,

Love

ರಾತ್ರೊ ರಾತ್ರಿ ಸ್ವಾರ್ ಆದ ಹಳ್ಳಿ ಹುಡುಗಿ ಬಗ್ಗೆ ನಿಮಗೆಷ್ಟು ಗೊತ್ತು ?

ಈ ಹುಡುಗಿ ಕೆಲವು ಸಮಯದ ಹಿಂದೆ ಗ್ರಾಮದಲ್ಲಿ ವಾಸಿಸುತ್ತಿದ್ದ ಸಾಮಾನ್ಯಹುಡುಗಿಯಾಗಿದ್ದಾಳೆ. ಈಗ ಅವಳು ಸೂಪರ್‍ಸ್ಟಾರ್. ನಾವು ಸಿನೆಮಾ ಸೈರಾಟ್‍ನ ನಟಿ ರಿಂಕೂ ರಾಜ್‍ಗುರು ಕುರಿತು ಹೇಳುತ್ತಿದ್ದೇವೆ. ಅವರು ಬ್ಲಾಕ್ ಬಸ್ಟರ್ ಸಿನೆಮಾ ನೀಡಿ ಲಕ್ಷಾಂತರ ಜನರ ಮನಸೂರೆಗೊಂಡಿದ್ದಾರೆ.

ಕೆಳವು ದಿವಸಗಳ ಹಿಂದೆ ರಿಂಕೂ ತನ್ನ ಹತ್ತನೆ ತರಗತಿ ಪರೀಕ್ಷೆ ಬರೆಯಲು ತನ್ನ ಶಾಲೆಗೆ ಹೋದಾಗ ಜೋರಾಗಿ ಸ್ವಾಗತಿಸಲಾಯಿತು. ಇಷ್ಟೇ ಅಲ್ಲ, ಅವಳನ್ನು ಸ್ವಾಗತಿಸಲು ಶಾಲೆಯ ಪ್ರಿನ್ಸಿಪಾಲ್ ಕೂಡಾತನ್ನ ಕುರ್ಚಿಬಿಟ್ಟೆದ್ದು ನಿಂತರು. ವಾಸ್ತವದಲ್ಲಿ ಸ್ಟಾರ್‍ಡಮ್‍ನ ಇದಕ್ಕಿಂತ ಒಳ್ಳೆಯ ಮತ್ತು ಇತರ ಯಾವುದೇ ಉದಾಹರಣೆ ಸಿಗಲಾರದು. ರಿಂಕೂಳಿಗೆ ಅವಳ ಉತ್ತಮ ಅಭಿನಯಕ್ಕಾಗಿ ರಾಷ್ಟ್ರೀಯ ಚಿತ್ರ ಪ್ರಶಸ್ತಿ ನೀಡಲಾಗಿದೆ.

ಅವಳ ಸಿನೆಮಾ ಮರಾಠಿಯಾಗಿದೆ.ಆದರೆ ಈ ಸಿನೆಮಾವನ್ನು ಪ್ರತಿಯೊಬ್ಬರೂ ಶ್ಲಾಘಿಸಿದ್ದಾರೆ. ರಿಂಕು  ಕೇವಲ 16ವರ್ಷದ ಬಾಲಕಿಯಾಗಿದ್ದಾಳೆ. ಈ ಸಿನೆಮಾದಲ್ಲಿ ಅವಳು ಆಚಿ ಎನ್ನುವ ಓರ್ವ ಹುಡುಗಿಯ ಪಾತ್ರವನ್ನು ಮಾಡಿದ್ದಳು. ಮಹಾರಾಷ್ಟ್ರದಲ್ಲಿ ಮಾರ್ಚ್ ಏಳರಿಂದ ಎಸೆಲ್ಸಿ ಪರೀಕ್ಷೆ ಶುರವಾಗುತ್ತದೆ. ರಿಂಕೂಳ ಪರಿಕ್ಷಾ ಕೇಂದ್ರ ಸೋಲಾಪುರದ ಜೀಜಾಮಾತಾ ಕನ್ಯಾ ಸ್ಕೂಲಿನಲ್ಲಿದೆ.

ಅವಳನ್ನು ಪ್ರಿನ್ಸಿಪಾಲ್ ಹೂಗುಚ್ಛ ನೀಡಿ ಸ್ವಾಗತಿಸಿದರು. ತನ್ನ ಕಲಿಕೆಯ ಕುರಿತು ತಿಳಿಸಿದ ರಿಂಕೂ ತನ್ನ ಎಲ್ಲ ಸಿಲೆಬಸ್‍ನ್ನು ಒಂದು ತಿಂಗಳಲ್ಲಿ ಪೂರ್ತಿಗೊಳಿಸಿದ್ದೇನೆ ಎಂದು ತಿಳಿಸಿದ್ದಾಳೆ.  ಸಿನೆಮಾ ಸೇರಾಟ್‍ಗಾಗಿ ರಿಂಕೂ ಮಧ್ಯದಲ್ಲಿಯೇ ಕಲಿಕೆಯನ್ನು ಬಿಡಬೇಕಾಗಿ  ಬಂದಿತ್ತು.

ಯಾಕೆಂದರೆ ರಿಂಕೂ ಎಷ್ಟು ಪ್ರಸಿದ್ಧಿ ಪಡೆದಿದ್ದಳೆಂದರೆ, ಶಾಲೆಗೆ ಹೋಗುವಾಗ ಅವಳನ್ನು ಮಕ್ಕಳು ಸುತ್ತುವರಿಯುತ್ತಿದ್ದರು. ಹೀಗಾಗಿ ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತಿತ್ತು.ಹೀಗಾಗಿ ಖಾಸಗಿಯಾಗಿ ಪರೀಕ್ಷೆಯನ್ನು ಬರೆಯುವ ಮನವಿ ಮಾಡಿಕೊಂಡಿದ್ದಳು.

ಸಿನೆಮಾ ಸೈರಾಟ್‍ನ ಬಳಿಕ ಅವಳ ಜೀವನ ಸಂಪೂರ್ಣ ಬದಲಾಗಿದೆ. ಅವಳ ಬಳಿ ಡಝನ್‍ಗಟ್ಟಲೆ ಸಿನೆಮಾಗಳ ಆಫರ್ ಇದೆ. ಆದರೆ ಕಲಿಕೆಗೆ ಜೀವನದಲ್ಲಿ ಮಹತ್ವವಿದೆ. ಮತ್ತು ತಮಗಾಗಿ ಉತ್ತಮ ಶಿಕ್ಷಣವನ್ನು ಅವಳು ಬಯಸುತ್ತಿದ್ದಾಳೆ. ವಿಶೇಷವೆಂದರೆ ಕರಣ್ ಜೊಹರ್‍ರಂತಹ ನಿರ್ಮಾಪಕರು ಅವಳ ಸಿನೆಮಾವನ್ನುಹಿಂದಿಯಲ್ಲಿ ರಿಮೇಕ್ ಮಾಡುತ್ತಿದ್ದಾರೆ.

 

ವೇಸ್ಟ್ ಪ್ಲಾಸ್ಟಿಕ್ ಗಳನ್ನು ಉಪಯೋಗಿಸಿ ರಸ್ತೆ ನಿರ್ಮಿಸಿಸುವುದು ಹೇಗೆ ನೋಡಿ !

ಮನೆಮಠ ತೊರೆದು ಬಂದ ವಿದೇಶಿ ಹುಡುಗಿ: ಇವರ ಫೇಸ್ಬುಕ್ ಪ್ರೇಮ ಹೇಗಿತ್ತು ಗೊತ್ತಾ ?