, ,

Angry Cry Cute Geeky LOL Love OMG Win

ಶುರುವಾಗಿದೆ ‘ಲವ್ ಕಾಂಡೊಂ’ ಯೋಜನೆ !: ಏನಿದು ಹೊಸ ಯೋಜನೆ ?

ಹೊಸದಿಲ್ಲಿ: ಭಾರತವನ್ನು ಎವ್‍ಐವಿ ಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ಜಾಗತಿಕ ಚಾರಿಟಿ ಸಂಘಟನೆ ಏಡ್ಸ್ ಹೆಲ್ತ್ ಕೇರ್ ಫೌಂಡೇಶನ್(ಎಎಚ್‍ಎಫ್) ಭಾರತದಲ್ಲಿ ಉಚಿತ ಕಾಂಡೊಮ್ ವಿತರಣೆ ಮಾಡುತ್ತಿದೆ.
ಲವ್‍ಕಾಂಡಂ ಎನ್ನು ವ ಹೆಸರಿನಲ್ಲಿ ಯೋಜನೆ ಇತ್ತೀಚೆಗೆ ಆರಂಭವಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಏಡ್ಸ್ ಪೀಡಿತರಿರುವ ದೇಶ ಭಾರತ ಆಗಿದೆ.
ಲವ್‍ಕಾಂಡಮ್ಸ್ ಎನ್ನುವ ಸ್ಟೋರ್ ಮೂಲಕ ಉಚಿತವಾಗಿ ಕಾಂಡಂ ಬುಕ್ ಮಾಡಬಹುದು. ಸಂಸ್ಥೆಗಳೋ ವ್ಯಕ್ತಿಗಳೋ ಆರ್ಡರ್ ಮಾಡುವುದಾದರೆ ಭಾರತದ ಯಾವುದೇ ನಗರದ ಮನೆಗಳಿಗೆ ಮೂರು ದಿವಸದೊಳಗೆ ತಂದು ಕೊಡಲಾಗುವುದು. ಎಎಚ್‍ಎಫ್ ಪ್ರೋಗ್ರಾಂ ಡೈರೆಕ್ಟರ್ ಡಾ.ವಿ. ಶ್ಯಾಂ ಪ್ರಸಾದ್ ಹೇಳಿದ್ದಾರೆ.
ಕೊನೆಪಕ್ಷ ಒಂದು ಬಾಕ್ಸ್ ಆದರೆ ಆರ್ಡರ್ ಮಾಡಬೇಕು.ಅದರಲ್ಲಿ 144 ಕಾಂಡಮ್‍ಗಳಿರುತ್ತವೆ. ಹೆಲ್ತ್ ಸೆಂಟರ್‍ಗಳ ಮೂಲಕ ಸರಕಾರ ಉಚಿತವಾಗಿ ಗರ್ಭನಿರೋಧ ಒರೆಗಳನ್ನು ವಿತರಿಸುವಯೋಜನೆಯನ್ನು ಹೊಂದಿದೆ. ಆದರೆ ಹೆಚ್ಚಿನ ಸಮಯದಲ್ಲಿ ಸ್ಟಾಕ್ ಇರುವುದಿಲ್ಲ.
ಎಲ್ಲರಿಗೂ  ಮೈಲ್ ಮೂಲಕ ಟಾಲ್‍ಪ್ರೀ ನಂಬರ್‍ಗೆ ಬುಕ್ ಮಾಡಿದರೆ ಕಾಂಡಂ ಮನೆಗೆ ತಲುಪುತ್ತದೆ. ಈ ರೀತಿ ಒಂದು ಸಂಘಟನೆ ಭಾರತದಲ್ಲಿ ರಂಗಕ್ಕಿಳಿದಿದ್ದು ಪ್ರಥಮವಾಗಿದೆ.

1999ರಲ್ಲಿ ಇದಕ್ಕೆ ಸಮಾನ ಯೋಜನೆ ದಿಲ್ಲಿಯಲ್ಲಿ ಜಾರಿಗೆ ತರಲಾಗಿತ್ತು. 2004ರಲ್ಲಿ ಅದು ನಿಲುಗಡೆಯಾಯಿತು. ಕಾಂಡಂ ಉಚಿತಬೇಕಿದ್ದವರು 18001028102ಗೆ ಫೋನ್ ಮಾಡಿ ತರಿಸಿಕೊಳ್ಳಬಹುದು ಅಥವಾ freecondomstoreahf@gmail.comಗೆ ಮೈಲ್ ಮಾಡಿ.

ದೇಶದಲ್ಲಿ 21 ಲಕ್ಷ ಮಂದಿ ಎಚ್‍ಐವಿ ಪೀಡಿತರಿದ್ದಾರೆ.ಆದರೆ 12 ಲಕ್ಷ ಮಂದಿ ಇದ್ದಾರೆನ್ನುವುದು ಸರಕಾರದ ಲೆಕ್ಕವಾಗಿದೆ.

ಮುಂಬೈಯ ಮಾಫಿಯ ಸಾಮ್ರಾಜ್ಯವನ್ನು ಹದ್ದು ಬಸ್ತಿನಲ್ಲಿಟ್ಟ ಈ ‘ಲೇಡಿ ಸಿಂಗಂ’ ಬಗ್ಗೆ ನಿಮಗೆಷ್ಟು ಗೊತ್ತು ?

ಈ ಬೆಡಗಿ ಮದುವೆ ಜಾಹೀರಾತಿನಲ್ಲಿ ವರನ ಮುಂದಿಟ್ಟ ಡಿಮ್ಯಾಂಡು ಏನುಗೊತ್ತೆ?