,

Love

  ತಂದೆಯಿಂದಲೆ ಆ್ಯಾಸಿಡ್ ದಾಳಿಗೆ ತುತ್ತಾದವಳ ಮನ ಕಲುಕುವ, ಕಲ್ಲನ್ನೂ ನೀರಾಗಿಸುವ ಕಥೆ

 

ಆಸಿಡ್ ದಾಳಿಯ ಬಲಿಪಶುವನ್ನು ಸಮಾಜ ಬಹಿಷ್ಕೃತರಂತೆ ನೋಡುತ್ತದೆ. ಅಥವಾ ಅವರ ಬಗ್ಗೆ ಸಹಾನುಭೂತಿ ದಯೆಯಿಂದ ನೋಡಲಾಗುತ್ತದೆ. ಆದರೆ ಬಲಿಪಶುಗಳ ಜಾಗದಲ್ಲಿನಿಂತು ನಾವು  ಯೋಚಿಸಬೇಕಾದ ಅಗತ್ಯವಿದೆ.

ಫೇಸ್‍ಬುಕ್‍ನಲ್ಲಿ ಆಸಿಡ್‍ದಾಳಿಯ ಬಲಿಪಶುವೊಬ್ಬರ ಕತೆ ಬಂದಿದೆ. ಅವರೊಂದಿಗೆ ಆದ ಆ ಹಿಂಸೆಯನ್ನು ಯಾರೂ ಕಲ್ಪನೆ ಕೂಡಾ ಮಾಡಲು ಸಾಧ್ಯವಿಲ್ಲ. 23 ವರ್ಷದ ಶಬ್ಬೊಳ ಅಪರಾಧಿ ಬಹಿರಂಗವಾಗಿ ಅಡ್ಡಾಡುತ್ತಿದ್ದಾನೆ.

ನನಗೆ ಎರಡು ವರ್ಷ ಆಗಿದ್ದಾಗ ನನ್ನ ತಂದೆ ಕೋಪದಲ್ಲಿ ತಾಯಿ ಮೇಲೆ ಅಸಿಡ್ ಎರಚಿದ್ದರು. ಆಗ ನಾನು ತಾಯಿಯ ಮಡಿಲಲ್ಲಿದ. ಅರ್ಧ ಅಸಿಡ್ ತನ್ನ ಮೇಲೆ  ಬಿತ್ತು.ಡಾಕ್ಟರ್ ಗೋರೆ ನನಗೆ ಈ ಕಥೆತಿಳಿಸಿದರು.ನಾನು ಎಷ್ಟುಚಿಕ್ಕವಳಾಗಿದ್ದೆ ಎಂದರೆ ನನಗೆ ಆ ಘಟನೆ ನೆನಪಿಲ್ಲ. ಈ ಘಟನೆಯಲ್ಲಿ ತಾನು ತನ್ನ ತಾಯಿಯನ್ನುಕಳೆದುಕೊಂಡಿರುವುದು ನೆನಪಿದೆ. ನನ್ನ ಅವಸ್ಥೇ ನೋಡಿ ನನ್ನ ಸಂಬಂಧಿಕರುನನ್ನನ್ನು ಹತ್ತಿರ ಸೇರಿಸಲಿಲ್ಲ. ನನ್ನ ತಂದೆ ನಗರ ಬಿಟ್ಟು ಓಡಿಹೋದರು ನಾನು ಅನಾಥಾಲಯದಲ್ಲಿ ಬೆಳೆದೆ.

ನನಗೆ ಅನಾಥಾಲಯದಲ್ಲಿ ಭಾರೀ ಪ್ರೀತಿ ಸಿಕ್ಕಿದೆ. ಬಾಲ್ಯ ಬಹಳ ಉತ್ತಮವಾಗಿ ಕಳೆಯಿತು. ಆದರೆ ವಾಸ್ತವಿಕ ಜಗತ್ತಿನಲ್ಲಿ ಸ್ವಲ್ಪ ಕಷ್ಟವಿದೆ. ನಾನು ಕಾಲೇಜಿನಲ್ಲಿ ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುತ್ತೇನೆ. ಒಬ್ಬಳೇ ಲಂಚ್ ಮಾಡುತ್ತೇನೆ. ನನಗೆ ಯಾರೂ ಗೆಳೆಯರಿಲ್ಲ. ನನಗೆ ಯಾವಾಗಲೂ ಎಲ್ಲರೂ ನನ್ನನ್ನೆ ದುರುಗುಟ್ಟಿ ನೋಡುತ್ತಿದ್ದಾರೆ ಎಂದು ಅನಿಸುತ್ತದೆ.

