,

Geeky

ಮದುವೆಯಾಗುತ್ತೇನೆ ಎಂದು ಮೋಸಮಾಡಿದ ಹುಡುಗ: ಇದಕ್ಕೆ ಪ್ರಿಯತಮೆ ಮಾಡಿದ್ದೇನು ಗೊತ್ತಾ ?

ಪ್ರೇಮಿಯೊಂದಿಗೆ ಮದುವೆಯಾಗಲು ಬಹಳಷ್ಟಟು ಪ್ರಯತ್ನಿಸಿದರೂ ಅವನು ಒಪ್ಪದ್ದರಿಂದ ಯುವತಿಯೊಬ್ಬಳು ಹುಡುಗನ ಮನೆಯ ಮುಂದೆ ಹೋಗಿ ಧರಣಿ ಕೂತಿದ್ದಾಳೆ. ಪ್ರಕರಣ ಹರದೋಯಿ ಬಗೌಲಿಯ ಪತ್ತಾಪುರದಲ್ಲಿ ನಡೆದಿದೆ. ಪ್ರಿಯತಮೆ ಪ್ರೇಮಿಯ  ಮನೆ ಮುಂದೆ ಮದುವೆಯಾಗುವಂತೆ ಧರಣಿಕೂತುಕೊಳ್ಳಲು ತೊಡಗಿದ್ದಾಳೆ. ಪತ್ತಾಪುರದ ಆದಿತ್ಯ ಎನ್ನುವಾತನ ಜೊತೆ ಯುವತಿ ಪ್ರೇಮ ಸಂಬಂಧ ಇಟ್ಟುಕೊಂಡಿದ್ದಳು. ಜೂನ್ ಏಳಕ್ಕೆ ಹುಡುಗಿಯ ಮದುವೆ ಆಗುವುದಿತ್ತು. ಆದಿತ್ಯ ಹೇಳಿದ್ದರಿಂದ ಅವಳು ಮದುವೆಯಾಗಿರಲಿಲ್ಲ.  ಈಗ ಮದುವೆಯಾಗಲು ಆದಿತ್ಯ ನಿರಾಕರಿಸಿದ್ದರಿಂದ ಅವಳು ಆತನ ಮನೆ ಮುಂದೆ ಬಂದು ಧರಣಿ ಕೂತಳು.

ತನ್ನ ಪ್ರಿಯತಮನನ್ನು ಪಡೆಯಲಿಕ್ಕಾಗಿದೆ ಪ್ರಿಯತಮೆ  ಆತನ ಮನೆಗೆ  ಮುತ್ತಿಗೆ ಹಾಕಿದ್ದು ವಿಶೇಷಪ್ರಸಂಗವಾಗಿದೆ. ಪ್ರಿಯತಮನ ಮನೆಯವರು ಹಲವು ರೀತಿಯಲ್ಲಿ ಅವಳನ್ನು ಸಮಾಧಾನಿಸಲು ನೋಡಿ ವಿಫಲರಾಗಿದ್ದಾರೆ.ಅವಳ ಹಟದ ಮುಂದೆ ಅವರು ಸೋಲಬೇಕಾಯಿತು. ಪ್ರೇಮಿಯೊಂದಿಗೆ ಮದುವೆ ಮಾಡಿಕೊಡಲು ಅವರು ಸಿದ್ಧವಾಗಬೇಕೆಂದು ಅವಳು ಯತ್ನಿಸುತ್ತಿದ್ದಾಳೆ. ಹುಡುಗಿ ಮತ್ತು ಆದಿತ್ಯ ನಾಲ್ಕು  ವರ್ಷಗಳಿಂದಲೂ ಪ್ರೀತಿಸುತ್ತಿದ್ದರು.  ಪ್ರೇಮ ವಿವಾಹದವರೆಗೆ ಇವರ ಪ್ರೀತಿ ತಲುಪಿತ್ತು. ಕಳೆದ ಜೂನ್ ಏಳಕ್ಕೆ ಅವಳಮದುವೆ ಇತ್ತು ಆಗ ಆದಿತ್ಯ ಅವಳನ್ನು ಮದುವೆಯಾಗದಂತೆ ತಡೆದಿದ್ದಾನೆ. ಆದರೆ ಈಗ ಅವನು ಮದುವೆಯಾಗುವುದರಿಂದ ಹಿಂಜರಿಯುತ್ತಿದ್ದಾನೆ.

ಪ್ರಿಯತಮೆಗೆ  ಅವನು ಅವಳನ್ನೇ ಮದುವೆಯಾಗುತ್ತೇನೆ ಎಂದು ಮಾತುಕೊಟ್ಟಿದ್ದ. ಯುವತಿ ಅವನ ಮನೆಯ ಮುಂದೆ ಬರುವುದರೊಂದಿಗೆ ಹುಡುಗ ತಪ್ಪಿಸಿಕೊಂಡಿದ್ದಾನೆ. ಈಗ ಇಡೀ ಪ್ರಕರಣ ಗ್ರಾಮದ ಪ್ರಧಾನನ ಮುಂದೆ ಇದೆ. ಎರಡು ಕಟುಂಬದವರು ಅವರ ಮುಂದಾಳುತ್ವದಲ್ಲಿ ಪರಿಹಾರ ಕಂಡು ಹುಡುಕಲು ಯತ್ನಿಸುತ್ತಿದ್ದಾರೆ.  ಪ್ರಕರಣ ಪೊಲೀಸರವರೆಗೂ ತಲುಪಿಲ್ಲ. ರಾಜಿಪಂಚಾಯತಿ ಆಗದಿದ್ದರೆ ನಂತರ ಪೊಲೀಸರಿಗೆ ದೂರು ನಿಡುವುದಾಗಿ ಹೇಳುತ್ತಿದ್ದಾರೆ.

ಈ ಮುಗ್ಧ ಮಗು ನಗುವಾಗ ಹೃದಯ ಹೊರ ಬರುತ್ತದೆ.;  ಮನ ಕಲಕುವ ದೃಷ್ಯ

ಕೈದಿ ಮಹಿಳೆಯ ಮಗುವುಗೆ ಮೊಲೆಹಾಲುಣಿಸಿದ ಮಹಿಳಾ ಪೊಲೀಸ್ ಅಧಿಕಾರಿ!