,

ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದೆ ಎನ್ನುವ ಪ್ರಾಣಿಯ ಫೋಟೊ ವೈರಲ್: ಆದರೆ ಸತ್ಯವೇನು ಗೊತ್ತೇ?

ಬಡ್ವಾನಿ: ಮಧ್ಯಪ್ರದೇಶದ ಬಡವಾಣಿಯಲ್ಲಿ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸುವ ಅಜ್ಞಾತ ಪ್ರಾಣಿಯೊಂದು ಇದೆ. ಅದರ ಫೊಟೊ ಈಗ ಸೋಶಿಯಲ್ಲಮೀಡಿಯದಲ್ಲಿ ವ್ಯಾಪಕವಾಗಿ ಹರಡಿದೆ.
ಈ ಪ್ರಾಣಿ ಮಹಿಳೆಯರು ಸಿಕ್ಕಿದರೆ ಅವರ ಬಟ್ಟೆ ಹರಿದು ಅವರೊಂದಿಗೆ ಅಶ್ಲೀಲ ಕೆಲಸ ಮಾಡುತ್ತದೆ ಎಂದು ಪ್ರಚಾರ ಮಾಡಲಾಗಿದೆ.

ಫೋಟೊ ನೋಡಿ ಮಧ್ಯಪ್ರದೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ಹೆದರಿಕೆ ಸೃಷ್ಟಿಯಾಗಿದೆ. ಫೋಟೊ ಮನುಷ್ಯ ದೇಹದ ಪ್ರಾಣಿಯಂತೆ ಕಾಣಿಸುತ್ತಿದೆ. ಆದರೆ ಈ ಫೋಟೊ ಇಂಟರ್‌ನೆಟ್‌ನಲ್ಲಿಕಳೆದ ಹಲವು ವರ್ಷಗಳಿಂದ ಇದೆ. ಇಂತಹ ಪ್ರಾಣಿ 1950 ರಲ್ಲಿ ಅಮೆರಿಕದ ಮೆರಿಲೆಂಡ್‌ನಲ್ಲಿ ಕಾಣಿಸಿಕೊಂಡಿತ್ತು ಎನ್ನಲಾಗುತ್ತದೆ.

ಅಲ್ಲಿ ಅದನ್ನ ಗಾಟ್‌ಮೆನ್ ಹೆಸರಿನಿಂದ ಕರೆಯುತ್ತಿದ್ದರಂತೆ. ಈಗಾಟ್‌ಮೆನ್ ನ ಫೋಟೊ ನೆಟ್‌ನಲ್ಲಿಬಹಳಷ್ಟು ಸಿಗುತ್ತವೆ. ಯಾವುದೋ ಕೆಟ್ಟ ವ್ಯಕ್ತಿಗಳು ವೆಬ್‌ಸೈಟ್‌ನ ಫೋಟೊ ತೆಗೆದು ಎಡಿಟ್ ಮಾಢಿ ಬಡ್ವಾನಿಯ ಪ್ರಾಣಿ ಎಂದು ಹೆಸರಿಸಿ ವೈರಲ್ ಮಾಡಿರು ವ ಸಾಧ್ಯತೆ ಹೆಚ್ಚಿದೆ.

 

ಮೋಶನ್ ಟೆಕ್ನಿಕ್ ಉಪಯೋಗಿಸಿ ಅಜ್ಞಾತ ಪ್ರಾಣಿಯಂತೆ ಅವರುಮಾಡಿರಬಹುದು. ಇಂತಹ ಪ್ರಾಣಿಗಳು ಮಧ್ಯಪ್ರದೇಶದ ಫಲಿಯಾ, ಸಜವಾನಿ, ಗೋಯಫಲಿಯ ಮತ್ತುಧಮನಯಿಯಲ್ಲಿ ಕೆಲವರು ನೋಡಿದ್ದಾರೆ ಎಂದು ಹೇಳಗಾಗುತ್ತಿದೆ. ಜನರು ಇದನ್ನುಊಸರವಳ್ಳಿ ಎಂದು ಹೆಸರಿಸುತ್ತಾರೆ. ಅಂದರೆ ಆಗಾಗ ಬಣ್ಣ ರೂಪಗಳನ್ನು ಅದು ಬದಲಿಸಬಲ್ಲುದು. ಇದರ ಹೆದರಿಕೆಯಿಂದ ಜನರು ಮನೆಯಿಂದ ರಾತ್ರೆ ವೇಳೆ ಹೊರಗೆ ಬರುವುದಿಲ್ಲ.

 

. ಇದು ರೂಪ ಬಣ್ಣ ಬದಾಯಿಸಿ ಮಹಿಳೆಯರ ಸಂಗಮಾಡುತ್ತದೆ. ಎಂದು ಪ್ರಚಾರ ನಡೆಯುತ್ತಿದೆ. ಕ್ಷಣಮಾತ್ರದಲ್ಲಿ ಅದು ಮಾಯವಾಗಿದೆಯಂತೆ. ನಂತರ ಜನರು ಈ ರೀತಿಯೇ ಹೇಳತೊಡಗಿದ್ದಾರೆ.ಪೊಲೀಸರು ಈ ವಿಚಿತ್ರ ಪ್ರಾಣಿಯ ಪತ್ತೆಗೆ ಇಳಿದಿದ್ದಾರೆ.
ಎಸ್ಪಿ ಪ್ರಶಾಂತ್ ಖರೆ, ಇಂತಹ ಯಾವ ಪ್ರಾಣಿಯೂ ಕಂಡು ಬಂದಿಲ್ಲ ಎಂದು ಹೇಳಿದ್ದಾರೆ. ಜನರು ಅಜ್ಞಾತ ಪ್ರಾಣಿಯ ಕುರಿತು ಹೇಳುತ್ತಾರೆ. ಯಾರೂ ಕೇಸು ದಾಖಲಿಸಿಲ್ಲ. ಜನರು ವದಂತಿ ಕಿವಿಕೊಡಬಾರದು ಎಂದು ಮನವಿ ಮಾಡಿದ್ದಾರೆ.ಆದರೆ ಇದು ಫೊಟೊಶಾಪ್ ಕೈಚಳಕ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ

 

 

ಮಾರುತಿ 800 ಇಂಜಿನ್ ಬಳಸಿ ಹೆಲಿಕಾಪ್ಟರ್ ತಯಾರಿಸಿದ ವೆಲ್ಡರ್ !

ಇಡೀ ವಿಶ್ವಕ್ಕೆ ಮಾದರಿಯಾದ ಕಾಮನಬಿಲ್ಲು ಗ್ರಾಮ!