,

Love

‘ ರಿಯಲ್ ಸಿಂಗಂ‘ ಸಂಜುಕ್ತಾ ಪರಾಶರ್ ಐಪಿಎಸ್ ಬಗ್ಗೆ ನಿಮಗೆಷ್ಟು ಗೊತ್ತು ?

 

ಗುವಾಹಟಿ: ಭಾರತವನ್ನು ಪುರುಷ ಪ್ರಧಾನ ರಾಷ್ಟ್ರವೆಂದು ಕರೆಯಲಾಗುತ್ತದೆ. ಆದರೆ ಇಂದು ಈ ಅಭಿಪ್ರಾಯ ಬದಲಾಗುತ್ತಿದೆ.ಇಂದಿನ ಹೆಣ್ಣುಮಕ್ಕಳು ಕೂಡಾ ಯಾವುದೇ ವಿಷಯದಲ್ಲಿ ಹಿಂದುಳಿದಿಲ್ಲ.

ಅವರು ಪ್ರತಿಯೊಂದು ವಿಷಯದಲ್ಲಿಯೂ ಹುಡುಗರಿಗೆ ಸ್ಪರ್ಧೆ ನೀಡಲು ಸಿದ್ಧರಿದ್ದಾರೆ. ಮನೆಯನ್ನು ನಿರ್ವಹಿಸುವುದಿರಲಿ, ದೇಶದ ರಕ್ಷಣೆಯ ವಿಷಯವಿರಲಿ ದೇಶದ ಸರಹದ್ದಿನಲ್ಲಿ ಹೋರಾಡುವ ವಿಷಯವಿರಲಿ ಇಂದು ಮಹಿಳೆ ಎಲ್ಲ ವಿಷಯದಲ್ಲಿಯೂ ಮುಂದಿದ್ದಾರೆ.

 

ಇಂದು ನಿಮಗೆ ಇಂತಹ ಶೂರ ಐಪಿಎಸ್ ಮಹಿಳೆಯ ಕುರಿತು ತಿಳಿಸುತ್ತಿದ್ದೇವೆ. ಅವರ ಹೆಸರು ಕೇಳಿದರೆ ಸಾಕು ಕ್ರಿಮಿನಲ್‌ಗಳು ನಡುಗುತ್ತಾರೆ. ಅಸ್ಸಾಮ್‌ನ ಮಹಿಳಾ ಐಪಿಎಸ್ ಅಧಿಕಾರಿ ಸಂಜುಕ್ತಾ ಪರಾಶರ್ ಸಾಹಸಕ್ಕೆ ಇನ್ನೊಂದು ಹೆಸರು. ಅವರನ್ನು ಲೇಡಿ ಸಿಂಗಮ್ ಎಂದೂ ಕರೆಯಲಾಗುತ್ತಿದೆ.

2006ರಲ್ಲಿ ಯುಪಿಎಸ್ ಪರೀಕ್ಷೆಯಲ್ಲಿ 85ನೆ ರ್ಯಾಂಕ್ ಪಡೆದ ಇವರು ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಅಸ್ಸಾಮ್ ಸೋನಿತಾಪುರದ ಎಸ್ಪಿಯಾಗಿದ್ದಾರೆ.

 

ಸಂಜುಕ್ತಾ ಪರಾಶರ್ ಉಗ್ರವಾದಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.ಅಸ್ಸಾಮ್‌ನಲ್ಲಿ ಭಯೋತ್ಪಾದಕರ ಹೆಡೆಮುರಿಕಟ್ಟುತ್ತಿದ್ದಾರೆ. ವರ್ಷವೊಂದರಲ್ಲಿ ನೂರಾರು ಉಗ್ರರನ್ನು ಬಂಧಿಸಿದ್ದಾರೆ,

 

ಸಂಜುಕ್ತಾ ರಾಜಕೀಯ ವಿಜ್ಞಾನದಲ್ಲಿ ದಿಲ್ಲಿಯ ಇಂದ್ರಪ್ರಸ್ಥ ಕಾಲೇಜಿನಿಂದ ಗ್ರಾಜುವೇಟ್ ಪಾಸಾಗಿದ್ದಾರೆ. ನಂತರ ಜೆಎನ್‌ಯುನಿಂದ ಇಂಟರ್‌ನೇಶನಲ್ ರಿಲೇಶನ್‌ನಲ್ಲಿ ಪಿಜಿ ಮತ್ತು ಯುಎಸ್ ಫಾರಿನ್ ಪಾಲಿಸಿಯಲ್ಲಿ ಎಂಪಿಲ್ ಮತ್ತು ಪಿಎಚ್‌ಡಿ ಮಾಡಿದ್ದಾರೆ.

 

ಜೊತೆಗೆ ಸಂಜುಕ್ತಾ ಐಎಎಸ್ ಅಧಿಕಾರಿ ಪುರುಗುಪ್ತಾರನ್ನು ವದುವೆಯಾಗಿದ್ದಾರೆ. ದಂಪತಿಗೆ ಒಂದು ಮಗು ಇದೆ. ಅಸ್ಸಾಮ್‌ನ ಪುತ್ರಿ ಸಂಜುಕ್ತಾ ಈಗ ಎಲ್ಲರಿಗೂ ಮಾದರಿಯಾಗಿದ್ದಾರೆ. ದೇಶದಲ್ಲಿ ಅಸ್ಸಾಮ್‌ನ ಗೌರವವನ್ನು ಎತ್ತರಿಸಿದ್ದಾರೆ.

ಇವರು 68ನೆ ವಯಸ್ಸಿನಲ್ಲಿ ಶಾಲೆಗೆ ಹೋಗುತ್ತಿರುವುದು ಯಾಕೆ ಗೊತ್ತೇ ?

ಉಗ್ರರನ್ನು ನಡುಗಿಸಿದ ಮಹಿಳೆ; ಈಕೆಯ ತಲೆಗೆ ಐಸಿಸ್ ಘೋಷಿಸಿದ ಬಹುಮಾನವೆಷ್ಟು ಗೊತ್ತೇ?