,

Angry Cry Cute Geeky LOL Love OMG Win WTF

ಹಲವರ ನಿದ್ದೆಗೆಡಿಸಿದ್ದ ನಕಲಿ ಪೊಲೀಸ್  ಇನ್ಸ್‍ಪೆಕ್ಟರ್ ಸಿಕ್ಕಿಬಿದ್ದಿದ್ದೇಗೆ ಗೊತ್ತಾ ?

ಪೈಝಾಬಾದ್- ಉತ್ತರಪ್ರದೇಶದಲ್ಲಿ ಒಂದು ಆಶ್ಚರ್ಯಕಾರಿ ಘಟನೆ ಬಹಿರಂಗವಾಗಿದೆ. ವಾಹನ ಚೆಕ್ಕಿಂಗ್ ವೇಳೆ ಓರ್ವ ಹೆಲ್ಮೆಟ್ ಇಲ್ಲದೆ ಇನ್ಸ್‍ಪೆಕ್ಟರನ್ನು ಬಂಧಿಸಿದ್ದಾರೆ. ಈ ಹುಡುಗಿ ಇನ್ಸ್‍ಪೆಕ್ಟರ್‍ನ ಸಮವಸ್ತ್ರ ಧರಿಸಿ ಬಹಿರಂಗವಾಗಿ ಹೆಲ್ಮೆಟ್ ಇಲ್ಲದೆ ಸ್ಕೂಟಿಯಲ್ಲಿ ಸುತ್ತುತ್ತಿದ್ದಳು. ಈ ನಕಲಿ ಮಹಿಳಾ ಇನ್ಸ್‍ಪೆಕ್ಟರ್ ಪೊಲೀಸರ ಪ್ರಶ್ನೆಗೆ ಉತ್ತರಿಸಲಾರದೆ ಸಿಕ್ಕಿಬಿದ್ದಿದ್ದಾಳೆ.

ಪೊಲೀಸರು ವಾಹನ ಚೆಕ್ಕಿಂಗ್ ವೇಳೆ ಓರ್ವ ನಕಲಿ ಮಹಿಳಾ ಪೊಲೀಸಳನ್ನು ಸೆರೆಹಿಡಿದಿದ್ದಾರೆ.  ಹೆಲ್ಮೆಟ್ ಧರಿಸದೆ ಸ್ಕೂಟಿಯಲ್ಲಿ ಸುತ್ತಾಡುವಾಗ ಪೊಲೀಸರು ನಿಲ್ಲಿಸಿದ್ದಾರೆ.  ಹೆಲ್ಮೆಟ್ ಇಲ್ಲದ್ದಕ್ಕೆ ನಿಲ್ಲಿಸಿದಾಗ ಪೊಲೀಸ್ ಸಿಬ್ಬಂದಿಯನ್ನು ಆಕೆ ಗದರಿಸಿದ್ದಾಳೇ. ನಂತರ ಮೇಲಧಿಕಾರಿಗಳು ಆಕೆಯನ್ನು ಪ್ರಶ್ನಿಸಿದ್ದು, ಈ ಹುಡುಗಿ ನಕಲಿ ಇನ್ಸ್‍ಪೆಕ್ಟರ್ ಎಂದು ಗೊತ್ತಾಗಿದೆ. ನಂತರ ಅವಳನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದಾಗ ವಿಷಯವೆಲ್ಲ ಬಹಿರಂಗವಾಯಿತು.

ಕೋಣೆಯಲ್ಲಿ ನಕಲಿ ನೇಮ್‍ಪ್ಲೇಟ್,ಸಮವಸ್ತ್ರ ಪತ್ತೆ

ಹುಡುಗಿಯ ಸಮವಸ್ತ್ರದಲ್ಲಿ ರುಕ್ಮಿಣಿ ತಿವಾರಿ ನೇಮ್ ಪ್ಲೇಟ್ ಇತ್ತು. ಇದರ ಆಧಾರದಲ್ಲಿ ತನಿಖೆ ಮಾಡಿದಾಗ ಜಿಲ್ಲೆಯಲ್ಲಿ ಇಂತಹ ಪೊಲೀಸ್ ಅಧಿಕಾರಿಣಿಯೇ ಇಲ್ಲ ಎಂದು ತಿಳಿದು ಬಂದಿತ್ತು.  ಈ ಯುವತಿಯ ಹೆಸರು ಸಂದ್ಯಾ  ತಿವಾರಿ ಎಂದಾಗಿದೆ. ಗೋಂಡಾ ಜಿಲ್ಲೆಯ ನಿವಾಸಿಯಾಗಿದ್ದು, ನಗರದ ತಿಲಕನಗರದಲ್ಲಿ ಬಾಡಿಗೆ ಮನೆಯಲ್ಲಿವಾಸವಿದ್ದಳು.  ಅವಳ  ಕೋಣೆಯನ್ನು ತಪಾಸಣೆ ಮಾಡಿದಾಗಪೊಲೀಸರಿಗೆ ಹಲವು ಸಮವಸ್ತ್ರ, ಸ್ಟಾರ್, ನೇಮ್‍ಪ್ಲೇಟ್ ನಕಲಿ ಐಡಿಂಟಿ ಕಾರ್ಡ್ ಸಿಕ್ಕಿದೆ. ಅವಳನ್ನು ಪ್ರಶ್ನಿಸಿದಾಗ ತನ್ನ ಹೆಸರನ್ನು ಸಂಧ್ಯಾ ತಿವಾರಿ ಎಂದು  ತಿಳಿಸಿದ್ದಾಳೆ. ಫೈಝಾಬಾದ್‍ನ ಇನ್ಸ್‍ಪೆಕ್ಟರ್ ಎಂದು ಹೇಳಿ ಬಾಡಿಗೆ ಮನೆ ಪಡೆದಿದ್ದಳು.

