,

Angry Cry Cute Geeky LOL Love OMG Win WTF

 ಸಣ್ಣವಯಸ್ಸಿನಲ್ಲಿ ಡಿಎಸ್ಪಿಯಾದ ಅನಿತಾ ಪ್ರಭಾ : ಈಕೆಯ ಹಿನ್ನಲೆಯನ್ನೊಮ್ಮೆ ಓದಿ ..  

 

ಮಧ್ಯಪ್ರದೇಶ: ಅನೂಪ್‌ಪುರಜಿಲ್ಲೆಯ ಸಣ್ಣ ಕೋತ್ಮ ಎನ್ನುವ ಪ್ರದೇಶದ ಅನಿತಾ ಪ್ರಭಾ ತನ್ನ ಇಪ್ಪೈತ್ತೈದನೆ ವರ್ಷದಲ್ಲಿ ಡಿಎಸ್ಪಿಯಾಗುತ್ತಿದ್ದಾರೆ. ಕೊತ್ಮದಲ್ಲಿ ಹುಟ್ಟ ಬೆಳೆದ ಅನಿತಾ ಜೀವನ ಸಂಘರ್ಷ ಮಯವಾಗಿತ್ತು. . ಅದರೆ ಚಿಕ್ಕಂದಿನಿಂದಲೇ ಅನಿತಾ ಕಲಿಯುವುದರಲ್ಲಿ ಮುಂದಿದ್ದರು. ಅನಿತಾಗೆ ಹತ್ತನೆ ತರಗತಿಪರೀಕ್ಷೆಯಲ್ಲಿ ಶೇ.92 ಮಾರ್ಕ್ಸ್ ಬಂದಿತ್ತು. ಅವಳು ಮತ್ತಷ್ಟು ಕಲಿಯ ಬಯಸುತ್ತಿದ್ದರು. ಆದರೆ ಅವರ ಕುಟುಂಬ ಹುಡುಗಿಯರಿಗೆ ಹೆಚ್ಚು ಕಲಿಸಲು ಬಯಸುತ್ತಿರಲಿಲ್ಲ. ಹೇಗೂ ಹಟಮಾಡಿ ಅನಿತಾ ಗ್ವಾಲಿಯರ್‌ನಲ್ಲಿ ತನ್ನ ಅಣ್ಣಜೊತೆ ಇದ್ದು ಪಿಯುಸಿಯಲ್ಲಿ ತೇರ್ಗಡೆಯಾದರು. ಆನಂತರ ಅವರ ತಂದೆ ತಾಯಿ 2009ರಲ್ಲಿ ಅವರಿಗಿಂತ 10 ವರ್ಷ ಹಿರಿಯನಾದ ವರನಿಗೆ ಕೊಟ್ಟು ಮದುವೆ ಮಾಡಿದರು. ಅಲ್ಲಿಂದ ಅನಿತಾರ ಜೀವನದಲ್ಲಿ ಪರೀಕ್ಷೆ ಆರಂಭವಾಗಿತ್ತು. ಅನಿತಾರ ಕಲಿಯುವ ಹಟದ ಮುಂದೆ ಪತಿಮನೆಯವರು ಕೂಡಾ ಮಂಡಿಯೂರಬೇಕಾಯಿತು.

 

ಪತಿಗೆ ಅಪಘಾತ ಸಂಭವಿಸಿದ್ದರಿಂದ ಪರೀಕ್ಷೆ ಬರೆಯಲಿಲ್ಲ:

ಪತಿಮನೆಯವರು ಪದವಿಕಲಿಯಲು ಅನುಮತಿ ನೀಡಿದ್ದರು. ಆದರೆ ಅನಿತಾರ ಅದೃಷ್ಟ ಚೆನ್ನಾಗಿರಲಿಲ್ಲ. ಪದವಿಯ ಅಂತಿಮ ಪರೀಕ್ಷೆ ವೇಳೆಗೆ ಪತಿಗೆ ಅಪಘಾತ ವಾಗಿತ್ತು. ಆ ವರ್ಷ ಪರೀಕ್ಷೆ ಬರೆಯಲಾಗದೆ, ಮುಂದಿನ ವರ್ಷ ಪರೀಕ್ಷೆ ಬರೆದು ಪಾಸಾದರು. ಆದರೆ ಮುರುವರ್ಷದಲ್ಲಿ ಪದವಿ ಪೂರ್ಣಗೊಳಿಸದ್ದರಿಂದ ಅವರಿಗೆ ಪ್ರಬೇಶನರಿ ಬ್ಯಾಂಕ್ ಅಧಿಕಾರಿ ಪೊಸ್ಟ್ ನಿರಾಕರಿಸಲಾಯಿತು. ಕುಟುಂಬಕ್ಕೆ ನೆರವಾಗಲಿಕ್ಕಾಗಿ ಅನಿತಾ ಬ್ಯೂಟಿಶಿಯನ್ ಕೋರ್ಸ್ ಮಾಡಿದರು. ಮತ್ತು ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡತೊಡಗಿದರು.

