,

Angry Cry OMG

ವಿದ್ಯಾರ್ಥಿನಿಯೊಂದಿಗೆ ಅಶ್ಲೀಲ ಭಂಗಿಯಲ್ಲಿ ಪೋಟೋ ತೆಗೆದು ಈ ಶಿಕ್ಷಕ ಮಾಡಿದ್ದೇನು ಗೊತ್ತೇ ?

 

 

ಹೊಸದಿಲ್ಲಿ: ನಮ್ಮದೇಶದಲ್ಲಿ ಗುರುಗಳನ್ನು ದೇವರ ಸ್ಥಾನ ಕೊಟ್ಟವರಿದ್ದಾರೆ. ನಮ್ಮ ನಂಬಿಕೆಯಂತೆ ಗುರು ದೇವನ ಪರಿಚಯ ಮಾಡಿಕೊಡುತ್ತಾರೆ.ಆದರೆ ಈ ಕಲಿಯುಗ ಸಮಾಜದಲ್ಲಿ ಗುರುತನ್ನ ಮರ್ಯಾದೆಯನ್ನು ಕಳಕೊಳ್ಳುತ್ತಾ ಹೋಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇಂದು ಗುರುಶಿಷ್ಯರ ಸಂಬಂಧ ಕಳಂಕಿತವಾಗಿದೆ. ಇಂತಹ ಒಂದು ಘಟನೆ ಅಸ್ಸಾಮ್‌ನಿಂದ ವರದಿಯಾಗಿದೆ.

 

ಅಲ್ಲೊಬ್ಬ ಶಿಕ್ಷಕ ತನ್ನವಿದ್ಯಾರ್ಥಿನಿಯರೊಂದಿಗೆ ಅಶ್ಲೀಲ ಫೋಟೊ ತೆಗೆಸಿಕೊಂಡಿದ್ದಾನೆ. ನಂತರ ಫೇಸ್‌ಬುಕ್‌ನಲ್ಲಿ ಹಾಕಿದ್ದಾನೆ.

ಆದರೆ ಫೆಸ್‌ಬುಕ್‌ನಲ್ಲಿ ವೈರಲಾಗುತ್ತಿರುವ ಫೋಟೊದಲ್ಲಿ ಶಿಕ್ಷಕ ತನ್ನ ಪುಟ್ಟ ವಿದ್ಯಾರ್ಥಿನಿಯರನ್ನು ಬಾಹುಗಳಲ್ಲಿ ಬಂಧಿಸಿದ್ದಾನೆ. ಬಹಳ ಅಶ್ಲೀಲವಾಗಿ ಸ್ಪರ್ಷಿಸಿದ್ದಾನೆ. ಈ ಫೋಟೊಗಳ ಬಗ್ಗೆ ವಿದ್ಯಾರ್ಥಿನಿಯರ ಪೋಷಕರಿಗೆ ಗೊತ್ತಾದದ್ದೇ ತಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ.ಪೊಲೀಸರು ಆರೋಪಿ ಶಿಕ್ಷಕನ ವಿರುದ್ಧ ಪೊಲೀಸರು ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.

 

ಅಸ್ಸಾಮ್‌ನ ಸ್ಥಳೀಯ ಡಿವೈ-365 ಚ್ಯಾನೆಲ್ ಪ್ರಕಾರ ಅಸ್ಸಾಮ್ ಹೈಲಕಾಂಡಿ ಜಿಲ್ಲೆಯ ಕಾಟಲಿಚೆರಾ ಕಸ್ಬಾದ ಒಂದುಶಾಲೆಯಲ್ಲಿ ಕಲಿಸುತ್ತಿರುವ ಫೈಜುದ್ದೀನ್ ತನ್ನ ವಿದ್ಯಾರ್ಥಿನಿಯರ ಜೊತೆ ಹೀಗೆ ಫೋಟೊ ಶೂಟ್ ಮಾಡಿಸಿಕೊಂಡಿದ್ದಾನೆ. ನಂತರ ಈ ಫೋಟೊಗಳನ್ನು ಫೇಸ್‌ಬುಕ್‌ಗೆ ಪೋಸ್ಟ್ ಮಾಡಿದ್ದಾನೆ.

 

ವಿದ್ಯಾರ್ಥಿನಿಯರಲ್ಲಿ ಏನು ಹೇಳಿ ಇಂತಹ ಫೋಟೊ ಶೂಟ್ ಮಾಡಿಸಿದ್ದಾನೆಂದು ಈಗ ತಿಳಿದು ಬಂದಿಲ್ಲ.  ಸಾಮಾಜಿಕಮಾಧ್ಯಮಗಳಲ್ಲಿ ತಮ್ಮ ಮಕ್ಕಳ ಫೋಟೊ ವೈರಲ್ ಆಗುತ್ತಿರುವುದನ್ನು ನೋಡಿ ತುಂಬ ಉದ್ರಿಕ್ತರಾದ ಹೆತ್ತವರು ಫೈಜುದ್ದೀನ್ ವಿರುದ್ಧ ಸ್ಥಳೀಯ ಪೊಲೀಸರಿಗೆದೂರು ನೀಡಿದ್ದಾರೆ.

 

ಆದರೆ ಪೊಲೀಸರು ಶಿಕ್ಷಕನನ್ನು ಪ್ರಶ್ನಿಸಿ ಬಿಟ್ಟುಬಿಟ್ಟಿದ್ದಾರೆ. ಪೈಜುದ್ದೀನ್ ಇದರ ಮೊದಲು ಕೂಡ ಓರ್ವ ಮಹಿಳೆಯ ಶೋಷಣೆ ನಡೆಸಿದ್ದಕ್ಕಾಗಿ ಜನರ ಗುಂಪು ಥಳಿಸಿತ್ತು. ಕೋಪಗೊಂಡ ಗುಂಪು ಫೈಜುದ್ದೀನನ ಒಂದು ಬೆರಳನ್ನು ಕೂಡಾ ಕತ್ತರಿಸಿತ್ತು.

 

 

 

22ನೆ ವಯಸ್ಸಿನಲ್ಲಿ ಐಪಿಎಸ್ !; ಸಾಮಾಜಿಕ ಜಾಲತಾಣದಲ್ಲಿ ಹಲವರ ಮನಗೆದ್ದ ಸಚಿನ್ ಅತುಲ್ಕರ್ ಐಪಿಎಸ್

ರಸ್ತೆಗಳ ಗುಂಡಿಗಳನ್ನು ಮುಚ್ಚುತ್ತಿರುವ  12 ವರ್ಷದ ಬಾಲಕ: ಕಾರಣ ಕೇಳಿದ್ರೆ ಕಣ್ಣೀರು ಬರುತ್ತೆ