,

Cute OMG

ವಾಟ್ಸ್‌ಅಪ್‌ನಲ್ಲಿ ಬರಲಿದೆ ಹೊಸ ಫೀಚರ್!

ಹೊಸದಿಲ್ಲಿ,ಜು.29: ಇನ್ಸ್‌ಟೆಂಟ್ ಮೆಸೇಜಿಂಗ್ ವಾಟ್ಸ್‌ಅಪ್ ಬಳಕೆದಾರರ ಅನುಭವ ದುಪ್ಪಟ್ಟು ಮಾಡಲಿಕ್ಕಾಗಿ ಹೊಸ ಪೀಚರ್ಸ್ ಸೇರಿಸುತ್ತಿದೆ. ಕಂಪೆನಿ ಹೊಸ ಫೀಚರ್ಸ್ ಬಿಡುಗಡೆಗೊಳಿಸುವ ತಯಾರಿ ನಡೆಸುತ್ತಿದೆ. ವಾಟ್ಸ್‌ಅಪ್‌ನಲ್ಲಿ ಖಾಸಾ ಫೀಚರ್ ಟೆಸ್ಟಿಂಗ್ ಬೀಟಾ ವರ್ಶನ್‌ನಲ್ಲಿ ಮಾಡಲಾಗುತ್ತಿದೆ. ಇದು ಬಳಕೆದಾರರಿಗೆ ಚಾಟ್ ನಡೆಸಲು ಶಾರ್ಟ್ ಕಟ್ ಸೌಲಭ್ಯವಾಗಿದೆ.

 

‘ಆಂಡ್ರಾಯಿಡ್ ಪ್ಲಸ್’ ವರದಿಯ ಪ್ರಕಾರ ಈ ಫೀಚರ್ ಆಂಡ್ರಾಯಿಡ್ ನಾಗಟ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಆದರೆ ಇದನ್ನು ನೋವಾ ದಂತ ಲಾಂಚರ್‌ಗಳ ಸಹಾಯದಲ್ಲಿ ಆಂಡ್ರಾಯಿಡ್ ಮಾರ್ಶ್‌ಮೈಲ್‌ನಲ್ಲಿ ಕೂಡಾ ಬಳಸಬಹುದಾಗಿದೆ.

 

ಏನಿದು ಶಾರ್ಟ್‌ಕಟ್ ಫೀಚರ್?

ಡೈರೆಕ್ಟ್ ಸ್ಟೇಟಸ್ ಮತ್ತು ಪಿನ್ ಚ್ಯಾಟ್‌ನ ಹೊರತು ಈ ಫೀಚರ್‌ನ್ನು ಯೂಸರ್‌ಗಳ ಹೊರತು ವಾಟ್ಸಪ್ ತೆರೆಯಲು ಕ್ಯಾಮರಾ ಮತ್ತು ಚ್ಯಾಟ್(ಇದರಲ್ಲಿ ಯೂಸರ್ಸ್ ಹೆಚ್ಚು ಮಾತಾಡುವುದಿಲ್ಲ) ಓಪನ್ ಮಾಡುವ ಅವಕಾಶ ಕೂಡಾ ಇದೆ. ಜೊತೆಗೆ ಒಂದು ಹೊಸ ಚಾಟ್ ಶಾರ್ಟ್‌ಕಟ್‌ನ ಅವಕಾಶ ನೀಡಲಾಗುವುದು. ಆದರೆ ಇದನ್ನು ಎಂಡ್ರಾಯಿಡ್ ಬೀಟಾ ವರ್ಜನ್ 2.17.277ರಲ್ಲಿ ಮಾತ್ರಾ ಉಪಯೋಗಿಸಲು ಆಗುತ್ತದೆ.

ಮೂಲಗಳ ಪ್ರಕಾರ ವಾಟ್ಸ್‌ಅಪ್ ಬೇಗನೆ ಈ ಆಪ್‌ಗೆ ಯುಟ್ಯೂಬ್‌ನ ಸಪೋರ್ಟ್ ಕೊಡಲಿದೆ. ಇದು ಈಫೀಚರ್ ಆಪಲ್‌ನ ಐ ಮೆಸ್ಸೆಜ್‌ಗೆ ಸ್ಪರ್ಧೆ ನೀಡಲಿದೆ. ಆದರೆ ಆಪಲ್‌ನ ಐ ಮೆಸ್ಸೇಜ್‌ನಲ್ಲಿ ಯಾರಾದರೂ ನಿಮಗೆ ಲಿಂಕ್ ಕಳುಹಿಸಿದರೆ, ನೀವು ಅದನ್ನು ಓಪನ್ ಮಾಡಿದರೆ ಯೂಟ್ಯೂಬ್‌ನಲ್ಲಿ ನೀವು ರಿಡೈರೆಟ್ ಆಗುವುದಿಲ್ಲ. ವೀಡಿಯೊ ಐ ಮೆಸ್ಸೇಜ್‌ನಲ್ಲಿ ಪ್ಲೇ ಆಗಲಿದೆ. ಇದೇ ರೀತಿ ವಾಟ್ಸ್‌ಅಪ್‌ನಲ್ಲಿ ಕೂಡಾ ಆಗಲಿದೆ. ಹೊಸ ಫೀಚರ್‌ನ ಮೂಲಕ ಯೂಸರ್ಸ್ ಆ್ಯಪ್‌ನಲ್ಲಿ ಯೂಟ್ಯೂಬ್ ವೀಡಿಯೊ ಪ್ಲೇ ಅಗಬಹುದು. ಇದರ ಅರ್ಥ ಈಗ ಯೂಸರ್ಸ್ ಯೂಟ್ಯೂಬ್‌ನ ಬಳಕೆ ಮಾಡುವುದಕ್ಕಾಗಿ ಬೇರೆಯೇ ಆ್ಯಪ್‌ತೆರೆಯುವ ಅಗತ್ಯ ಇರುವುದಿಲ್ಲ. ನಿಮ್ಮ ವಾಟ್ಸ್‌ಅಪ್‌ನ ಯೂಟ್ಯೂಬ್ ಲಿಂಕ್‌ನ್ನು ನೀವು ಆ್ಯಪ್‌ನಲ್ಲಿ ಪ್ಲೇ ಮಾಡಬಹುದು.

ಹುಡುಗಿಯರ ಶರ್ಟ್’ಗಳಲ್ಲಿ ಜೇಬು ಇರಲ್ಲ ಯಾಕೆ ಗೊತ್ತಾ ?

ನಿಮ್ಮ ಮಕ್ಕಳು ಈ ರೀತಿ ಕುಳಿತುಕೊಳ್ಳುತ್ತಿದ್ದಾರಾ? ಹಾಗಾದರೆ ನೀವು ಇದನ್ನು ಓದಲೇಬೇಕು