, ,

ಭಾರತದಲ್ಲಿ ಫ್ಯಾನ್ ಗೆ 3 ರೆಕ್ಕೆ , ವಿದೇಶಗಳಲ್ಲಿ 4 ರೆಕ್ಕೆಗಳು ! ಯಾಕೆ ಗೊತ್ತಾ ?

ಸಾಮಾನ್ಯವಾಗಿ ಜನರನ್ನು ನಾಲ್ಕು ಬ್ಲೇಡ್ ಇರುವ ಫ್ಯಾನ್‌ಗಳು ಆಕರ್ಷಿಸುತ್ತದೆ. ಇದು ಸಾಂಪ್ರದಾಯಿಕ ಫ್ಯಾನಿಗಿಂತ ಭಿನ್ನವಾದುದು. ಆದರೆ ಇದಕ್ಕೆ ಬಲವಾದ ಕಾರಣಗಳು ಇವೆ. ನೀವು ಕೂಡ ಯೋಚಿಸುತ್ತಿರಬಹುದು. ಫ್ಯಾನ್‌ಗಳಲ್ಲಿ ಕೆಲವಕ್ಕೆ ಮೂರು ಬ್ಲೇಡ್‌ಗಳು , ಇನ್ನು ಕೆಲವಕ್ಕೆ ನಾಲ್ಕು ಬ್ಲೇಡ್‌ಗಳು ಯಾಕೆಂದು ಯೋಚಿಸುತ್ತಿರಬಹುದು.

 

ಯಾರಾದರೂ ಫಿಸಿಕ್ಸ್ ಕಲಿತಿದ್ದರೆ ಅದರ ಹಿಂದಿನ ಲಾಜಿಕ್ ಅವರಿಗೆ ಗೊತ್ತಿರುತ್ತದೆ. ಆದರೆ ಯಾರಿಗೆ ಆ ಬಗ್ಗೆ ಗೊತ್ತಿಲ್ಲ ಅಂತಹವವರು ಈ ಬರಹದ ಮೂಲಕ ಕಾರಣವನ್ನು ತಿಳಿದುಕೊಳ್ಳಬಹುದು.

ವಿದೇಶಗಳಲ್ಲಿ ನಾಲ್ಕು ಬ್ಲೇಡ್‌ನ ಫ್ಯಾನ್ ಇಷ್ಟ ಪಡುವವರು ಹೆಚ್ಚುಇದ್ದಾರೆ. ಭಾರತದಲ್ಲಿ ಮೂರು ಬ್ಲೇಡ್‌ನ ಫ್ಯಾನ್‌ಗಳನ್ನೇ ಬಯಸುವವರು ಹೆಚ್ಚು.

 

ಯಾಕೆಂದರೆ ಇದಕ್ಕೆಕಾರಣವಿದೆ. ನಾಲ್ಕು ಬ್ಲೇಡ್‌ನ ಫ್ಯಾನ್ ಏರ್‌ಕಂಡಿಶನರ್‌ನ ಗಾಳಿಯನ್ನು ನಾಲ್ಕು ಕಡೆಗೂ ಹರಡುತ್ತದೆ. ಯಾಕೆಂದರೆಅದು ನಿಧಾನವಾಗಿ ಚಲಿಸುತ್ತದೆ. ಅಮೆರಿಕದಲ್ಲಿ ಸೇರಿದಂತೆ ಶ್ರೀಮಂತ ರಾಷ್ಟ್ರದ ಎಲ್ಲಾ ಮನೆಯಲ್ಲಿ ಸಾಮಾನ್ಯವಾಗಿ ಎಸಿ ಇರುತ್ತದೆ. ಅದ್ದರಿಂದ ಅಲ್ಲಿ ಈ ನಾಲ್ಕು ಬ್ಲೇಡ್‌ನ ಫ್ಯಾನನ್ನೇ ಬಳಸುತ್ತಾರೆ.

 

ಇನ್ನು ಮೂರು ಬ್ಲೇಡ್‌ನ ಫ್ಯಾನ್ ವೇಗವಾಗಿ ಚಲಿಸುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ ಮನೆಯಲ್ಲಿ ಎಸಿ ಇರುವುದಿಲ್ಲ. ಆದ್ದರಿಮದ ಅವರಿಗೆ ವೇಗವಾಗಿ ಚಲಿಸಿ ಹೆಚ್ಚು ಗಾಳಿಕೊಡುವ ಫ್ಯಾನೇ ಬೇಕಾಗಿದೆ. ಈಕೆಲಸವನ್ನು ಕೇವಲ ಮೂರು ಬ್ಲೇಡಿನ ಫ್ಯಾನ್ ಮಾತ್ರ ಮಾಡಬಹುದಾಗಿದೆ.

ಕೋಳಿಯೋ ಮೊದಲು ? ಅಥವಾ  ಮೊಟ್ಟೆಯೋ ? : ಕೊನೆಗೂ ಬಯಲಾಯ್ತು ರಹಸ್ಯ !

ನಿಮ್ಮ ನಾಲಗೆಯಲ್ಲಿ ಈ ರೀತಿ ಇದೆಯೇ ?