,

Love

ಮಗಳು ತಂದೆಗೆ ಹಾಲುಣಿಸುವ ಚಿತ್ರ ;ಇದರ ಹಿನ್ನಲೆಯೇನು ಗೊತ್ತೇ ?

ಯುರೋಪಿನ ಬಾರ್ತಲೋಮಿಸ್ ಎಸ್ತೆಬಾನ್ ಮುರಿಲ್ಲೋ ಎಂಬ ಕಲಾಕಾರನ ವಿವಾದಿತ ಮತ್ತು ಒಂದು ಕಾಲಘಟ್ಟದ ಚರಿತ್ರೆಯ ಸತ್ಯವನ್ನು ಸಾರುವ ವಿಶ್ವಖ್ಯಾತಿ ಪಡೆದ ಚಿತ್ರವಾಗಿದೆ.

ಒಬ್ಬ ವೃದ್ದನಿಗೆ ಜಲಪಾನ ಕೂಡಾ ಕೊಡದೆ ಮರಣದವರೆಗೂ ಕಾರಾಗೃಹದಲ್ಲಿಡಲು ಅಧಿಕಾರಿಗಳ ಆಜ್ಞೆಯಾಗಿರುತ್ತದೆ. ಮರಣವನ್ನು ಎದುರುನೋಡುತ್ತಾ ಮಲಗಿರುವ ತನ್ನ ತಂದೆಯನ್ನು ಪ್ರತಿದಿನ ಭೇಟಿಯಾಗಲು ಅವಕಾಶ ನೀಡುವಂತೆ ಜೈಲಿನ ಅಧಿಕಾರಿಗಳಲ್ಲಿ ಅನುಮತಿ ಕೇಳುತ್ತಾಳೆ ಆ ಮಗಳು. ಅದಕ್ಕೆ ಅಧಿಕಾರಿಗಳು ಒಪ್ಪಿಗೆ ಕೊಡುತ್ತಾರೆ.


ಭೇಟಿಯಾಗುವ ಮೊದಲು ಆಕೆಯನ್ನು ಸರಿಯಾದ ತಪಾಸಣೆಗೆ ಒಳಪಡಿಸುತ್ತಾರೆ. ಯಾಕೆಂದರೆ ಆಹಾರ ವಸ್ತುಗಳನ್ನು ಒಳಗೆ ಕೊಂಡೊಯ್ಯುವಂತಿರಲಿಲ್ಲ. 


ಅಸಹನೀಯ ಮತ್ತು ಅತಿಕಠಿಣ ಹಸಿವಿನಿಂದ ತನ್ನ ತಂದೆಯ ಶರೀರವು ದಿನದಿಂದ ದಿನಕ್ಕೆ ಸಾವಿಗೆ ಹತ್ತಿರವಾಗುತ್ತಿರುವುದು ಖಚಿತವಾದಾಗ ಬೇರೆ ದಾರಿಗಳನ್ನು ಕಾಣದೆ ನಿಸಹಾಯಕಳಾದ ಆ ಮಗಳು ತುಂಬಾ ದುಃಖಿಸಿದಳು. ತನ್ನ ಪ್ರೀತಿಯ ತಂದೆಯನ್ನು ಮರಣಕ್ಕೆ ಬಿಟ್ಟುಕೊಡಲು ಆಕೆಯ ಮನಸು ಒಪ್ಪಲಿಲ್ಲ. ಆಕೆ ಮನಸಲ್ಲಿ ಒಂದು ನಿರ್ಧಾರವನ್ನು ತೆಗೆಯುತ್ತಾಳೆ.