ಆದರೆ ಇದೆಲ್ಲ ನನ್ನ ಕೇವಲ ಭಾವನೆಯಾಗಿತ್ತು. ಕೆಲವೇ ದಿವಸಗಳಲ್ಲಿ ನನಗೆ ತುಂಬ ಗೆಳೆಯರು ಸಿಕ್ಕರು. ಅವರೊಂದಿಗೆ ಇದ್ದ  ತುಂಬ ನೆನಪುಗಳು ನನ್ನಲ್ಲಿವೆ. ಒಂದುಸಾರಿ ನಾವು ಓರ್ವ ಗೆಳತಿಯ ಮನೆಯಲ್ಲಿ ಉಳಿದುಕೊಂಡಿದ್ದೆವು. ನಾನು ನಿದ್ರಿಸಿದ್ದೆ. ಆಸಿಡ್ ಅಟಾಕ್‍ನಿಂದಾಗಿನ ನ್ನ ರೆಪ್ಪೆಗಳು ಮುಚ್ಚುತ್ತಿರಲಿಲ್ಲ. ನನ್ನ ಗೆಳೆಯರು ನಾನು ಎಚ್ಚರದಲ್ಲಿದ್ದೇನೆ ಎಂದು ಭಾವಿಸಿ ಗೆಳತಿಯರು ಮಾತಾಡಿಕೊಳ್ಳುತ್ತಿದ್ದರು. ಆದರೆ ಅವರಿಗೆ ಸ್ವಲ್ಪ  ಸಮಯದ ಬಳಿಕ ಗೊತ್ತಾಯಿತು ನಾನು ನಿದ್ರಿಸಿದ್ದೇನೆ ಎಂದು .ಈ ಘಟನೆಯನ್ನು ನೆನೆದು ನಾವು ಇಂದು ಕೂಡಾ ನಗುತ್ತಿದ್ದೇವೆ. ಸ್ವಲ್ಪ  ಯೋಚಿಸಿರಿ ನನಗೆ ಕ್ಲಾಸಿನಲ್ಲಿ ನಿದ್ರಿಸುವುದು ಎಷ್ಟು ಸುಲಭ ಇದೆಯಲ್ವಾ. ನನಗೆ ಅನಿಸುತ್ತದೆ ನನ್ನಲ್ಲಿಸೂಪರ್ ಪವರ್ ಇದೆ ಎಂದು!

ನನ್ನ ಗೆಳೆಯರು ಕೆಲವೊಮ್ಮೆ ಕೇಳುತ್ತಾರೆ. ನೀನು ನಿನ್ನ ತಂದೆಯನ್ನು ದ್ವೇಷಿಸುತ್ತೀಯಾ. ಅವರ ಮೇಲೆ ಪ್ರತಿಕಾರ ಮಾಡಲು ಬಯಸುತ್ತೀಯಾ . ನಾನು ಯಾವಾಗಲೂ ಇಲ್ಲವೆಂದು ಹೇಳುವೆ. ದ್ವೇಷಕ್ಕೆ ನನ್ನ ಜೀವನದಲ್ಲಿ ಜಾಗವಿಲ್ಲ. ನನ್ನ ಹಿಂದಿನ ನೌಕರಿಯಿಂದ ನನ್ನ ಲುಕ್ಸ್‍ನ ಕಾರಣ ಮತ್ಜತು ಚೆಕ್‍ಅಪ್‍ಗಾಗಿ ಹೆಚ್ಚು ರಜೆ ಮಾಡಿದ ಕಾರಣದಿಂದ ಕೆಲಸದಿಂದ ತೆಗೆಯಲಾಯಿತು. ನಂತರ ಸಜಾಸ್ ಫೌಂಡೇಶನ್ ನನ್ನನ್ನು ನೋಡಿಕೊಳ್ಲೂತ್ತಿದೆ.ನನಗೆ ವಿಶ್ವಾಸವಿದೆನನಗೆ ಬೇರೆ ಕೆಲಸ ಸಿಗಬಹುದು.

ನನಗೆ ಹೆಚ್ಚು ಬೇಸರದ ವಿಷಯವೆಂದರೆ ಜನರು ನನ್ನನ್ನುಆಸಿಡ್ ಅಟಾಕ್ ಬಲಿಪಶು ಎಂದು ಹೇಳುವುದಾಗಿದೆ. ನಾನ ಬಲಿಪಶು ಆಗಲಿ ಸಂತ್ರಸ್ತೆಯಾಗಲಿ ಅಲ್ಲ. ಬೇರೆಯವರಂತೆ ನಾರ್ಮಲ್ ಆಗಿದ್ದೇನೆ. ನನ್ನದೇಹದಲ್ಲಿ ಬಹಳ ಕಲೆಗಳಿವೆ. ಅದರೆ ಭವಿಷ್ಯದಕುರಿತು ಆಶಾವಾದಿಯಾಗಿದ್ದೇನೆ. ನನಗೂ ಕನಸುಗಳಿವೆ. ಜಿವನಕ್ಕೆ ಉದ್ದೇಶವಿದೆ. ನಾನು ಜಗತ್ತಿನಲ್ಲಿ ನನ್ನ ವರ್ಚಸ್ಸನ್ನು ಬಿಟ್ಟುಹೋಗಲು ಬಯಸುತ್ತೇನೆ.

ಶಬ್ಬೊ ಈಗ ಸ್ಟೇಜ್ ಡಿಸೈನಿಂಗ್ ಮತ್ತು ಕಾಸ್ಟ್ಯೂಮ್ ಸ್ಟೈಲಿಂಗ್‍ನಲ್ಲಿ ಆಸಕ್ತಿ ಇದೆ. ಸರ್ಜರಿಯಿಂದ ಅವಳ  ರೆಪ್ಪೆ, ಮೂಗು ಇತ್ಯಾದಿ ಪುನಃ ಮಾಡಲು ಸಾಧ್ಯವಿದೆ.  ಅವಳು ಮುಂದಕ್ಕೆ ಓದಿ ಸ್ವಂತ ಕಾಲಿನಲ್ಲಿ ನಿಲ್ಲಲು  ಬಯಸುತ್ತಿದ್ದಾಳೆ.

ತನ್ನನ್ನು ನೋಡಿ ಹಸ್ತಮೈಥುನ ಮಾಡುತ್ತಿದ್ದ ವ್ಯಕ್ತಿಗೆ ಯುವತಿ ಮಾಡಿದ್ದೇನು ನೋಡಿ!

ಇನ್ನು ಮನೆಯಲ್ಲೇ ಕೂತುಕೊಂಡೇ ಮೊಬೈಲ್ಗೆ ಆಧಾರ್ ಲಿಂಕ್ ಮಾಡಿ..