,

Angry Cute Geeky LOL Love Win WTF

ಹೊಲದಲ್ಲಿ  2000ವರ್ಷ ಹಿಂದಿನ  ನಾಣ್ಯಗಳು ಪತ್ತೆ !; ಇದರ ಮೌಲ್ಯ ಎಷ್ಟುಕೋಟಿ ಗೊತ್ತಾ ?

ಇಂಗ್ಲೆಂಡ್‍ನ ಓರ್ವ ಟ್ರೆಜರ್ ಹಂಟರ್ ಕೋಟ್ಯಂತರ ರೂಪಾಯಿಮೌಲ್ಯದ ಖಜಾನೆಯನ್ನು ಕಂಡು ಹುಡುಕಿದ್ದಾನೆ. ಬ್ರಿಡ್‍ಫೋರ್ಟ್‍ಲ್ಲಿ 35ವರ್ಷದ ಮೈಕ್‍ಸ್ಮೆಲ್ ಓರ್ವ ರೈತನ ಹೊಲದಲ್ಲಿ ರೋಮನ್ ಸಾಮ್ರಾಜ್ಯದ 2 ಸಾವಿರ ವರ್ಷಕ್ಕಿಂತಲೂ ಹಳೆಯ ಚಿನ್ನದ ನಾಣ್ಯಗಳನ್ನು ಕಂಡು ಹುಡುಕಿದ್ದಾನೆ.

ಮೈಕ್‍ಗೆ ಈ ಹೊಲದಲ್ಲಿ ಆರು ನೂರು ನಾಣ್ಯ ಸಿಕ್ಕಿದೆ. ಎರಡು ಕೋಟಿ ರೂಪಾಯಿಗೂ ಮೀರಿದೆ ಎಂದು ಇದರ ಮೌಲ್ಯವನ್ನು ಲೆಕ್ಕಹಾಕಲಾಗಿದೆ. ಇದರ ಸರಿಯಾದ ಮೌಲ್ಯಮಾಪನ ಇನ್ನಷ್ಟೇ ಆಗಬೇಕಾಗಿದೆ.ನಂತರ ಇದನ್ನುಮ್ಯೂಝಿಯಂಗೆ ಕಳುಹಿಸಲಾಗುವುದು.

ಮೈಕ್‍ಗೆ ತಮ್ಮ ಗೆಳೆಯರ ಜೊತೆ ಖಜಾನೆ ಹುಡುಕಲು ಹೊರಟಿದ್ದಾಗ ರೈತನ ಹೊಲದಲ್ಲಿ ತಿರುಗಾಡುತ್ತಿದ್ದಾಗ ಮೆಟಲ್ ಡಿಟೆಕ್ಟರ್‍ನ ಸಹಾಯದಿಂದ ಹಳೆಯ ನಾಣ್ಯಗಳು ಸಿಕ್ಕಿವೆ. ಅದರ ಸದ್ದು ಆಲಿಸಿದ ಆತ ನಂತರ ಅಗೆದಾಗ ಕೆಲವು ನಾಣ್ಯಗಳು ಸಿಕ್ಕವು, ಇದರ ಕುರಿತು ಆತ ಅಧಿಕಾರಿಗಳಿಗೆ ತಿಳಿಸಿದ್ದಾನೆ.

ಅಧಿಕಾರಿಗಳು ಬಂದು ಹೊಲವನ್ನು ಸೀಲ್ ಮಾಡಿದರು. ನಂತರ ನಾಣ್ಯ ಗುರುತಿಸುವ ತಜ್ಞನನ್ನು ಕರೆಸಿದರು. ಇದು ಸಾವಿರಾರು ವರ್ಷ ಹಿಂದಿನ ನಾಣ್ಯಗಳೆಂದು ಮತ್ತು ರೋಮನ್ ಸಾಮ್ರಾಜ್ಯದ ನಾಣ್ಯಗಳು ಎಂದು ಒಂದುನಾಣ್ಯಕ್ಕೆ 80ಸಾವಿರ ರೂಪಾಯಿ ಬೆಲೆ ಇದೆಯೆಂದು ಆತ ತಿಳಿಸಿದ್ದಾನೆ. ಇದರಲ್ಲಿ ಅರ್ಧ ದಷ್ಟು ಹಣ ಹೊಲದ ಮಾಲಿಕನಿಗೆ ಕೊಡಬೇಕಾಗುತ್ತದೆ.

ಭಾರತದ ಗುರುಕುಲ ಪದ್ಧತಿಯನ್ನು ಅಳವಡಿಸಿದ ಫಿನ್ ಲ್ಯಾಂಡ್ ; ಯಾಕೆ ಗೊತ್ತಾ ?

ಈ ಚಿತ್ರದಲ್ಲಿರುವ ಹಾವನ್ನು ಕಂಡುಹಿಡಿಯಬಲ್ಲಿರಾ ?