,

ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಪತ್ರಿಕೆ ಹಾಕುವ ಹುಡುಗಿ : ಈಕೆ ಮಾಡಿದ ಸಾಧನೆಯೇನು ?

ಒಬ್ಬಳು ಹುಡುಗಿ ಮನಸ್ಸು ಮಮಾಡಿದರೆ ಜಗತ್ತಿನಲ್ಲಿ ಎಲ್ಲ ಕೆಲಸವನ್ನು ಮಾಡಬಲ್ಲಳು ಎನ್ನುವ ಮಾತಿದೆ. ಅಗತ್ಯವಿದ್ದರೆ ಡಿಶೂಂ ಡಿಶೂಂಗೂ ಹೆದರುವವಳಲ್ಲ. ಇಲ್ಲಿ ರಾಜಸ್ತಾನದ ಜೈಪುರ ನಿವಾಸಿ ಅರಿನಾ ಖಾನ್ ಯಾನೆ ಪಾರೊಲ ಬದುಕಿಗಾಗಿ ಅದಮ್ಯಸಾಹಸ ಮೆರೆದ ಕತೆಯನ್ನು ಇಲ್ಲಿದೆ ಪಾರೋಳಿಗೆ ಒಂಬತ್ತು ವರ್ಷವಾಗಿದ್ದಾಗ ಜೈಪುರನಗರದ ಬೇರೆಬೇರೆ ಕಡೆಗೆ ಪತ್ರಿಕೆ ಹಂಚುವ ಕೆಲಸವನ್ನು ಅವಳು ಮಾಡಿದ್ದಾಳೆ. ಈ ಕೆಲಸ ಮಾಡಿದ ದೇಶದ ಮೊದಲ ಮಹಿಳೆ ಅವಳಾಗಿದ್ದಾಳೆ.

ತಂದೆ ರೋಗಿಯಾದ ಹಿನ್ನೆಲೆಯಲ್ಲಿ ಪತ್ರಿಕೆ ಹಾಕುವ ಕೆಲಸ ಮಾಡಬೇಕಾಯಿತು:

ಪಾರೊಳ ತಂದೆ ಸಲೀಮ್ ಖಾನ್ ಪತ್ರಿಕೆ ಹಾಕುವ ಕೆಲಸಮಾಡುವವರು ಆಗಿದ್ದರು. ಆದರೆ ಅವರಿಗೆ ಟೈಫಾಯ್ಡಿ ತಗಲಿತು. ಇದರ ಕಾರಣ ಅವರು ದುರ್ಬಲಾಗುತ್ತಾ ಹೋದರು. ಆರಂಭದಲ್ಲಿ ಪಾರೊ ಅವರಿಗೆ ನೆರವಾಗಲು ಅವರ ಜೊತೆ ಬರುತ್ತಿದ್ದರು. ಕೆಲವೊಮ್ಮ ಸೈಕಲ್ ತುಳಿಯುತ್ತಿದ್ದಳು. ಕೆಲವೊಮ್ಮೆ ಪತ್ರಿಕೆ ಹಾಕಲು ತಂದೆಗೆ ನೆರವಾಗುತ್ತಿದ್ದರು. ಈ ನಡುವೆ ಆಕೆಯ ತಂದೆ ಮೃತರಾದರು. ಕುಟುಂಬದ ಹೊಣೆ ಅವಳ ಹೆಗಲಿಗೆ ಬಿತ್ತು. ಆನಂತರ ಅವಳು ಸಹೋದರ ಜೊತೆ ಬೆಳಗ್ಗೆ ಐದು ಗಂಟೆಯಿಂದ ಎಂಟು ಗಂಟೆವರೆಗೆ ಪೇಪರ್ ಹಾಕುವ ಕೆಲಸ ಮಾಡಿದಳು.

