,

WTF

ರಸ್ತೆಗಳ ಗುಂಡಿಗಳನ್ನು ಮುಚ್ಚುತ್ತಿರುವ  12 ವರ್ಷದ ಬಾಲಕ: ಕಾರಣ ಕೇಳಿದ್ರೆ ಕಣ್ಣೀರು ಬರುತ್ತೆ

ಹೈದರಾಬಾದ್: ಹನ್ನೆಡು ವರ್ಷ ಪ್ರಾಯದ ರವಿತೇಜ ರಸ್ತೆಯ ಗುಂಡಿಗಳನ್ನು ಮುಚ್ಚುತ್ತಿದ್ದಾನೆ. ಹೈದರಾಬಾದ ಹಾಬಿಸ್ಗುಡಾ ಪ್ರದೇಶದ ರಸ್ತೆಯಲ್ಲಿ ಬೈಕ್ ಅಪಘಾತವನ್ನು ನೋಡಿದ ಬಳಿಕ ಈ ಬಾಲಕ ಈ ಕೆಲಸ ಮಾಡುತ್ತಿದ್ದಾನೆ. ಅಂದು ಅಪಘಾತದಲ್ಲಿ ಬೈಕ್‌ಲ್ಲಿದ್ದ ಮೂವರು ಮೃತಪಟ್ಟಿದ್ದರು. ರಸ್ತೆಯ ಗುಂಡಿಯಿಂದಾಗಿ ಬೈಕ್‌ಸವಾರರು ಬಿದ್ದಿದ್ದರು. ತಲೆಗೆ ಪೆಟ್ಟಾಗಿ ಮೂವರೂ ಸತ್ತಿದ್ದರು.

 

 

ಈ ಘಟನೆಯ ನಂತರ ಕನ್ಸಟ್ರಕ್ಷನ್ ವರ್ಕರ್ ಡಿ. ಸೂರ್ಯನಾರಾಯಣ ಮತ್ತು ಗೃಹಿಣಿ ನಾಗಮಣಿಯ ಹನ್ನೆರಡು ವರ್ಷದ ಮಗ ರವಿತೇಜ ಗುಂಡಿ ಮುಚ್ಚಿ ರಸ್ತೆಯಲ್ಲಿ ಪ್ರಯಾಣ ಸುಗಮಗೊಳಿಸುವ ಕೆಲಸಕ್ಕಿಳಿದಿದ್ದಾನೆ. ಅಧಿಕಾರಿಗಳು ರಸ್ತೆ ರಿಪೇರಿ ಮಾಡುವುದನ್ನು ಕಾಯುವ ಬದಲು ನಾವೇ ರಸ್ತೆ ರಿಪೇರಿ ಮಾಡುವುದು ಉತ್ತಮ ಎಂದು ರವಿತೇಜಾ ಹೇಳುತ್ತಾನೆ. ಯಾಕೆಂದರೆ ಅಧಿಕಾರಿಗಳು ರಸ್ತೆಯ ಗುಂಡಿಯ ಬಗ್ಗೆ ಮೌನವಾಗಿದ್ದಾರೆ.

 

ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಮಾರ್ಚ್‌ ಒಂದರಂದು ರಸ್ತೆಯ ರಿಪೇರಿ ಈ ತಿಂಗಳ ಕೊನೆಯೊಳಗೆ ಮಾಡಿ ಮುಗಿಸಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದ್ದರು. ಅದಕ್ಕಾಗಿ ಬಜೆಟ್ ಮೀಸಲಿಡುವುದಾಗಿ ಹೇಳಿದ್ದರು. ರಸ್ತೆಯಲ್ಲಿ ಗುಂಡಿ ಕಂಡರೆ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.  ರಾವ್‌ರ ಆದೇಶದ ಅವಧಿ ಮುಗಿದು ತಿಂಗಳುಗಳೇ ಕಳೆಯಿತು. ಆದರೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ರಸ್ತೆಗಳು ಈಗಲೂ ಕೆಟ್ಟ ಸ್ಥಿತಿಯಲ್ಲಿವೆ. ಹೊಂಡ ಗುಂಡಿಗಳಿವೆ.

 

ಆದ್ದರಿಂದ ತಾನು ಏನಾದರೂ ಮಾಡಬೇಕೆಂದು ಅನಿಸಿ ಸಮಯಸಿಕ್ಕಾಗಲೆಲ್ಲ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದೇನೆ ಎಂದು ರವಿತೇಜ ಹೇಳುತ್ತಿದ್ದಾನೆ. ಅತ್ತಿತ್ತ ಹೋಗಿ ಅಲ್ಲಿಂದ ಕಲ್ಲು, ಇಟ್ಟಿಗೆ ಇತ್ಯಾದಿ ತಂದು ಗುಂಡಿಗೆಹಾಕುತ್ತಾನೆ. ತೀರಾ ಬಿಜಿಯಾಗಿರುವ ರಸ್ತೆಯಲ್ಲಿ ಧೂಳೇಳುತ್ತಿದ್ದರೂ ಆತ ಗಂಟೆಗಟ್ಟಲೆ ಈ ಕೆಲಸಮಾಡುತ್ತಾನೆ. ಸ್ಥಳೀಯ ಸರಕಾರಿ ಶಾಲೆಯಲ್ಲಿ ಆರನೆ ತರಗತಿಯಲ್ಲಿ ಕಲಿಯುತ್ತಿರುವ ತೇಜನಿಗೆ ಪ್ರಶಂಸೆಯ ಸುರಿಮಳೆಯೇ ಬಿದ್ದಿದೆ.

 

 

ವಿದ್ಯಾರ್ಥಿನಿಯೊಂದಿಗೆ ಅಶ್ಲೀಲ ಭಂಗಿಯಲ್ಲಿ ಪೋಟೋ ತೆಗೆದು ಈ ಶಿಕ್ಷಕ ಮಾಡಿದ್ದೇನು ಗೊತ್ತೇ ?

ಇವರು 68ನೆ ವಯಸ್ಸಿನಲ್ಲಿ ಶಾಲೆಗೆ ಹೋಗುತ್ತಿರುವುದು ಯಾಕೆ ಗೊತ್ತೇ ?