 

14 ಕಿ.ಮೀ ನಡೆದು ಪರೀಕ್ಷೆ ಬರೆದಿದ್ದರು: 

ಈ ನಡುವೆ ಪತಿ ಮತ್ತು ಅನಿತಾರ ನಡುವೆ ವೈಮನಸ್ಸು ಶುರುವಾಯಿತು. ಅನೀತಾ 2013ರಲ್ಲಿ ವ್ಯಾಪಮ್ ಪಾರೆಸ್ಟ್ ಗಾರ್ಡ್ ಪರೀಕ್ಷೆ ಬರೆದರು. ನಾಲ್ಕು ಗಂಟೆಯಲ್ಲಿ ಹದಿನಾಲ್ಕು ಕಿಲೋಮೀಟರ್ ನಡೆದು ಬಂದು ಪರೀಕ್ಷೆ ಬರೆದಿದ್ದರು. ಡಿಸೆಂಬರ್ 2013ರಲ್ಲಿಅವರಿಗೆ ಬಾಲಾಘಾಟ್ ಜಿಲ್ಲೆಯಲ್ಲಿ ಕೆಲಸ ಸಿಕ್ಕಿತ್ತು. ನಂತರ ಅನಿತಾ ವ್ಯಾಪಂನಲ್ಲಿ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ ಬರೆದರು. ಆದರೆ ಫಿಶಿಕಲ್ ಟೆಸ್ಟ್‌ನಲ್ಲಿ ಅವರು ವಿಫಲರಾದರು. ಆದರೆ ಆಕೆ ಸೋಲೊಪ್ಪಲಿಲ್ಲ.

 

ಎರಡನೆ ಬಾರಿ ಅದನ್ನೂ ಪಾಸು ಮಾಡಿದರು:

ಎರಡನೆ ಬಾರಿ ಕಷ್ಟಪಟ್ಟು ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿ ಸಬ್‌ಇನ್ಸ್ ಪೆಕ್ಟರ್ ಆದರು. ಅದರೆ ಇತ್ತೀಚೆಗೆಎರಡು ತಿಂಗಳ ಮೊದಲು ಟ್ಯೂಮರ್ ಸರ್ಜರಿಯನ್ನು ಕೂಡಾ ಅನಿತಾ ಮಾಡಿಸಿಕೊಂಡಿದ್ದಾರೆ. ಆದರೆ ಅನಿತಾರ ಹಟದ ಮುಂದೆ ರೋಗದೊಡ್ಡ ವಿಷಯವೇ ಆಗಿರಲಿಲ್ಲ. ಅನಿತಾ ರಿಸರ್ವ್ ಪೊಲೀಸ್‌ನಲ್ಲಿ ಸುಬೇದಾರರಾಗಿ ನೇಮಕವಾದರು. ಈ ನಡುವೆ ಪತಿಯಿಂದ ವಿಚ್ಛೇದನ ಕೇಸು ಕೋರ್ಟಿಗೆ ಬಂದಿತ್ತು.

 ಡಿಎಸ್ಪಿ ಅದರೂ ಸಂತೋಷ ಆಗಿಲ್ಲ:

ಅನೀತಾ ಮಧ್ಯಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಶನ್ ಪರೀಕ್ಷೆ ಬರೆದಿದ್ದರು. ಅದರಲ್ಲಿ ಕೂಡಾ ಅವರು ಪಾಸು ಆಗಿದ್ದರು. ಮೊದಲ ಪ್ರಯತ್ನದಲ್ಲಿ ಮಹಿಳಾ ಕೆಟಗರಿಯಲ್ಲಿ 17ನೆ ಸ್ಥಾನದಲ್ಲಿ ಬಂದಿದ್ದರು. ಎಲ್ಲ ಕೆಟಗರಿಯಲ್ಲಿ 47ನೆ ಸ್ಥಾನದಲ್ಲಿದ್ದರು. ಅನಿತಾಡಿಎಸ್ಪಿ ರ್ಯಾಂಕ್‌ಗೆ ಆಯ್ಕೆಯಾಗಿದ್ದರು. ಆದರೆ ಡಿಎಸ್ಪಿಗೆ ಅವರು ತೃಪ್ತರಾಗಿಲ್ಲ. ಡಿಪ್ಟಿ ಕಲೆಕ್ಟರ್ ಪೋಸ್ಟ್‌ಗಾಗಿ ಎಂಪಿಪಿಎಸ್‌ಸಿ ಪರೀಕ್ಷೆ ಬರೆಯುವ ತಯಾರಿ ನಡೆಸಿದರು. 2016 ಎಪ್ರಿಲ್‌ನಲ್ಲಿಈ ಪರೀಕ್ಷೆಯಲ್ಲಿಯೂ ಪಾಸಾದರು. ಈ ವರ್ಷ ಮಾರ್ಚ್‌ನಲ್ಲಿ ಅವರ ಇಂಟರ್‌ ವ್ಯೂ ಆಗಿದೆ. ಈಗ ಪರೀಕ್ಷಾ ಫಲಿತಾಂಶವನ್ನು ಕಾಯುತ್ತಿದ್ದಾರೆ

ಅಬ್ಬಾ! 8ವರ್ಷದ ಹುಡುಗಿ ಪ್ರತಿ ತಿಂಗಳು 76,20,000 ಲಕ್ಷ ರೂ. ಸಂಪಾದಿಸುತ್ತಿದ್ದಾಳೆ ! ಹೇಗೆ ಗೊತ್ತೇ

ಬುರ್ಕಾಧರಿಸಿ ರೈಡ್  ಮಾಡಿದ ಲೇಡಿ ಸಿಂಗಂ : ಮತ್ತೇನಾಯ್ತು ?