು ಭಾರತಕ್ಕೆ ಬಂದಿದ್ದಾಳೆ. ಅನಂತ್ ಕೂಡಾ ಅವಳನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಅವಳಿಗಾಗಿ ಬ್ರೆಝಿಲ್‍ಗೆ ಹೋಗಲು ಸಿದ್ಧ ಎಂದು ತಿಳಿಸಿದ್ದಾನೆ. ಅನಂತ್‍ನ ಪ್ರೀತಿಯ ಮುಂದೆ ಅವರ ಕುಟುಂಬ ತಲೆತಗ್ಗಿಸುವಂತಾಗಿದೆ.

ರಾತ್ರೊ ರಾತ್ರಿ ಸ್ವಾರ್ ಆದ ಹಳ್ಳಿ ಹುಡುಗಿ ಬಗ್ಗೆ ನಿಮಗೆಷ್ಟು ಗೊತ್ತು ?

ನೋಡಲೇಬೇಕಾದ ಮನುಷ್ಯ ಮೆದುಳಿನ ಲೈವ್ ವೀಡಿಯೊ !