, ,

Geeky

ಸುಂದರ ಮಹಿಳೆಯರನ್ನು ನೋಡಿದರೆ ಕೆಲವರು ಹೆದರುವುದೇಕೆ ಗೊತ್ತೇ  

ಇದು ಜಗತ್ತಿನ ಏಳು ಅಚ್ಚರಿಯ ಫೋಬಿಯ

ಪ್ರೇಮ ಮತ್ತು ದ್ವೇಷದಂತೆ ಹೆದರಿಕೆ ಕೂಡ ಒಂದು ಸ್ವಾಭಾವಿಕ ಭಾವೆನಯಾಗಿದೆ.ಪ್ರತಿ ಮನುಷ್ಯ ಒಂದಲ್ಲ ಒಂದು ವಸ್ತುವಿಗೆ ಹೆದರುತ್ತಾರೆ. ಆದರೆ ಕೆಲವರ ಹೆದರಿಕೆ ಅಚ್ಚರಿಯದ್ದಾಗಿರುತ್ತದೆ. ಅವರಿಗೆ ತುಂಬ ಸಾಮಾನ್ಯ ವಸ್ತುಗಳಲ್ಲಿ ಹೆದರಿಕೆಯಾಗುತ್ತದೆ. ಮತ್ತು ಸೌಂದರ್ಯಕ್ಕೆ ಕೂಡ ಹೆದರುತ್ತಾರೆ. ಇಂತಹ ಯಾವುದೇ ಹೆದರಿಕೆ ಲೆಕ್ಕವನ್ನೂ ಮೀರಿದ್ದಾಗಿದ್ದರೆ ಅದನ್ನು ಫೋಬಿಯಾ ಎಂದು ಹೇಳಲಾಗುತ್ತದೆ.

 

ನಾವೀಗ ನಿಮಗೆ ಜಗತ್ತಿನ ಏಳು ಫೋಬಿಯವನ್ನು ತಿಳಿಸುವವರಿದ್ದೇವೆ. ಇದನ್ನು ಕೇಳಿದಾಗ ನಿಮಗೆ ಇದಕ್ಕೂ ಹೆದರಬೇಕೆ ಎಂದು ಅನಿಸುವುದು

 

ಕೆಲಿಗೇನ್ ಫೋಬಿಯ: ಸುಂದರ ಮಹಿಳೆಯರ ಕುರಿತು ಹೆದರಿಕೆ. 

 

ಬಹಳ ಗಂಡಸರು ಮಹಿಳೆಯರ ಮುಂದೆ ಬಾಯಿ ಬರದವ ರಂತಾಗುತ್ತಾರೆ. ಅಂದರೆ ಸಂಧಿಗ್ಛತೆಯೆನ್ನು ಅನುಭವಿಸುತ್ತಾರೆ. ಅವರಿಗೆ ಅವರೊಡನೆ ಕಣ್ಣಿಗೆ ಕಣ್ಣಿಟ್ಟು ಮಾತಾಡಲು ಸಂಕೋಚಆಗುತ್ತದೆ. ಇದು ಸಾಮಾನ್ಯ ವಿಷಯವಾಗಿದೆ.

ಅವರಿಂದ ದೂರ ಓಡಲು ನೋಡುತ್ತಾರೆ.ಅವರನ್ನು ಭೇಟಿಯಾಗುವುದು ತಪ್ಪಿಸಿಕೊಳ್ಳುತ್ತಾರೆ. ಇದನ್ನು ಕೆಲಿಗೇನ್ ಫೋಬಿಯ ಎಂದು ಕರೆಯಲಾಗುತ್ತದೆ. ಮತ್ತು ಇದಕ್ಕೆ ವೆನುಷ್ಟ್ರಫೊಬಿಯ ಎಂದು ಕೂಡಾ ಕರೆಯುತ್ತಾರೆ. ಇದರಲ್ಲಿ ಸುಂದರ ಮಹಿಳೆಯರು ಉಪಸ್ಥಿತಿಯಲ್ಲಿ ವ್ಯಕ್ತಿ ಉಸಿರು ವೇಗವಾಗಿಬಿಡುತ್ತದೆ. ಬೆವರುತ್ತದೆ. ಮತ್ತು ಹೆದರುತ್ತಾರೆ. ಈ ಫೋಬಿಯ ಇರುವ ವ್ಯಕ್ತಿ ಮಹಿಳೆಗೆ ಹೆದರುತ್ತಾರೆ.ಆದರೆ ಅವರು ಅವರನ್ನುದ್ವೇಷಿಸುವುದಿಲ್ಲ. ಮಹಿಳೆಯರೊಡನೆ ದ್ವೇಷಕ್ಕೆ ಮಯಿಸೋಜಿ ಎನ್ನಲಾಗುತ್ತದೆ.

