,

ಮೆಹಂದಿ ಬಳಸುತ್ತೀರಾ ?;ಹಾಗಾದರೆ ಇದನ್ನು ಓದಿ

ಕಪ್ಪಗಿನ ಮೆಹಂದಿ ಹಚ್ಚಿದ ಬಳಿಕ ಕೈ ಊದಿಕೊಂಡಿದೆ. ಏಳು ವರ್ಷ ವಯಸ್ಸಿನ ಬಾಲಕಿಯ ಕೈ ಹೀಗಗಾಗಿದೆ. ಈಜಿಪ್ಟ್‍ನಲ್ಲಿ ಈ ಘಟಟನೆ ನಡೆದಿದ್ದು, ಬಾಲಕಿಯ ಹೆಸರು ಮ್ಯಾಡಿಸನ್ ಗಲಿವಸ್ ಎಂದಾಗಿದೆ. ಕೈಗೆ ಮೆಹಂದಿ ಹಚ್ಚಿದ ನಂತರ ಬಾಲಕಿಗೆ ತುರಿಕೆ ಕಾಣಿಸಿಕೊಂಡಿತ್ತು.   ಆದರೆ ಅದನ್ನು ಅಷ್ಟು ದೊಡ್ಡ ವಿಷಯವನ್ನಾಗಿ ಮಾಡಲಿಲ್ಲ.

ಸ್ವಲ್ಪಸಮಯದ ಬಳಿಕ ಬಾಲಕಿಯ ಕೈಯಲ್ಲಿ ಗುಳ್ಳೆಗಳು ಎದ್ದವು. ಅಸಹನೀಯ ನೋವಿನಿಂದ ಮಗು ಆಳತೊಡಗಿತು. ನಂತರ ಬಾಲಕಿಯನ್ನು ಆಸ್ಪತ್ರೆಗೆ  ಕರೆದುಕೊಂಡು ಹೋಗಲಾಗಿದೆ. ವೈದ್ಯರು ಮಗುವಿನ ಕೈಗೆ ಕ್ರೀಮ್ ಹಚ್ಚಿ ಚಿಕಿತ್ಸೆ ಮಾಡಿದ್ದರು ಆದರೂ ನೋವು ತಡೆಯಲು ಸಾಧ್ಯವಾಗಲಿಲ್ಲ.

ನಂತರ ಬಾಲಕಿಯನ್ನು ಸುಟ್ಟಗಾಯ ತಜ್ಞರ ಬಳಿಕೆ ಕರೆದುಕೊಂಡು ಹೋಗಲು ಶಿಫಾರಸು ಮಾಡಿದರು. ಮಗುವಿಗೆ ಸುದೀರ್ಘ ಚಿಕಿತ್ಸೆ ನೀಡಬೇಕಾಯಿತು. ಈಗ ಕಳೆದ ತಿಂಗಳುಗಳಿಂದ  ಸುಟ್ಟಗಾಯ ವಾಸಿಯಾಗಲು ಬಾಲಕಿಗೆ ಪ್ರೆಸರ್ ಬ್ಯಾಂಡೇಜ್ ಹಾಕಲಾಗಿದೆ ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ. ಕಪ್ಪುಮೆಹಂದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೋಕ್ಸಿಕ್ ಕೆಮಿಕಲ್ ಪಾರಫೆನಿಲೆನಿಡಯಾಮಿನ್ (ಪಿಪಿಡಿ) ಸೇರಿಕೊಂಡಿತು. ಇದು ಕೆಲವು ಜನರಲ್ಲಿ ಅಲರ್ಜಿ ಮತ್ತು ವಿಪರೀತ ಪರಿಣಾಮ ಉಂಟು ಮಾಡುತ್ತಿದೆ. ಇದು ಬಾಲಕಿಯಲ್ಲಿ ಗಾಯಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಕಡಿಮೆ ಮೌಲ್ಯದ, ಕಳಪೆ ಗುಣಮಟ್ಟದ ಮೆಹಂದಿಗಳನ್ನು ಬಳಸುವವರು ಎಚ್ಚರಿಕೆ ವಹಿಸಬೇಕು.

ಎಚ್ಚರ ! ಈ ನಾಲ್ಕು ವಸ್ತುಗಳು ಹೆಚ್ಚಾಗಿ ಬಳಸಿದರೆ ಪುರುಷತ್ವ ಕಳೆದುಕೊಳ್ತೀರಿ

ಚ್ಯೂಯಿಂಗ್ ಗಮ್‍ ಜಗಿಯುವವರು ಓದಲೇ ಬೇಕಾದ ಸುದ್ದಿ !