, ,

Angry Cute Love OMG Win

ಭಾರತದಲ್ಲಿದೆ ‘ಮಿನಿ ಇಸ್ರೇಲ್’,  ಆದರೆ ಭಾರತೀಯರಿಗೆ ಪ್ರವೇಶವಿಲ್ಲ!

 

ಭಾರತದಲ್ಲಿ ಸುತ್ತಾಡಲು ವಿದೇಶಿಯರು ಬರುತ್ತಾರೆ ಇಲ್ಲಿನ ಪಾಕೃತಿಕ ಸೌಂದರ್ಯವನ್ನು ನೋಡಲು ಇಲ್ಲಿಗೆ ಇಸ್ರೇಲಿಗರು ಕೂಡಾಬರುತ್ತಾರೆ. ಈಗ ಭಾರತದ ಪ್ರಧಾನಿ ಸುತ್ತಾಡಿ ಬರಲುಇಸ್ರೇಲ್‌ಗೆ ಹೋಗಿ ಬಂದಿದ್ದಾರೆ. ಆದರೆ ಭಾರತದಲ್ಲಿಯೇ ಒಂದು ಇಸ್ರೇಲ್ ಇದೆ. ದಿಲ್ಲಿಗೆ ಸಮೀಪದಲ್ಲಿ, ಅಲ್ಲಿಂದ 512 ಕಿಲೋಮೀಟರ್ ದೂರಕ್ಕೆ ಹೋದರೆ ಭಾರತದಲ್ಲಿ ಇಸ್ರೇಲ್ ದೇಶ ಕಂಡು ಬರುತ್ತದೆ. ಅಂದರೆ ನೀವು ದಿಲ್ಲಿಯಿಂದ ಕಸೋಲಾಕ್ಕೆ ಹೋಗಬೇಕು. ಅಲ್ಲಿ ನೀವು ಇಸ್ರೇಲ್‌ನ್ನು ನೋಡುವಿರಿ.

 

ಕಸೋಲ್ ಭಾರತದ ಮಿನಿ ಇಸ್ರೇಲ್:

ಕಸೋಲ್ ಕಾಡಿನ ನಡುವಿನ, ಪರ್ವತ ಮತ್ತು ನದಿ ದಡದ ಒಂದು ಪ್ರದೇಶವಾಗಿದೆ. ಇಲ್ಲಿನ ಜನಸಂಖ್ಯೆ ಬಹಳ ಹೆಚ್ಚಿಲ್ಲ. ಜೊತೆಗೆ ಶಾಂತ ಮತ್ತು ತಣ್ಣಗಿನ ವಾತಾವರಣ ಇಲ್ಲಿದೆ. ಈ ಪ್ರದೇಶ, ದೇಶಿ-ವಿದೇಶಿ ಪ್ರತಿಯೊಬ್ಬರನ್ನೂ ತಮ್ಮೆಡೆಗೆ ಸೆಳೆಯುತ್ತದೆ. ಅಂತಹ ಸೌಂದರ್ಯ ಈ ಹಳ್ಳಿಯದ್ದಾಗಿದೆ. ಇಲ್ಲಿಗೆ ಇಸ್ರೇಲಿ ಪ್ರವಾಸಿಗರು ಹೆಚ್ಚು ಬರುವುದರಿಂದ ಮಿನಿ ಇಸ್ರೇಲ್ ಎಂದು ಕರೆಯಲಾಗುತ್ತಿದೆ. ಇಲ್ಲಿಗೆ ಇಸ್ರೇಲಿಗರು ಮಾತ್ರವಲ್ಲ ಬೇರೆಯವರು ಕೂಡಾ ಬರುತ್ತಾರೆ. ಅದರೆ ಹೆಚ್ಚಿನ ಸಂಖ್ಯೆಯಲ್ಲಿ ಇಸ್ರೇಲಿಯನ್ನರು ಬರುತ್ತಾರೆ. ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಬರುತ್ತಾರೆ. ಇಲ್ಲಿ ಅವರು ತಮ್ಮ ಆತ್ಮೀಯತೆಯನ್ನು ಗಳಿಸುತ್ತಾರೆ.

