,

Cry Cute Geeky LOL Love OMG Win WTF

ಬೈಕ್ ಇಂಜಿನ್ ನಿಂದ ಸಣ್ಣ ವಿಮಾನ ನಿರ್ಮಿಸಬಹುದು ! : 1 ಲೀ ಪೆಟ್ರೋಲಿನಿಂದ ಎಷ್ಟು ದೂರ ಹಾರುತ್ತೆ ಗೊತ್ತಾ ?

ಹರಿಯಾಣದ ಹಿಸ್ಸಾರ್‍ನಲ್ಲಿ ಒಬ್ಬ ವ್ಯಕ್ತಿ ಬೈಕ್ ಇಂಜಿನನ್‍ನಿಂದ ಬಟರ್ ಪ್ಲೈ ಯಾನೆ ಹಾರು ಮಿಶನ್ ತಯಾರಿಸಿದ್ದಾರೆ. ಇದು ಒಂದು ಲೀಟರ್ ಪೆಟ್ರೋಲ್‍ನಲ್ಲಿ 12 ನಿಮಿಷ ಹಾರುತ್ತದೆ.

ಇದನ್ನು ಹಿಸ್ಸಾರ್ ಆದಮ್‍ಪುರದ ಕುಲ್ದೀಪ್ ಟಾಕಾ ಮಾಡಿದ್ದಾರೆ. ಕುಲ್ದೀಪ್ ಬಿಟೆಕ್ ಕಲಿತಿದ್ದಾರೆ. ಈ ಪ್ಯಾರ ಗ್ಲೈಂಡಿಂಗ್ ಫ್ಲೈಯಿಂಗ್ ಮಿಶನ್ ಮಾಡಲು ಅವರಿಗೆ ಮೂರು ವರ್ಷ ಹಿಡಿದಿದೆ. ಮತ್ತು ಸುಮಾರು ಎರಡೂವರೆ ಲಕ್ಷ ರೂಪಾಯಿ ವೆಚ್ಚವಾಗಿದೆ.

ಕುಲ್‍ದೀಪ್ ಈ ಪ್ಲೈಯಿಂಗ್ ಮೆಶಿನ್ನನ್ನುಬೈಕ್‍ನ ಒಂಜಿನ್‍ನಲ್ಲಿ ಉಪಯೋಗಿಸಿದ್ದಾರೆ. ಇದಕ್ಕೆ ಬೈಕ್‍ನ 200ಸಿಸಿ ಇಂಜಿನ್ ಇರಿಸಿದ್ದಾರೆ. ಇದಲ್ಲದೆ ಮರದ ಫ್ಯಾನ್ ಹಾಗೂ ಸಣ್ಣ ಟಯರ್ ಇರಿಸಿದ್ದಾರೆ. ಇದರ ಮೇಲೆ ಪ್ಯಾರಗ್ಲೈಡರ್ ಇರಿಸಿದ್ದಾರೆ. ಇದು ಹಾರಲು ಮತ್ತು ಸುರಕ್ಷಿತ  ಲ್ಯಾಂಡಿಂಗ್‍ಗೆ ಸಹಕಾರಿಯಾಗಿದೆ.ಇದರಲ್ಲಿ ಐದು ಲೀಟರ್ ಸಾಮಥ್ರ್ಯದ ತೈಲ ಟಾಂಕಿ ಇರಿಸಲಾಗಿದೆ.

ಹತ್ತುಸಾವಿರ ಅಡಿಯಷ್ಟು ಎತ್ತರ ಹಾರಬಲ್ಲುದು. ಈಗ ಇದರಲ್ಲಿ ಒಬ್ಬನೇ ಕುಳಿತುಕೊಳ್ಳಲುಸಾಧ್ಯವಿದೆ. ಕುಲ್‍ದೀಫ್ ಆರುತಿಂಗಳ ಹಿಂದ ಗೋವದಲ್ಲಿ ಪೈಲೆಟ್ ತರಬೇತಿಯನ್ನು ಪಡೆದಿದ್ದಾರೆ.

ಅವರಿಗೆ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಸಿಕ್ಕಿರಲಿಲ್ಲ. ಇದಕ್ಕಿಂತ ಮೊದಲು ಒಂದು ಹಾರುವ ಯಂತ್ರವನ್ನು ತಯಾರಿಸಿದ್ದರು. ಅದು ಪರೀಕ್ಷಾರ್ಥ ಹಾರಾಟದಲ್ಲಿ  ನಾಶವಾಗಿತ್ತು. ಮತ್ತೊಂದು ಪ್ರಯತ್ನ ಯಶಸ್ವಿಯಾಗಿದೆ.  ಈಗ ಅವರು ಈ ಹೊಸ ಯಂತ್ರವನ್ನು ಇನ್ನಷ್ಟು ಉತ್ತಮಪಡಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ.

ಕುಲ್ದೀಪ್‍ರ ತಂದೆ ಪ್ರಹ್ಲಾದ್ ಸಿಂಗ್ ಓರ್ವ ರೈತನಾಗಿದ್ದಾರೆ. ಆರ್ಯನಗರದ ಸತೀಶ್‍ಕುಮಾರ್ ಈ ಯಂತ್ರ ತಯಾರಿಸಲು  ಕುಲ್‍ದೀಪ್‍ಗೆ ಸಹಾಯ ಮಾಡಿದ್ದರು.

ಪ್ರಯಾಣಿಕನ ಮನೆಗೆ  ಸಮೋಸಾ ಕಳಿಸಿಕೊಟ್ಟ ಓಲಾ ಕ್ಯಾಬ್ ಕಂಪೆನಿ !

ಹಲವರ ನಿದ್ದೆಗೆಡಿಸಿದ್ದ ನಕಲಿ ಪೊಲೀಸ್  ಇನ್ಸ್‍ಪೆಕ್ಟರ್ ಸಿಕ್ಕಿಬಿದ್ದಿದ್ದೇಗೆ ಗೊತ್ತಾ ?