,

Win

11 ಲಕ್ಷಕ್ಕೂ ಹೆಚ್ಚು ಪ್ಯಾನ್ ಕಾರ್ಡ್ ರದ್ದು; ನಿಮ್ಮ ಪಾನ್ ಕಾರ್ಡ್ Status ನೋಡಲು ಇಲ್ಲಿ ಕ್ಲಿಕ್ ಮಾಡಿ  

ಹಣಕಾಸು ರಾಜ್ಯ ಸಚಿವ ಸಂತೋಷ ಕುಮಾರ್ ಗಂಗಾವರ್‌ರು ಸಂಸತ್ತಿಗೆ ಲಿಖಿತ ಪ್ರಶ್ನೆಗೆ ಉತ್ತರಿಸಿ ಒಬ್ಬವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹಂಚಲಾಗಿತ್ತು. ಜುಲೈ 27ರವರೆಗೆ 11, 44, 211 ಇಂತಹ ಪಾನ್‌ಕಾರ್ಡ್‌ಗಳನ್ನು ಗುರುತಿಸಿ ರದ್ದು ಪಡಿಸಲಾಗಿದೆ. ಎಂದು ತಿಳಿಸಿದ್ದಾರೆ. ಒಬ್ಬನೆ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ನೀಡಿದ್ದು ಪತ್ತೆಯಾಗಿದೆ. ಒಂದೊ ಅದನ್ನು ರದ್ದುಪಡಿಸಲಾಗಿದೆ ಅಥವಾ ರದ್ದು ಪಡಿಸಲಾಗಿದೆ.

 

ಪಾನ್ ಕಾರ್ಡ್ ಹಂಚಿಕೆ ಕಾನೂನು ಪ್ರಕಾರ ಒಬ್ಬ ವ್ಯಕ್ತಿಗೆ ಒಂದು ಪಾನ್ ಕಾರ್ಡ್ ಮಾತ್ರ ಸಿಗುತ್ತದೆ.

 

ಹೀಗಿರುವಾಗ ಹಲವು ಜನರಲ್ಲಿ ರದ್ದಾದ ಪಾನ್ ಕಾರ್ಡ್‌ನಲ್ಲಿ ತಮ್ಮದೂ ಸೇರಿರಬಹುದೇ ಎನ್ನುವ ಸಂಶಯ ಹುಟ್ಟಿಕೊಳ್ಳಬಹುದು. ಮೊದಲು ಆದಾಯ ತೆರಿಗೆ ವೆಬ್‌ಸೈಟ್‌ಗೆ ಕ್ಲಿಕ್ ಮಾಡಿರಿ .ನಂತರ ವೆಬ್‌ಸೈಟ್‌ನಲ್ಲಿ ನೋ ಯುವರ್ ಪಾನ್ (Know you PAN )ಎಂದು ಬರೆದಿರುತ್ತದೆ.

 

https://incometaxindiaefiling.gov.in/e-Filing/Services/KnowYourPanLinkGS.html ಇದಕ್ಕೆ ಕ್ಲಿಕ್ ಮಾಡಿ. ಇದರಲ್ಲಿ ಯಾವುದೇ ರೀತಿಯ ಲಾಗ್ ಇನ್ ಮಾಡುವ ಅಗತ್ಯವಿರುವುದಿಲ್ಲ.    ಅಲ್ಲಿ ಫಾಮ್ ಸಿಗುತ್ತದೆ. ಈ ಫಾರ್ಮ್‌ನಲ್ಲಿ ನಿಮ್ಮಮಧ್ಯ ಹೆಸರು. ಉಪನಾಮ ಮತ್ತು ಮೊದಲ ಹೆಸರನ್ನು ತುಂಬಬೇಕು. ಇದು ಪಾನ್ ಕಾರ್ಡ್‌ನಲ್ಲಿ ಬರೆದಿರುವ ರೀತಿಯಲ್ಲಿಯೇ ಆಗಿರಬೇಕು. ಮಧ್ಯ ಹೆಸರು ಇಲ್ಲದಿದ್ದರೆ ಈ ಕಾಲಮ್‌ನ್ನು ಹಾಗೆಯೆ ಬಿಟ್ಟು ಬಿಡಿರಿ. ಪಾನ್ ಕಾರ್ಡ್‌ಗೆ ನೀಡಿದ ಹುಟ್ಟಿದ ದಿನಾಂಕ ಹಾಕಿರಿ. ಹೀಗೆ ನಿಮ್ಮ ಪಾನ್ ಕಾರ್ಡ್ ವ್ಯಾಲಿಡಿಟಿ ಚೆಕ್‌ಮಾಡಿಕೊಳ್ಳಬಹುದಾಗಿದೆ.

ಎಚ್ಚರಿಕೆ! ವೈಟ್‌ಗೊಲ್ಡ್‌ ಮತ್ತಿತರ ನಕಲಿ ಆಭರಣ ಧರಿಸುವವರು ಇದನ್ನೊಮ್ಮೆ ಓದಿ

ಈ ‘ಸಾಮಾನ್ಯ ವ್ಯಕ್ತಿ’ಯನ್ನು ಆಲಂಗಿಸಿದ ಧೋನಿ; ಯಾರಿವರು ?