 

ಓಂಪ್ಲೊಫೊಬಿಯ:ನಾಭಿ ಹೆದರಿಕೆ:

ಓಂಪ್ಲೊಫೊಬಿಯದಲ್ಲಿ ವ್ಯಕ್ತಿಗೆ ನಾಭಿಯಿಂದ ಹೆದರಿಕೆಯಾಗುತ್ತದೆ. ಅವನು ಬೇರೆಯವರ ಹೊಕ್ಕಳ ಮಾತ್ರವಲ್ಲ ತನ್ನದೇ ಹೊಕ್ಕಳಕ್ಕೂ ಹೆದರುತ್ತಾನೆ.

 

ಸ್ಪೆಕ್ಟ್ರೊಫೊಬಿ: ಕನ್ನಡಿ ಹೆದರಿಕೆ:

ಸ್ಪೆಕ್ಟ್ರೊಫೊಬಿಯದಲ್ಲಿ ವ್ಯಕ್ತಿಗೆ ಕನ್ನಡಿ ನೋಡಿದರೆ ಸಾಕು ಹೆದರಿಕೆ ಆಗುತ್ತದೆ. ಅವರಿಗೆ ಕನ್ನಡಿ ಯಾವುದೋ ಮೂರನೆ ಲೋಕದ ಪ್ರತೀಕ ಎಂದು ಅನಿಸುತ್ತದೆ. ಇದು ಆಯಿಸ್ಟ್ರೋಫೊಬಿಯಕ್ಕಿಂತ ಭಿನ್ನವಾಗಿದ್ದು, ಕನ್ನಡಿಯಲ್ಲಿ ತನ್ನದೇ ಫೋಟೊ ನೋಡಿ ಹೆದರುವುದು ಇದರ ವಿಶೇಷತೆಯಾಗಿದೆ.

 

 

ಪ್ರೋಗ್ನೊಫೊಬಿಯ: ಗಡ್ಡದ ಹೆದರಿಕೆ

ಕೆಲವು ಜನರಿಗೆ ಗಡ್ಡನೋಡಿದರೂ ಹೆದರಿಕೆಯಾಗುತ್ತದೆ. ಸೈಕಾಲಜಿಸ್ಟ್ ಹೇಳುತ್ತಾರೆ.ಇದು ಎಳವೆಯ ಕೆಟ್ಟ ಅನುಭವದಿಂದ ಅಗುತ್ತದೆ ಎನ್ನುತ್ತಾರೆ. ಮನೋತಜ್ಞ ಜಾನ್ ಬಿ. ವಾಟ್ಸನ್ ಪ್ರಯೋಗಾರ್ಥ ಓರ್ವ ಸಸ್ನನ್ ಬಾಲಕನ ಮನಸ್ಸಿನ ಬಿಳಿ ಇಲಿ ಕುರಿತು ಹೆದರಿಕೆ ವುಂಟು ಮಾಡಿದರು. ಮುಂದಕ್ಕೆ ಈ ಮಗು ಬಿಳಿ ವಸ್ತುಗಳಿಗೆ ಹೆದರತೊಡಗಿದನು. ಇವರಿಗೆ ಬಿಳಿಗಡ್ಡ ನೋಡಿದರೂ ಹೆದರಿಕೆಯಾಗುತ್ತದೆ.ಕೆಲವರು ಬಿಳಿಗಡ್ಡದ ಸಾಂತಾ ಕ್ಲೋರ್ಗೂ ಹೆದರುತ್ತಾರೆ.

