,

ಸ್ಕೂಟರ್ ತೊಳೆಯಿಸುತ್ತಾ ಮಕ್ಕಳಲ್ಲಿ ಗುರು ಸೇವೆ ಮಾಡಿಸಿಕೊಂಡ ಟೀಚರ್!

ಶಾಲೆಗೆ ಮ್ಯಾಡಮ್ ಸ್ಕೂಟಿಯಲ್ಲಿ ಬರುತ್ತಾರೆ. ಆದರೆ ಸ್ಕೂಟಿಯ ಸರ್ವೀಸಿಂಗ್ ಮಕ್ಕಳಿಂದ ಮಾಡಿಸುತ್ತಾರೆ. ಕೈಯಲ್ಲಿ ಕೋಲು ಹಿಡಿದು ಮಕ್ಕಳಿಗೆ ಲೆಕ್ಕ ಹೇಳುತ್ತಿಲ್ಲ. ವಾಹನ ತೊಳೆಸುತ್ತಿದ್ದಾರೆ. ಅವರ ಗಾಡಿಯನ್ನು ತೊಳೆಯದ ಮಕ್ಕಳಿಗೆ ಶಿಕ್ಷೆ ಕೊಡುತ್ತಾರೆ. ಒಡಿಸಾದ ಅಂಗುಲಾ ಜಿಲ್ಲೆಯ ಅಮಂತ್‌ಪುರ್ ಸರಕಾರಿ ಶಾಲೆಯ ಒಂದು ಆಶ್ಚರ್ಯಕಾರಿ ವೀಡಿಯೊ ವೈರಲ್ ಆಗಿದೆ. ಇದರಲ್ಲಿ ಟೀಚರ್ ಮಕ್ಕಳಿಂದ ತನ್ನ ಸ್ಕೂಟರ್ ತೊಳೆಸುತ್ತಿರುವ ದೃಶ್ಯಗಳಿವೆ.

 

ಗುರು ದೇವೋಭವ ಎಂದು ಮಕ್ಕಳು ಟೀಚರ್ ಹೇಳಿದ್ದನ್ನು ಕೇಳಿ ಮಕ್ಕಳು ಸ್ಕೂಟರ್‌ನ್ನು ಹೊಳೆಯುವಂತೆ ತೊಳೆಯುತ್ತವೆ. ಟೀಚರ್‌ರಲ್ಲಿ ನೀವು ಮಕ್ಕಳಲ್ಲಿ ಸ್ಕೂಟರ್ ತೊಳೆಯಿಸುತ್ತಾ ಕೂತರೆ ಅವರು ಕಲಿಯುವುದು ಯಾವಾಗ ಎಂದು ಕೇಳಿದ್ದಕ್ಕೆ . ಸ್ಕೂಟರ್ ತೊಳೆದ ಮೇಲೆ ಕಲಿಸುತ್ತೇನೆ. ಇದು ಒಂದು ರೀತಿಯ ಗುರುಸೇವೆಯಾಗಿದೆ ಎಂದು ಹೇಳಿದ್ದಾರೆ.

 

ಸ್ಕೂಟಿ ತೊಳೆಯುವ ಹೆಸರಿನಲ್ಲಿ ಮಕ್ಕಳಿಗೆ ವಿರಾಮ ಸಿಗುತ್ತದೆ. ಆದರೆ ಹೀಗೆ ಮಾಡಿದ ಟೀಚರ್‌ಗೆ ಶಿಕ್ಷೆಯೂ ಆಗಬಹುದಾಗಿದೆ. ವೈರಲ್ ಆಗಿರುವ ವೀಡಿಯೊ ನೋಡಿ, ಶಿಕ್ಷಣಾಧಿಕಾರಿ , ಬ್ಲಾಕ್ ಶಿಕ್ಷಾಣಧಿಕಾರಿಯಿಂದ ಈ ಘಟನೆಯ ತನಿಖೆ ಮಾಡಲು ಅದೇಶ ಹೊರಡಿಸಿದ್ದಾರೆ.

 

ಫೇಸ್‌ಬುಕ್ ನೀಡುತ್ತಿದೆ ಗುಪ್ತ ಫೀಡ್‌ ಫೀಚರ್ !; ಏನಿದರ ವಿಶೇಷತೆ ?

ಆಟಿಕೆ ಲೇಸರ್ ಲೈಟ್ ತಂದ ಅಪಾಯ: ದೃಷ್ಠಿ ಕಳೆದುಕೊಂಡ ಬಾಲಕಿ