ತನ್ನ ಕಷ್ಟವನ್ನು ಸ್ವಯಂ ಹೋರಾಡಿಗೆದ್ದಳು:

ಕಷ್ಟ ಬಂದರೆ ಸರಮಾಲೆಯಂತೆ ಬರುತ್ತವೆ ಎನ್ನುವುದಿದೆ. ಕೆಲವರು ಮನೆಯ ಗೋಡೆಯನ್ನು ಸೀಳಿ ಕಷ್ಟಗಳು ದಾಳಿಯಿಡುತ್ತವೆ ಎನ್ನುತ್ತಾರೆ. ಅರಿನಾಳ ಕಷ್ಟವೂ ಹೀಗೆ ಇತ್ತು. ಹೀಗೆ ಬೆಳ್ಳಬೆಳಗ್ಗೆ ಸೈಕಲ್‌ನಲ್ಲಿ ಪತ್ರಿಕೆ ಹಂಚಲು ಹೊರಟರೆ ಪುಂಡಪುಡಾರಿಗಳು ತಮಾಷೆ ಚುಡಾವಣೆಗೆ ಬರುತ್ತಿದ್ದರು. ಕೆಲವರಿಗೆ ಅವಳು ಚಾಟಿಮಾತು ಆಡಿದರೆ, ಇನ್ನುಕೆಲವರಿಗೆ ಹೊಡೆದೇ ಬಿಡುತ್ತಿದ್ದಳು.

ಕಷ್ಟ ಏನಿದದರೂ ಕಲಿಯುವುದು ಬಿಡಲಿಲ್ಲ:

ಬೆಳ್ಳಬೆಳಗ್ಗೆ ಪತ್ರಿಕೆ ಮಾರುವುದು ಮತ್ತು ಒಂದು ನರ್ಸಿಂಗ್ ಹೋಮ್‌ನಲ್ಲಿ ಪಾರ್ಟ್ ಟೈಂ ಕೆಲಸ ಅರಿನಾ ಮಾಡಿದಳು. ಇಲ್ಲಿ ಸಂಜೆ ಆರರಿಂದ ರಾತ್ರೆ ಹತ್ತುಗಂಟೆವರೆಗೆ ಅವಳ ಕೆಲಸ . ಇದೇ ಕಷ್ಟದ ದಾರಿಯಲ್ಲಿ ಮುನ್ನಡೆದು ಪಿಯುಸಿ, ಪದವಿ ಕಲಿತೇ ಬಿಟ್ಟಳು. ಜೊತೆಗೆ ಕೆಲಸಕ್ಕೆ ಯೋಗ್ಯವಾಗುವಂತೆ ಕಂಪ್ಯೂಟರ್‌ಕೋರ್ಸ್ ಕೂಡಾ ಮಾಡಿದ್ದಾಳೆ. ಈಗ ಇಪ್ಪತ್ತಮೂರು ವರ್ಷ ಅವಳಿಗೆ . ಬೆಳಗ್ಗೆ ಪತ್ರಿಕೆ ಮಾರುವ ಜೊತೆಗೆ ಖಾಸಗಿ ಕಂಪೆನಿಯಲ್ಲಿ ನೌಕರಿ ಕೂಡ ಮಾಡುತ್ತಿದ್ದಾಳೆ.

ರಾಷ್ಟ್ರಪತಿ ಕೂಡ ಅರಿನಾಳನ್ನು ಗೌರವಿಸಿದರು:

ತನ್ನ ಜೀವನಕ್ಕಾಗಿ ಸಂಘರ್ಷ ನಡೆಸಿದ ಅರಿನಾ ಇಂದು ಗೌರವಾನ್ವಿತ ಹೆಸರು ಆಗಿದ್ದಾರೆ. ಜನರು ಇಂದು ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಅರಿನಾಳಿಗೆ ರಾಷ್ಟ್ರಪತಿ ಸನ್ಮಾನಿಸಿದ್ದಾರೆ. ತನ್ನ ಅನಿವಾರ್ಯತೆ ಇಂದು ನನ್ನನ್ನು ಈಸ್ಥಿತಿಗೆ ತಂದಿದೆ ಎಂದು ಅರಿನಾ ಹೇಳುತ್ತಾಳೆ.

ಕಾರಿನ ಹಿಂದೆ ರೌಂಡ್ ರೌಂಡ್ ಇದೆಯಲ್ಲ ಅದೇನು? ಯಾಕಿದೆ?

ಮುಂಬೈಯ ಮಾಫಿಯ ಸಾಮ್ರಾಜ್ಯವನ್ನು ಹದ್ದು ಬಸ್ತಿನಲ್ಲಿಟ್ಟ ಈ ‘ಲೇಡಿ ಸಿಂಗಂ’ ಬಗ್ಗೆ ನಿಮಗೆಷ್ಟು ಗೊತ್ತು ?