,

ಹೂಸು ವಾಸನೆಗೆ ಬೊಬ್ಬೆ ಹೊಡೆದ ಯುವತಿ! : ಪೊಲೀಸ್ ಬಂತು… ಮುಂದೇನಾಯ್ತು ?

 

ಕೆಲವೊಮ್ಮೆಪೊಲೀಸರು ಇಂಥ ಪರಿಸ್ಥಿತಿಯನ್ನು ಕೂಡಾ ಎದುರಿಸಬೇಕಾಗಿ ಬರುತ್ತದೆ. ಪೊಲೀಸಧಿಕಾರಿ ಗೃಹ ಕಲಹ ದೂರು ಬಂದ್ದರಿಂದ ದೌಡಾಯಿಸಿ  ಅಪಾರ್ಟ್‍ಮೆಂಟ್‍ಗೆ ನುಗ್ಗಿದಾಗ ಬೇಸ್ತುಬೀಳುವ ಪ್ರಸಂಗ ಎದುರಿಗಿತ್ತು. ಯಾಕೆಂದರೆ ಅಲ್ಲೊಬ್ಬ ಯುವತಿ ತನ್ನ ಬಾಯ್‍ಫ್ರೆಂಡ್ ದುರ್ವಾಸನೆಯ ಊಸು ಬಿಡುತ್ತಿದ್ದಾನೆಂದು ಬೊಬ್ಬೆ ಹೊಡೆಯುತ್ತಿದ್ದಳು. ನಗಬೇಕೋ,ಅಳಬೇಕೋ ಅಥವಾ ದೂರು ನೀಡಿದವನ ಬೆಂಡೆತ್ತಬೇಕೋ ಎಂದು ಅರಿಯದೆ ಆ ಅಧಿಕಾರಿ ಗರಬಡಿದವನಂತೆ ಕೆಲವು ನಿಮಿಷ ನಿಂತೇ ಇದ್ದರು.

ಕ್ರೇಜಿ ನ್ಯೂಸ್ 24 ಚ್ಯಾನೆಲ್ ವರದಿಯ ಪ್ರಕಾರ ಘಟನೆ ನಡೆದ ದಿನ ಪೊಲೀಸಧಿಕಾರಿಗೆ ಒಂದು ಫೋನ್ ಕರೆ ಬಂದಿತ್ತು. ಪಕ್ಕದ ಪ್ಲಾಟ್‍ನಲ್ಲಿ ಗೃಹಹಿಂಸೆ ನಡೆಯುತ್ತಿದೆ ಕೂಡಲೇ ಬನ್ನಿ ಎನ್ನಲಾಗಿತ್ತು.

ಪೊಲೀಸಧಿಕಾರಿ ಇನ್ನೇನಪ್ಪ ಕೊಲೆಗಿಲೆ ನಡೆಯಿತೊ ಎಂದು ಧಾವಂತದಿಂದ ಅಪಾರ್ಟ್‍ಗೆ ಬಂದರು.
ಫೋನ್ ಬಂದಲ್ಲಿಗೆ ಹೋಗಿ ನೋಡಿದಾಗ ಅಲ್ಲಿನ ವಿಷಯ ಏನು ಗೊತ್ತೇ? ಯುವಕನೊಬ್ಬ ಕೆಟ್ಟ ಕೆಟ್ಟ ಊಸು ಬಿಡುತ್ತಿದ್ದ. ಅದರ ದುರ್ನಾತ ತಾಳಲಾಗದೆ ಆತನ ಗರ್ಲ್ ಫ್ರೆಂಡ್ ಮೂಗು ಮತ್ತು ಬಾಯಿಗೆ ಕೈಯಿಡುತ್ತ ಬೊಬ್ಬೆ ಹೊಡೆಯುತ್ತಿದ್ದಳು.

ವಿಷಯ ಏನೆಂದು ಗೊತ್ತಾಗದೆ ಸಮೀಪದ ಅಪಾರ್ಟ್‍ಮೆಂಟ್ ನ ವ್ಯಕ್ತಿ ಏನೋ ಹಿಂಸೆ ನಡೆಯುತ್ತಿದೆ ಎಂದು ಪೊಲೀಸರಿಗೆ ಫೋನ್ ಮಾಡಿದ್ದನು.
ಪೊಲೀಸರು ಬಂದು ಅಪಾರ್ಟ್ ಮೆಂಟ್ ಬಾಗಿಲು ಬಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು.

ಪೊಲೀಸರು ಯುವತಿಗೆ ನೀನೇಕೆ ಬೊಬ್ಬೆ ಹೊಡೆದೆ ಎಂದು ಕೇಳಿದಾಗ ತನ್ನ ಬಾಯ್‍ಫ್ರೆಂಡ್‍ನತ್ತ ಬೆರಳು ತೋರಿಸಿ ಅವನು ನಾತಬರುವ ಊಸು ಬಿಡುತ್ತಾನೆ ಎಂದು ಬಿಟ್ಟಿದ್ದಾಳೆ. ಪೊಲೀಸರಿಗೆ ಇದು ಕೇಳಿ ನಗಬೇಕೋ ಅಳಬೇಕೋ ಗೊತ್ತಾಗಿರಲಿಲ್ಲ. ನಂತರ ಪೊಲೀಸರು ಅಲ್ಲಿಂದ ಹೊರಟು ಹೋದರು.

ಕಾಲೇಜು ದಾರಿ ಮಧ್ಯೆ ಅವರಿಬ್ಬರು ಮಾಡಿದ್ದೇನು ?

ನಿಮ್ಮ ಕಂಕುಳ ಕಪ್ಪಗಿದೆಯೇ? ಇಲ್ಲಿದೆ ಪರಿಹಾರ!