,

ಹಳೆಯ ಅಂಗಿಯಲ್ಲಿ ಸಿಕ್ಕಿತು ಹಳೆಯ ಲಾಟರಿ ಟಿಕೆಟ್, ಒಂದೇಟಿಗೆ ಕೋಟ್ಯಧಿಪತಿಯಾದರು..!

ಮೇಲಿನವನು ಕೊಟ್ಟರೆ ಅದಕ್ಕೆ ಮಿತಿಯಿಲ್ಲ. ನ್ಯೂಜರ್ಸಿಯಲ್ಲಿ 68ವರ್ಷದ ನಿವೃತ್ತ ಗಾರ್ಡ್ನೊಂದಿಗೆ ಹೀಗೆಯೇ ಸಂಭವಿಸಿದೆ.ಅವರಿಗೆ 2.4 ಕೋಟಿ ಡಾಲರ್ನ ಲಾಟರಿ ಹೊಡೆದಿತ್ತು. ಆದರೆ ಅವರಿಗೆ ಅದು ಗೊತ್ತಿರಲಿಲ್ಲ. ತಾನು ಕೋಟ್ಯಧಿಪತಿಯೆನ್ನುವ ಅರಿವೇ ಇರಲಿಲ್ಲ.
ನಿವೃತ್ತ ಗಾರ್ಡ್ ಸ್ಮಿತ್ ಲಾಟರಿ ಹೊಡೆದಿತ್ತು. ಆದರೆ ಅದು ಗೊತ್ತಿರಲಿಲ್ಲವಷ್ಟೇ. ಒಮ್ಮೆ ಟಿವಿಯಲ್ಲಿ ಈ ಬಹುಮಾನ ಈವರೆಗೆ ಯಾರಿಗೂ ಹೋಗಿಲ್ಲ ಎಂದು ವರದಿಯಾಗಿತ್ತು. ಸುದ್ದಿ ತಿಳಿದ ಬಳಿಕ ಅವರು ಟಿಕೆಟ್ ಹುಡುಕ ತೊಡಗಿದರು.
ಜಿಮ್ಮಿ ಸ್ಮಿತ್ ಐವತ್ತು ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದಾರೆ. ಆದರೆ ಲಾಟರಿಯನ್ನು ಚೆಕ್ಮಾಡಲು ಮರೆಯುವುದು ಅವರ ಸ್ವಭಾವಾಗಿತ್ತು. ಸಮಯವಿದ್ದಾಗನೋಡುತ್ತೇನೆ ಎಂದು ಹಿಂದಕ್ಕೆ ದೂಡಿ ಅದು ಹಾಗೆಯೇ ಹೋಗುತ್ತಿತ್ತು. ಯಾರೂ ಬಹುಮಾನ ಕೊಂಡು ಹೋಗಿಲ್ಲವೆಂದರೆ ತನ್ನ ಟಿಕೆಟ್ ಅದು ಆಗಿರಬಹುದೇ ಎಂದು ಅನಿಸಿತು. ಬಹುಮಾನ ಪಡೆಯಲು ಎರಡು ದಿವಸ ಮಾತ್ರ ಅವಧಿಯಿತ್ತು. ಲಾಟರಿ ಟಿಕೆಟ್ನ್ನು ಎಲ್ಲಿಟ್ಟಿದ್ದೇನೆಂದು ಮರೆತಿದ್ದರು.
ಲಾಟರಿ ಟಿಕೆಟ್ ನೋಡಲು ಆರಂಭಿಸಿದಾಗ ಅವರಿಗೆ ಹಲುವು ಟಿಕೆಟ್ ಸಿಕ್ಕವು. ಒಂದು ಹಳೆಯ ಶರ್ಟಿನ ಜೇಬಿನಲ್ಲಿ ಬಹುಮಾನದ ಟಿಕೆಟ್ ಸಿಕ್ಕಿತ್ತು.ಅದಕ್ಕೆ ಕೋಟ್ಯಂತರ ಡಾಲರ್ ಲಾಟರಿ ಹೊಡೆದಿತ್ತು. ಇಬ್ಬರು ಮಕ್ಕಳ ತಂದೆ ಸ್ಮಿತ್ ಇದು ಕನಸ್ಸಾಗಿದೆಯೆ ಎಂದು ಸಂದೇಹಿಸಿದೆ. ಇದು ಸತ್ಯವೆಂದು ಮನವರಿಕೆಯಾಗಲು ತನಗೆ ತುಂಬ ಸಮಯ ಹಿಡಿಯಿತು ಎಂದು ಅವರು ಹೇಳುತ್ತಾರೆ. ಈ ಹಣವನ್ನುಏನುಮಾಡುತ್ತೀರಿ ಎಂದು ಕೇಳಿದಾಗ ಅದನ್ನು ಕುಟುಂಬದ ಜೊತೆ ಕೂತು ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ಮುಂದೆ ನಿಮಗೆ ವಾಟ್ಸಪ್‍ನಲ್ಲಿ ಹಣ ಮಾಡ್ಬಹುದು ಮಾಡಬಹುದು: ಹೇಗೆ ಗೊತ್ತಾ?

ತಾಯಿಯ ಹೊಟ್ಟೆಯಲ್ಲಿರುವ ಮಗುವಿನ ಕಾಲಚ್ಚು ನೋಡಿ !