,

ಭಾರತದಲ್ಲಿರುವ ‘ ಮಿನಿ ಲಂಡನ್’ ಬಗ್ಗೆ ನಿಮಗೆಷ್ಟು ಗೊತ್ತು ?

ಭಾರತದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಆದರೆ ಭಾರತದ ಮಿನಿಲಂಡನ್ ಎನ್ನಲಾಗುವ ಸ್ಥಳಕ್ಕೆ ಎಂದಾದರೂ ಭೇಟಿ ನೀಡಿದ್ದೀರಾ. ಅಥವಾ ಅಂತಹ ಒಂದು ಸ್ಥಳ ಇರುವ ಬಗ್ಗೆ ನಿಮಗೆ ಗೊತ್ತಿದೆಯಾ? ಝಾರ್ಕಂಡಿನಲ್ಲಿ ಅಂತಹದೊಂದು ಸ್ಥಳವಿದೆ. ರಾಜಧಾನಿ ರಾಂಚಿಯ ಉತ್ತರ-ಪಶ್ಚಿಮದಲ್ಲಿ ಸುಮಾರು 65ಕಿಲೊಮೀಟರ್ ದೂರದಲ್ಲಿ.

 

ಮೆಕ್ಲುಸ್ಕಿಗಂಜ್ ಎನ್ನುವ ಗ್ರಾಮವನ್ನು ಮಿನಿಲಂಡನ್ ಎನ್ನಲಾಗುತ್ತದೆ. ಆಂಗ್ಲೊಇಂಡಿಯನ್ನರಿಗಾಗಿ ಇರುವ ಈ ಪ್ರದೇಶವನ್ನು ಮಿನಿ ಲಂಡನ್ ಎಂದು ಕರೆಯಲಾಗುತ್ತದೆ.
ರಾಂಚಿಯಲ್ಲಿರುವ ಮೆಕ್ಲುಸ್ಕಿಗಂಜ್: ಮಿನಿಲಂಡನ್ ಎಂದು ಪ್ರಸಿದ್ಧವಾದ ಈ ಜಾಗ ಒಂದು ಸಣ್ಣ ಕಸ್ಬಾ ಆಗಿದೆ. ಈ ಗ್ರಾಮ ಹೀಗೆ ಮಾಡಿದ ಶ್ರೇಯ ಆಂಗ್ಲೊಇಂಡಿಯನ್ ಸಮುದಾಯದ ಉದ್ಯಮಿ ಆರ್ನೆಸ್ಟ್ ಟಿಮೊತಿ ಮೆಕ್ಲುಸ್ಕಿಯವರಿಗೆ ಸಲ್ಲುತ್ತದೆ.
ಘನಘೋರ ಕಾಡು. ಆದಿವಾಸಿಗಳ ಗ್ರಾಮಗಳ ನಡುವೆ ಮೆಕ್ಲುಸ್ಕಿಗಂಜ್ ಕಾಲನೈಸ್ಡ್ ಸೊಸೈಟಿ ಆಫ್ ಇಂಡಿಯ ಇದೆ. ಚಾಮಾ, ರಾಮದಾಗಾದೊ, ಕೇದಲ್, ದುಲಿ, ಕೊನಿಕಾ, ಮಾಯಾಪುರ್, ಮಹುಲಿಯ, ಹೆಸಾಲ್ ಮತ್ತು ಲಾಪರಾದ ಗ್ರಾಮಗಳ ಈ ಪ್ರದೇಶದಲ್ಲಿ 365 ಬಂಗ್ಲೆಗಳಿದ್ದು ಪ್ರತ್ಯೇಕ ಗುರುತನ್ನು ಹೊಂದಿದೆ. ಹಿಂದೊಮ್ಮೆ ಈ ಪ್ರದೇಶ ಆಂಗ್ಲೊಇಂಡಿಯನ್ನರು ಮತ್ತು ಬಿಳಿಯರ ಜನಸಂಖ್ಯೆಯನ್ನು ಹೊಂದಿತ್ತು. ಇಲ್ಲಿ ಪಾಶ್ಚಾತ್ಯ ಸಂಸ್ಕøತಿ ಮತ್ತು ನಾಗರಿಕತೆಯ ಅಪೂರ್ವ ಸಂಗಮವನ್ನು ನೋಡಬಹುದಾಗಿದೆ. ಆದ್ದರಿಂದಲೇ ಇಲ್ಲಿಗೆ ಮಿನಿಲಂಡನ್ ಎಂದು ಕರೆಯಲಾಗುತ್ತಿದೆ.
ಒಂದು ಕಾಲದಲ್ಲಿ ಒಂದರ ನಂತರ ಒಂದರಂತೆ ಇಲ್ಲಿನ ಆಂಗ್ಲೊ ಇಂಡಿಯನ್ ಕುಟುಂಬಗಳು ವಲಸೆ ಹೋಗಿದ್ದವು. ಈಗ 20-25 ಕುಟುಂಬಗಳು ಮೆಕ್ಲುಸ್ಕಿಗಂಜ್ ವಾಸವಿದೆ.
ಆದರೆ ಈಗ ಮೆಕ್ಲುಸ್ಕಿಗಂಜ್‍ನ ಆಂಗ್ಲೊಇಂಡಿಯನ್ ಕುಟುಂಬವೊಂದು ಹಳೆಯ ಬಂಗ್ಲೆಯನ್ನು ನವೀಕರಿಸಿ ಇಂಟರ್ ಕಾಲೇಜು ಮಾಡಿದೆ. ಜೊತೆ ಇಲ್ಲಿ ಹೈಪ್ರೊಫೈಲು  ಸ್ಕೂಲ್ ತೆರೆಯಲಾಗಿದೆ. ಇಲ್ಲಿ ಕಲಿಯಲು ದೂರದೂರದಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಒಳ್ಳೆಯ  ರಸ್ತೆಯ  ಜೊತೆಗೆ ಎಲ್ಲ ಸವಲತ್ತುಗಳನ್ನು ಇಲ್ಲಿವೆ. ಹಾಸ್ಟೆಲ್‍ಗಳು ಕೂಡಾ ಇವೆ.

ಪ್ರಧಾನಿ ಮೋದಿಯ ಇಸ್ರೇಲ್ ಭೇಟಿಯ ವೇಳೆ,ಸೋಶಿಯಲ್ ಮೀಡಿಯದಲ್ಲಿ ಕ್ವೀನ್ ಆದ ಹುಡುಗಿ!

ಮಳೆಯಲ್ಲಿ ನೆನೆದ ಬಳಿಕ ಹುಡುಗಿಯರ ಮೂಡ್ ಹೇಗಿರುತ್ತೇ ಗೊತ್ತಾ ?