ಹೇಗೆ ನಕಲಿ ಇನ್ಸ್‍ಪೆಕ್ಟರ್ ಸಿಕ್ಕಿಬಿದ್ದದ್ದು?

ನಗರ ಠಾಣೆಯ ಮಕ್ಬರಾ ನಾಕಾ ಸರ್ಕಲ್‍ನಲ್ಲಿ ವಾಹನ ಚೆಕ್ಕಿಂಗ್ ಮಾಡುವಾಗ ಪೊಲೀಸ್ ಸಮವಸ್ತ್ರದಲ್ಲಿ ಈ ಹುಡುಗಿ ಇರುವುದನ್ನುನೋಡಿ ಪೊಲೀಸರು ತಡೆದಿದ್ದಾರೆ. ಹೆಲ್ಮೆಟ್ ಇಲ್ಲದೆ ಸಂಚರಿಸಿದ್ದಕ್ಕಾಗಿ ಅವಳನ್ನು ಪೊಲೀಸರು ತಡೆದಿದ್ದರು. ಆದರೆ ಪೊಲೀಸ್ ಸಿಬ್ಬಂದಿಯನ್ನು ಅವಳು ಗದರಿಸಿದ್ದಾಳೆ. ನಂತರ ವಿಷಯ ದೊಡ್ಡದಾಯಿತು. ಮೇಲಧಿಕಾರಿಗಳು ಪ್ರಶ್ನಿಸಿದಾಗ ಈ ಹುಡುಗಿ ನಕಲಿ ಎನ್ನುವುದು ಗೊತ್ತಾಯಿತು.

ಆನಂತರ ಪೊಲೀಸರು ಅವಳನ್ನು ಬಂಧಿಸಿ ಠಾಣೆಗೆ ಕರೆದು ಕೊಂಡು ಬಂದರು. ಪ್ರಶ್ನಿಸಿದಾಗ ಅವಳ ಗುಟ್ಟು ರಟ್ಟಾಯಿತು. ನಕಲಿ ಇನ್ಸ್‍ಪೆಕ್ಟರ್ ಅಗಿ ಜನರನ್ನು ಮೋಸ ಮಾಡುತ್ತಿದ್ದಳು. ಫೇಸ್‍ಬುಕ್‍ನಲ್ಲಿಯೂ ತನ್ನ ಸಮವಸ್ತ್ರದ ಫೋಟೊ ಹಾಕಿದ್ಧಾಳೇ. ನಕಲಿ ಇನ್ಸ್‍ಪೆಕ್ಟರ್ ಆಗಿ ಯಾವುದೋ ತರಬೇತುದಾರ ಇನ್ಸ್‍ಪೆಕ್ಟರ್‍ನನ್ನು ಪ್ರೇಮ ಪಾಶದಲ್ಲಿ ಸಿಕ್ಕಿಸಿದ್ದಳು ಎನ್ನುವುದೂ ಬಹಿರಂಗವಾಗಿದೆ.

ಬೈಕ್ ಇಂಜಿನ್ ನಿಂದ ಸಣ್ಣ ವಿಮಾನ ನಿರ್ಮಿಸಬಹುದು ! : 1 ಲೀ ಪೆಟ್ರೋಲಿನಿಂದ ಎಷ್ಟು ದೂರ ಹಾರುತ್ತೆ ಗೊತ್ತಾ ?

ನಿವೃತ್ತಿಯ ನಂತರ ಸೇನೆಯ ನಾಯಿಗಳನ್ನು ವಿಷ ಕೊಟ್ಟು ಸಾಯಿಸುವುದು ಯಾಕೆ ಗೊತ್ತೇ?