 

 

ನೋಮೊಫೊಬಿಯ: ಮೊಬೈಲ್ ಫೋನ್ ಕಳಕೊಳ್ಳುವ ಹೆದರಿಕೆ;

ಇದು ಎಲ್ಲಕ್ಕಿಂತ ಹೊಸರೀತಿಯ ಫೋಬಿಯಗಳಲ್ಲಿ ಒಂದು. ಇದು 2008ರಲ್ಲಿ ಪತ್ತೆಯಾಯಿತು. ಈಗ ಬಹುದೊಡ್ಡ ಜನಸಂಖ್ಯೆಗೆ ಭಯ ಬೆಂಬತ್ತುತ್ತದೆ. ಅಂದರೆ ಮೊಬೈಲ್ ಕಳಕೊಂಡರೆ. ಸಿಗ್ನಲ್ ಸಿಗದಿದ್ದರೆ,ಬ್ಯಾಟರಿ ಚಾರ್ಜ್ ಮುಗಿದರೆ ಎನ್ನೊ ಭಯಗಳು.

 

 

ಸಿಗ್ಮಫೋಬಿಯ:ನಿದ್ದೆಯ ಹೆದರಿಕೆ

ಇದರಲ್ಲಿ ಜನರಿಗೆ ನಿದ್ದೆ ಮಾಡಿದರೆ ಅಲ್ಲಿಯೇ ಸತ್ತು ಹೋದರೆ ಎನ್ನುವ ಹೆದರಿಕೆ ಇರುತ್ತದೆ. ಇದರ ಹೊರತು ಭಯಭೀತ ಕನಸ್ಸಿನ ಕಾರಣದಿಂದ ಕೂಡಾ ನಿದ್ದೆಯ ಹೆದರಿಕೆ ಇರುತ್ತದೆ. ಕೆಲವರು ನಿದ್ದೆಯಿಂದ ಸಮಯ ಹಾಳಾಗುತ್ತದಲ್ಲ ಎಂದು ಮಲಗುವ ಕುರಿತು ಭಯ ಬೀಳುತ್ತಾರೆ.

 

 

ಕಾಲರೊಫೋಬಿ: ಜೋಕರ್ ಕುರಿತು ಹೆದರಿಕೆ

ಇದೊಂದು ಸಾಮಾನ್ಯ ಫೊಬಿಯವಾಗಿದೆ.ಇದು ಮಕ್ಕಳಲ್ಲಿ ಕಂಡು ಬರುತ್ತದೆ. ಯಾಕೆಂದರೆ ಜೋಕರ್‌ನ ಮ್ಯಾಕಪ್ ವಿಚಿತ್ರವಾಗಿರುತ್ತದೆ. ಮತ್ತು ವಿಕೃತ ರೀತಿಯಲ್ಲಿ ಮುಖಮಾಡುತ್ತಾನೆ.ಇದು ಮಕ್ಕಳನ್ನು ನಗಿಸುವ ಬದಲು ಹೆದರಿಕೆ ಹುಟ್ಟಿಸುತ್ತದೆ. ಇದು ನಿಧಾನವಾಗಿ ಹೊರಟು ಹೋಗುವ ಭಯವಾಗಿದೆ. ಕೆಲವರು ದೊಡ್ಡದಾದರೂ ಹೆದರುತ್ತಾರೆ.

 

Courtesy : bhaskar.com

 

24 ಗಂಟೆಗಳಲ್ಲಿ 36 ಮೊಟ್ಟೆ ಇಟ್ಟ ಕೋಳಿ  

11 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ; ವಾಸ್ತವ ವರದಿ ಇಲ್ಲಿದೆ !