ಅದುವೇ ಪಾಪಕ್ಕೆ ಸಮಾನವಾದ ,ಜಗತ್ತಿನ ಅಲಿಖಿತ ಕಾನೂನುಗಳಿಗೆ ವಿರುದ್ಧವಾದ ಸ್ನೇಹ ಪರಿಚರಣೆಯ ಮತ್ತೊಂದು ಅಧ್ಯಾಯ ರಚಿಸುವುದಾಗಿತ್ತು ಆ ನಿರ್ಧಾರ.
ನಿಸಹಾಯಕಳಾಗಿ ಯಾರೂ ನೋಡದೆ ತಂದೆಗೆ ಮೊಲೆಹಾಲುಣಿಸಲು ಆರಂಭಿಸಿದಳು….!!.

ಮರಣವನ್ನು ಎದುರು ನೋಡುತ್ತಿದ್ದ ಆತ ದಿನದಿಂದ ದಿನಕ್ಕೆ ಬದುಕಿನೆಡೆಗೆ ಹಿಂತಿರುಗುತ್ತಾನೆ. ಒಂದು ದಿನ ಅಲ್ಲಿನ ಕಾವಲುಗಾರ ಈ ಕೃತ್ಯವನ್ನು ನೋಡಿಯೇ ಬಿಟ್ಟ. ಆಕೆಯನ್ನು ಮೇಲಧಿಕಾರಿಗಳ ಮುಂದೆ ಹಾಜರುಪಡಿಸಿದರು.
ಆ ಘಟನೆಯು ಯುರೋಪಿನೆಲ್ಲೆಡೆ ದೊಡ್ಡ ಸದ್ದು ಮಾಡಿತು. ಜನರು ಇಬ್ಭಾಗವಾಗಿ ಚರ್ಚಿಸತೊಡಗಿದರು.


ಪವಿತ್ರವಾದ ಪುತ್ರಿ ಪಿತೃ ಸಂಬಂಧಕ್ಕೆ ಕಳಂಕ ಬರಿಸಿದವಳು ಎಂದು ಒಂದು ಜನರ ವಿಭಾಗವಾದರೆ
ಮರಣದಲ್ಲೂ ತನ್ನ ತಂದೆಯನ್ನು ರಕ್ಷಿಸಲು ಪ್ರಯತ್ನಿಸಿದ ತಂದೆ ಮಗಳ ಸ್ನೇಹ ವಿಶ್ವಾಸಗಳನ್ನು ಸಮರ್ಥಿಸಿಕೊಂಡು ಇನ್ನೊಂದು ವಿಭಾಗ ಚರ್ಚೆಯಲ್ಲಿ ಸಜೀವವಾದರು.


ಈ ಘಟನೆಯು ಸ್ಪೈನ್ ಮತ್ತು ಯುರೋಪಿನಾದ್ಯಂತ ದೊಡ್ಡ ಚರ್ಚಾ ವಿಷಯವಾಗಿತ್ತು. ಉರಿದು ಜ್ವಲಿಸುತ್ತಿರುವ ಜನಕೀಯ ಪ್ರತಿಕ್ಷೇದಗಳ ನಡುವೆ ಕಾನೂನಿನ ಜಯವು ಮಾನವೀಯತೆಯ ಪಕ್ಷದ ಜೊತೆ ನಿಂತಿತ್ತು.
ಒತ್ತಡಗಳಿಗೆ ತಲೆಬಾಗಿದ ಅಧಿಕಾರಿಗಳು ಕೊನೆಗೆ ಆ ತಂದೆ ಮತ್ತು ಮಗಳನ್ನು ಕಾರಾಗ್ರಹದಿಂದ ಬಿಡುಗಡೆ ಮಾಡಿದರು

 

ಮೂಲ: ವಿಶ್ವನಾಥ್ ಬಿಎಂ ರವರ ಮುಖಪುಟದಿಂದ.

ಈ ರೆಸ್ಟೋರೆಂಟ್ ನಲ್ಲಿ ಸಿಗುವ ಸ್ಪೆಷಲ್ ಅಹಾರಗಳೇನು ಗೊತ್ತೇ ?

ಟೂತ್ ಪೇಸ್ಟ್ ನಲ್ಲಿ ಬಂತು 7 ಲಕ್ಷ ಮೌಲ್ಯದ ಚಿನ್ನ !