, ,

11 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ; ವಾಸ್ತವ ವರದಿ ಇಲ್ಲಿದೆ !

ಒಬ್ಬಳು ಮಹಿಳೆಗೆ 11 ಮಕ್ಕಳು ಹುಟ್ಟಿದವು! ಸತ್ಯವೇನು ನೀವೆ ವರದಿ ಓದಿ ನಿರ್ಧರಿಸಬಿಡಿರಿ
ಕೆಲವು ಸಮಯದ ಹಿಂದೆ ಒಬ್ಬಳು ಮಹಿಳೆ ಹನ್ನೊಂದು ಮಕ್ಕಳನ್ನು ಹೆತ್ತಿದ್ದಾರೆ ಎಂದು ಸುದ್ದಿ ಪ್ರಸಾರವಾಗಿತ್ತು. ಕೆಲವರು ಈ ಮಹಿಳೆ ಭಾರತದವಳು ಎಂದರೆ ಕೆಲವರು ಇವಳು ಇಂಡಿಯಾನಾದ ಮಹಿಳೆ ಎಂದಿದ್ದರು.  ಈ ಕುರಿತು ಇಂಟರ್‍ನೆಟ್ ಚರ್ಚೆ ಹುಟ್ಟಿಕೊಂಡಿತ್ತು. ಆದರೆ ಇದರ ವಾಸ್ತವ ಸಂಗತಿ ಗೊತ್ತಾಗಿರಲಿಲ್ಲ.
ಮೊದಲು  ನೀವು ಮೇಲೆ ಇರುವ ಫೋಟೊ ನೋಡಿರಿ. ನಿಮಗೆ ಈ ಫೋಟೊ ದ ಬಗ್ಗೆ ಗೊತ್ತಾಗಿರಲಿಕ್ಕಿಲ್ಲ ಅಲ್ಲವೇ. ಆದರೆ ಈ ಫೋಟೊ ಸರಿಯಾದುದು ಆದರೆ ಈ ಫೋಟೊದ ಜೊತೆ ನೀಡಿದ ಮಾಹಿತಿ ತಪ್ಪಾಗಿತ್ತು. 21St Century Hospitals Private Limited & Test Tube Baby Centre ಗೆ ಫೋನ್ ಮಾಡಿದಾಗ ಈ ಮಹಿಳೆ ಹನ್ನೊಂದು ಮಕ್ಕಳನ್ನು ಹೆತ್ತಿದ್ದಾರಾ ಎಂದು ಕೇಳಿದಾಗ ಅದನ್ನು ಅಲ್ಲಿನ ವೈದ್ಯರು ನಿರಾಕರಿಸಿದರು.  ಈ ಎಲ್ಲ ಮಕ್ಕಳನ್ನು ಬೇರೆ ಬೇರೆ ತಾಯಿಯರು ಹೆತ್ತಿದ್ದರು. ಮತ್ತು ಹನ್ನೊಂದು ಮಕ್ಕಳನ್ನು ಒಬ್ಬಳು ಮಹಿಳೆ ಹೆರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ದೊಡ್ಡ ಹೊಟ್ಟೆಯ ಮಹಿಳೆಯ ಫೋಟೊವನ್ನು ಕೂಡಾ ಹಾಕಲಾಗಿತ್ತು. ಆದರೆ ಈ ಮಹಿಳೆ ಭಾರತೀಯಳಲ್ಲ. ಮೆಕ್ಸಿಕೊದ ಮಹಿಳೆ. ಈ ಮಹಿಳೆಯ ಹೊಟ್ಟೆಯಲ್ಲಿ ಶಿಶುಗಳಲ್ಲ ಬದಲಾಗಿ ಟ್ಯೂಮರ್ ಇತ್ತು.


ನಂತರ ಹನ್ನೊಂದು ಮಕ್ಕಳು ಭಾರತದಲ್ಲಿ ಹುಟ್ಟಿಲ್ಲ ಇಂಡಿಯಾನದಲ್ಲಿ ಹುಟ್ಟಿದ್ದಾರೆ ಎಂದು ಹೇಳಲಾಗಿತ್ತು.  ಆದರೆ ಅಲ್ಲಿ ಇಂತಹ ಯಾವ ಪ್ರಕರಣವೂ ಇರಲಿಲ್ಲ. ಹೀಗೆ ಹುಟ್ಟಿದ ಮಕ್ಕಳ ಕುರಿತು ವೀಕಿಪೀಡಿಯದಲ್ಲಿ ಹುಡುಕಿದಾಗ 1971ರಲ್ಲಿ ಒಂದು ಮಹಿಳೆ ಒಂಬತ್ತು ಮಕ್ಕಳನ್ನು ಹೆತ್ತ ಘಟನೆಯ ಮಾಹಿತಿ ಸಿಕ್ಕಿತು. ನಂತರ ಮಲೇಶಿಯದಲ್ಲಿ 1999ರಲ್ಲಿ ಒಂಬತ್ತು ಮಕ್ಕಳನ್ನು ಹೆತ್ತ ಘಟನೆ ವರದಿಯಾಗಿತ್ತು. ಆದರೆ ಈ ಮಕ್ಕಳು ಹುಟ್ಟಿದ ಕೆಲವೇ ಘಂಟೆಗಳಲ್ಲಿ ಮೃತಪಟ್ಟಿದ್ದವು. ನಾವು  ಏನು ಹೇಳುವುದು ಅಂದರೆ, ಇಂಟರ್‍ನೆಟ್‍ನಲ್ಲಿ ಹಾಕಿದ ಎಲ್ಲ ಸುದ್ದಿಯೂ ಸತ್ಯವಾಗಿರುವುದಿಲ್ಲ ಎಂದಾಗಿದೆ.

ಸುಂದರ ಮಹಿಳೆಯರನ್ನು ನೋಡಿದರೆ ಕೆಲವರು ಹೆದರುವುದೇಕೆ ಗೊತ್ತೇ  

ಈ ಜೀವಿಯ ಆಕಾರ ‘ಅದರಂತೆ’ ಇದೆ!