,

ಹುಡುಗಿಯರು ಹುಡುಗರ ಜೊತೆ ಬೈಕಲ್ಲಿ ಕಾಲೇಜಿಗೆ ಬರುವುದನ್ನು ನಿಷೇಧಿಸಿದ ಕಾಲೇಜು : ಕಾರಣವೇನು ಗೊತ್ತಾ ?

 

ವಿದ್ಯಾರ್ಥಿನಿಗಳು ಗಂಡು ಹುಡಗರ ಹಿಂದೆ ಕೂತು ಬೈಕ್ ಸವಾರಿ ಮಾಡಬಾರದೇ. ಹೌದೆನ್ನುತ್ತದೆ ಕೇರಳದ ಒಂದು ಕಾನೂನು ಕಾಲೇಜು. ಪತ್ತನಂತಿಟ್ಟ ಜಿಲ್ಲೆಯ ಖಾಸಗಿ ಲಾ ಕಾಲೇಜು ತನ್ನ ವಿದ್ಯಾರ್ಥಿನಿಗಳಿಗೆ ಇಂತಹದೊಂದು ಸಕ್ರ್ಯುಲರ್ ನೀಡಿದೆ. ಇದಕ್ಕೆ ಕಾರಣವೇನು.
ಪತ್ತನಂತಿಟ್ಟಿ ಜಿಲ್ಲೆಯ ಖಾಸಗಿ ಲಾ ಕಾಲೇಜು ತನ್ನ ವಿದ್ಯಾರ್ಥಿನಿಯರಲ್ಲಿ ಜಾಗೃತಿಗಾಗಿ ಈ ಕೆಲಸಮಾಡಿದೆ. ಗಂಡು ಹುಡುಗರು ಅತಿವೇಗದಿಂದ ಬೈಕ್ ಚಲಾಯಿಸುತ್ತಾರೆ. ಹೀಗೆ ಹೋಗುವಾಗ ಅಪಘಾತ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ನೀವು ಹುಡುಗರ ಬೈಕಿನಲ್ಲಿ ಹಿಂಬದಿ ಕೂತು ಸಂಚರಿಸಬೇಡಿರಿ ಎಂದು ಲಾ ಕಾಲೇಜು ಆಡಳಿತ ಕಳುಹಿಸಿದ ಸುತ್ತೋಲೆ ಎಚ್ಚರಿಸುತ್ತಿದೆ. ಒಂದುವೇಳೆ ನಿಮಗೆ ಹೋಗಲೆ ಬೇಕೆಂದಿದ್ದರೆ ತಂದೆ ತಾಯಿ ಅನುಮತಿ ಪಡೆದು ಬರಬೇಕು. ಎಂದು ಸಕ್ರ್ಯೂಲರ್‍ನಲ್ಲಿ ಕಾಲೇಜಾಡಳಿತ ತಿಳಿಸಿದೆ.
ದ್ವಿಚಕ್ರವಾಹನದ ಹಿಂದಿನಿಂದ ಪ್ರಯಾಣಿಸುವವರ ಸುರಕ್ಷಿತತೆಯನ್ನು ಗಮನದಲ್ಲಿಟ್ಟು ಮುನ್ನೆಚ್ಚರಿಕೆಯಾಗಿ ಸಕ್ರ್ಯೂಲರ್ ಕಳುಹಿಸಿದ್ದೇವೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಹೇಳಿದ್ದಾರೆ. ಆದರೆ ಗಂಡು ಹುಡುಗರು ಅವರ ದ್ವ್ವಿಚಕ್ರವಾಹನವನ್ನು ಚಲಾಯಿಸಬಹುದು. ಅದಕ್ಕೆ ಕಾಲೇಜಿನ ನಿಷೇಧವಿಲ್ಲ.
ಈ ತಿಂಗಳ ಹನ್ನೊಂದನೇ ತಾರೀಕಿಗೆ ಕಾಲೇಜು ಅಧಿಕಾರಿಗಳು ಸಕ್ರ್ಯೂಲರ್ ಅಂದರೆ ಸುತ್ತೋಲೆ ಕಳುಹಿಸಿದ್ದಾರೆ. ಹುಡುಗಿಯರು ಗಂಡು ಮಕ್ಕಳ ಜೊತೆಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸಬಾರದು. ಗಂಡು ಮಕ್ಕಳು ಸ್ಪೀಡಾಗಿ ಹೋಗುತ್ತಾರೆ. ಇದರಿಂದ ಅಪಘಾತ ಸಾಧ್ಯತೆ ಇದೆ ಎಂದು ಸಕ್ರ್ಯೂಲರ್‍ನಲ್ಲಿ ವಿವರಿಸಲಾಗಿದೆ. ಒಂದುವೇಳೆ ಗಂಡು ಮಕ್ಕಳ ಜೊತೆ ಹಿಂಬದಿ ಕೂತು ಬೈಕ್ ಸವಾರಿ ಮಾಡಲು ಬಯಸುವವರು ತಂದೆತಾಯಿ ಅನುಮತಿ ಪತ್ರ ತರಬೇಕು. ಆದರೆ ಕಾಲೇಜಿನ ಈ ಆದೇಶವನ್ನು ಈವರೆಗೆ ಯಾವ ವಿದ್ಯಾರ್ಥಿನಿಯೂ ಪಾಲಿಸಿಲ್ಲ.

ನಿಮ್ಮ ಕಂಕುಳ ಕಪ್ಪಗಿದೆಯೇ? ಇಲ್ಲಿದೆ ಪರಿಹಾರ!

ನಟಿಯ ಕಾರಿನ ಮುಂಭಾಗಕ್ಕೆ ಮೂತ್ರ ಒಯ್ದ ಯುವಕ !