ಹೊಸದಿಲ್ಲಿ,ಜು.29: ನೀವು ಹುಡುಗಿಯರ ಬಟ್ಟೆಗಳಲ್ಲಿ ಜೇಬು ಇಲ್ಲದಿರುವುದನ್ನು ನೀವು ನೋಡಿರಬಹುದು. ಪುರುಷರಿಗೆ ಹೋಲಿಸಿದರೆ ಮಹಿಳೆಯರ ಬಟ್ಟೆ ಆ ರೀತಿ ಇರುತ್ತದೆ. ಆದರೆ ಇದಕ್ಕೆ ಕಾರಣ ಏನು ಗೊತ್ತಾ? ಆದರೆ ಇದು ಕಾಕತಾಳೀಯ ವಿಚಾರವಲ್ಲ. ಬದಲಾಗಿ ಮಾನಸಿಕತೆ ಹಾಗಿದೆ.
1840ರಲ್ಲಿ ಫ್ಯಾಶನ್ನ ಒಂದು ಕ್ರಾಂತಿಕಾರಿ ದಶಕ ಎನ್ನಲಾಗುತ್ತದೆ. ಆ ಸಮಯದಲ್ಲಿ ಫ್ಯಾಶನ್ ಡಿಸೈನರ್ಗಳು ಮಹಿಳೆಯರಿಗೆ ದೊಡ್ಡ ಕಾಲರ್ ಸಪೂರ ಸೊಂಟದ ಸ್ಕರ್ಟನ್ನು ವಿನ್ಯಾಸ ಗೊಳಿಸಿದ್ದರು.
ಇದು ಹೀಗೆ ಮುಂದುವರಿದು ಮಹಿಳೆಯರ ಫ್ಯಾಶನ್ನ ತಳಹದಿ ಎನಿಸಿಕೊಂಡಿತು. ಮಹಿಳೆಯರಿಗೆ ಜೇಬು ಮಾಡಿದರೂ ಅದರಲ್ಲಿ ಯಾವ ವಸ್ತುವನ್ನು ಇಡಲು ಸಾಧ್ಯವಿಲ್ಲ. ಇಟ್ಟರೆ ಶರೀರ ಉಬ್ಬಿದಂತೆ ಕಾಣುತ್ತದೆ ಎಂದು ಜೆಬು ಇರಿಸುತ್ತಿರಲಿಲ್ಲ. ಆದರೆ ಆದಿನಗಳಲ್ಲಿ ಮಹಿಳೆಯರಿಗೆ ಕೇವಲ ಸುಂದರವಾಗಿ ಕಾಣುವುದು ಮಾತ್ರ ಕೆಲಸವಾಗಿತ್ತು.
ಕೆಲವು ಸಮಯದ ಹಿಂದೆ ಯುರೋಪ್ನಲ್ಲಿ ಮಹಿಳೆಯರು ತಮ್ಮ ಬಟ್ಟೆಗಳಲ್ಲಿ ಜೇಬು ಇರಿಸಲು ಗಿವ್ ಅಸ್ ಪಾಕೆಟ್ ಅಭಿಯಾನವನ್ನೇ ನಡೆಸಿದ್ದರು. ಆದರೆ ಫ್ಯಾಶನ್ ಜಗತ್ತಿಗೆ ಈ ಅಭಿಯಾನ ಬಹಳ ಹಾಸ್ಯಾಸ್ಪದವಾಗಿ ಕಂಡಿತು. ನಂತರ ಜೇಬು ಇರುವ ಉಡುಪುಗಳ ತಯಾರಿ ಆರಂಭವಾಗಿದೆ.