,

OMG

ವೇಸ್ಟ್ ಪ್ಲಾಸ್ಟಿಕ್ ಗಳನ್ನು ಉಪಯೋಗಿಸಿ ರಸ್ತೆ ನಿರ್ಮಿಸಿಸುವುದು ಹೇಗೆ ನೋಡಿ !

ನೀವು ದಿನಾಲೂ ಹೊರಗೆ ಹೋಗುತ್ತಿರಬಹುದು. ಆದರೆ ಪ್ಲಾಸ್ಟಿಕ್ನಿಂದ ನಿರ್ಮಾಣವಾದ ರಸ್ತೆಯನ್ನು ನೋಡಿರಲಾರಿರಿ. ನೀವು ಇದೇನು ಮಾತು ಎಂದು ಯೋಚಿಸುತ್ತಿರಬಹುದು. ಆದರೆ ನಿಮಗೆ ಪ್ಲಾಸ್ಟಿಕ್ ರಸ್ತೆಯ ಕುರಿತು ತಿಳಿಸುತ್ತೇವೆ.

ಈ ರಸ್ತೆ ಪ್ಲಾಸ್ಟಿಕ್ನ ನೆರವಿನಿಂದ ತಯಾರಿಸಲಾಗಿದೆ.ಇಲ್ಲಿ ಸಾವಿರಾರು ವಾಹನಗಳು ಯಾವುದೇ ಅಡೆತಡೆಗಳಿಲ್ಲದೆ ಚಲಿಸುತ್ತಿವೆ. ಜಮ್ಶೆಡ್ ಪುರದಲ್ಲಿ ವೇಸ್ಟ್ ಪ್ಲಾಸ್ಟಿಕ್ನಿಂದ ರಸ್ತೆ ನಿರ್ಮಾಣವಾಗಿದೆ. ಟಾಟ ಸ್ಟೀಲ್ ಪ್ಲಾಂಟ್ನ ಕಾರಣದಿಂದ ಜೆಮ್ಶೆಡ್ಪುರ ದೇಶದಲ್ಲಿ ಪ್ರಸಿದ್ಧವಾಗಿದೆ.

1907ರಲ್ಲಿ ಟಾಟ ಐರನ್ ಆಂಡ್ ಸ್ಟೀಲ್ ಕಂಪೆನಿ ಟಿಸ್ಕೊವನ್ನು ಇಲ್ಲಿ ಸ್ಥಾಪಿಸಲಾಯಿತು. ಟಿಸ್ಕೊ ಈ ನಗರದ ಆಧಾರವಾಗಿ ಬಿಟ್ಟಿತು.  ಈ ಸ್ಥಳವನ್ನು ಹುಡುಕಲು ಭೂವಿಜ್ಞಾನಿಗಳಿಗೆ ಸುಮಾರು ಮೂರುವರ್ಷ ಬೇಕಾಯಿತು.

ಇಲ್ಲಿ ಪ್ಲಾಸ್ಟಿಕ್ ರಸ್ತೆಯನ್ನು ಜಮ್ಶೆಡ್ಪುರ ಯುಟಿಲಿಟಿ ಸರ್ವಿಸ್ ಕಂಪೆನಿ ನಿರ್ಮಿಸಿತ್ತು. ಎನ್ವೈರ್ಮೆಂಟ್ ದೃಷ್ಟಿಯಲ್ಲೂ ಇದು ಬಹಳ ಉತ್ತ ರಸ್ತೆಯಾಗಿದೆ. ಜಮ್ಶೆಡ್ಪುರದಲಿ 22 ಕಿಲೊಮೀಟರ್ ಉದ್ದದ ಪ್ಲಾಸ್ಟಿಕ್ ರಸ್ತೆ ಮಾಡಲಾಗಿದೆ. 2011 ನವೆಂಬರ್ 30ಕ್ಕೆ ಮೊದಲ ಬಾರಿ ಸಾಕಚಿ ಬಾಗೆ ಜಮ್ಶೆಡ್ ಸ್ಕೂಲ್ನಿಂದ ಜುಬಿಲಿ ಪಾರ್ಕ್ನ ಮುಖ್ಯದ್ವಾರದವರೆಗೆ ಪ್ಲಾಸ್ಟಿಕ್ ವೇಸ್ಟ್ನಿಂದ ರಸ್ತೆ ತಯಾರಿಸಲಾಗಿತ್ತು.

ಮೊತ್ತಮೊದಲು ಪ್ಲಾಸ್ಟಿಕ್ ಕಸ ಜಮೆಗೊಳಿಸಿ ವಿಶೇಷ ಮೆಷಿನ್ನಲಿ 2ರಿಂದ 4 ಮಿ.ಮಿ ಆಕಾರದಲ್ಲಿ ಹುಡಿಮಾಡಲಾಗುತ್ತದೆ. ಸಾಮಾನ್ಯವಾಗಿ ಒಂದು ಕಿಲೊಮೀಟರ್ ಉದ್ದದ ರಸ್ತೆಗೆ ಹನ್ನೊಂದು ಟನ್ ಡಾಮರು ಬೇಕಾಗುತ್ತದೆ. ಈ ರೀತಿಯಲ್ಲಿ 10 ಟನ್ ಡಾಮರಿನೊಂದಿಗೆ ಒಂದು ಟನ್ ಪ್ಲಾಸ್ಟಿಕ್ ವೇಸ್ಟ್ ಉಪಯೋಗಿಸಲಾಗುತ್ತದೆ.

ಡಾಮರ್ನೊಂದಿಗೆ ಪ್ಲಾಸ್ಟಿಕ್ ಹುಡಿಯನ್ನು ಮಿಶ್ರಣ ಮಾಡಲಾಗುತ್ತದೆ. ಇದನ್ನು 160 ಡಿಗ್ರಿಸೆಲ್ಸಿಯಸ್ ಉಷ್ಣದಲ್ಲಿ ಬಿಸಿ ಮಾಡಲಾಗುತ್ತದೆ. ಪ್ಲಾಸ್ಟಿಕ್ ಕರಗಿಸಿ ಅದನ್ನು ರಸ್ತೆಯಲ್ಲಿ ಹರಡಲಾಗುತ್ತದೆ. ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಕಪ್ ಇತ್ಯಾದಿ ಪ್ಲಾಸ್ಟಿಕ್ ವಸ್ತುಗಳನ್ನು ಡಾಮರು ರುಪದಲ್ಲಿ  ರಸ್ತೆಗೆ ಬಳಸಲಾಗಿದೆ.

 

 

ವಾಹನ ಚಲಾವಣೆ ಲೈಸೆನ್ಸ್‍ ಗೆ  ಬರಲಿದೆ ಹೊಸ ನಿಯಮ ;  ಡ್ರೈವಿಂಗ್ ಟೆಸ್ಟ್ ಹೇಗಿರಲಿದೆ ಗೊತ್ತಾ ?

ರಾತ್ರೊ ರಾತ್ರಿ ಸ್ವಾರ್ ಆದ ಹಳ್ಳಿ ಹುಡುಗಿ ಬಗ್ಗೆ ನಿಮಗೆಷ್ಟು ಗೊತ್ತು ?