 

1990ರಿಂದ ಜನರು ಬರುತ್ತಿದ್ದಾರೆ:

1990ರಿಂದ ಇಸ್ರೇಲಿ ಪ್ರವಾಸಿಗರು ಈ ಗ್ರಾಮಕ್ಕೆ ಬರಲು ತೊಡಗಿದರು. ಅಲ್ಲಿಂದ ಇಲ್ಲಿವರೆಗೂ ಈ ಗ್ರಾಮದ ಸಂಸ್ಕೃತಿಯಲ್ಲಿ ಇಸ್ರೇಲಿನ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸೈನ್ಯದ ತರಬೇತಿ ಪಡೆದ ಬಳಿಕ ಇಸ್ರೇಲ್ ನಾಗರಿಕರು ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಅಲ್ಲಿನೋಡಿದರೆ ಇದು ಯಾವುದೊ ಇಸ್ರೇಲಿ ಊರಾಗಿದೆಯೇ ಎಂದು ಅನಿಸುತ್ತದೆ.

 

ಸಂಸ್ಕೃತಿಯ ಸಂಬಂಧ ಮುಖ್ಯ ಕಾರಣ

:ಸಾಂಸ್ಕೃತಿಕ ರೂಪದಲ್ಲಿ ಸಂಬಂಧ ಇರುವುದರಿಂ ಇಲ್ಲಿಗೆ ಇಸ್ರೇಲಿಗರು ಬರುತ್ತಾರೆ. ಇಲ್ಲಿ ಹೀಬ್ರೂ ಭಾಷೆಯಲ್ಲಿ ಪೋಸ್ಟರ್ ಕಾಣಿಸುತ್ತದೆ. ಹೊಟೇಲುಗಳ ಹೆಸರು ಹೀಬ್ರೂ ಭಾಷೆಯಲ್ಲಿದೆ. ಮತ್ತು ಮೆನು ಕೂಡಾ ಆಹಾರದ ಪಟ್ಟಿಕೂಡಾ ಹೀಬ್ರೂ ಭಾಷೆಯಲ್ಲಿರುತ್ತದೆ. ಸ್ಥಳೀಯರು ಮತ್ತು ಕೆಲವು ಹೊಟೇಲು ಮಾಲಕರು ಹೀಬ್ರೂ ಭಾಷೆಯನ್ನುಸ್ವಲ್ಪಸ್ವಲ್ಪ ಕಲಿತುಕೊಂಡಿದ್ದಾರೆ. ಇಲ್ಲಿ ಇಸ್ರೇಲ್‌ನ ಬಾವುಟ ಕೂಡಾ ಕಂಡುಬರುತ್ತದೆ.

 

ಇಸ್ರೇಲಿ ಪ್ರವಾಸಿಗರು ಇಲ್ಲಿಗೆ ಬರಲು ಖಾಸಾ ಕಾರಣ:

ಇಲ್ಲಿಗೆ ಇಸ್ರೇಲಿಗರಿಗೆ ಅವರದೇ ರೀತಿಯಲ್ಲಿ ಆಹಾರಸಿಗುತ್ತದೆ. ಭಾಷೆ ಮಾತಾಡುವವರು ಇರುತ್ತಾರೆ. ಹೀಗೆ ಎಲ್ಲವೂ ಸಿಗುವುದರಿಂದ ಅವರು ಇಲ್ಲಿಗೆ ಬರುತ್ತಾರೆ. ಈ ಜನರು ತಾವಿರುವಲ್ಲಿ ಯಾವುದೇ ಭಾರತೀಯನನ್ನು ನೋಡಲು ಬಯಸುವುದಿಲ್ಲ.

 

ತಮ್ಮದೇ ದೇಶದಲ್ಲಿ ಭಾರತೀಯರಿಗೆ ನಿಷೇಧ:

ಹೌದು ಖಂಡಿತಾ ಇದು ಸತ್ಯವಾಗಿದೆ. ನೀವು ಅಲ್ಲಿಗೆ ಹೋದರೆ ನಿಮಗೆ ಅಲ್ಲಿಗೆ ಪ್ರವೇಶ ಸಿಗಲಾರದು. ಕಸೋಲ್ ನಲ್ಲಿ ಹೀಬ್ರೂ ಭಾಷೆಯಲ್ಲಿ ಬೋರ್ಡ್ ಇರುತ್ತದೆ. ಅಲ್ಲಿಒಂದು ರೆಸ್ಟಾರೆಂಟ್‌ನಲ್ಲಿ ಭಾರತೀಯರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ.

 

 

ಏಳು ವರ್ಷದ ಬಾಲಕನ 6 ಪ್ಯಾಕ್ ನೋಡಿ !

ಪೋರ್ನ್ ನೋಡುವವರಿಗೆ ಶಾಕಿಂಗ್ ನ್ಯೂಸ್ !