,

ಬಾಹುಬಲಿ ಹೀರೊಯಿನ್ ತಮನ್ನಾರ ಒಂದು ಹಳೆ ರಹಸ್ಯ!

 

ಬಾಹುಬಲಿ ದ ಬಿಗಿನಿಂಗ್‍ನಲ್ಲಿ ಬಾಹುಬಲಿ ಜೊತೆ ಪ್ರೀತಿ ಮತ್ತು ಹೋರಾಟದಲ್ಲಿ ಭುಜಕ್ಕೆ ಭುಜಕೊಟ್ಟು ಹೋರಾಡಿದ ಆವಂತಿಕಾ ಪಾತ್ರಧಾರಿ ತಮನ್ನಾಭಾಟಿಯ ಹಾಳು ಬಿಳುಪು ಬಣ್ಣದ ಚೆಲುವೆ. ಆದರೆ ತಮನ್ನಾರಿಗೂ  ಹಿಂದಿ ಸಿನೆಮಾಕ್ಕೂ ಬಹಳ ಹಿಂದಿನ  ಸಂಬಂಧ ಇದೆ ಎನ್ನವುದು ಗೊತ್ತಿದೆಯೇ?. ಅವರು ಬಹಳ ಹಿಂದೆಯೇ ಬಾಲಿವುಡ್‍ನಲ್ಲಿ ನಟಿಸಿದ್ದಾರೆ. ಬಾಹುಬಲಿ ದೇಶಾದ್ಯಂತ ಕ್ರೇಜ್ ಸೃಷ್ಟಿಸಿದೆ. ಆದರೆ ಅದರಿಂದ ಅವರ ಸಿನೆಮಾಕ್ಕೆ ವೀಕ್ಷಕರು ದೊರಕಿಲ್ಲ.

 

ಬಾಹುಬಲಿ ದ ಕಂಕ್ಲೂಶನ್ ಈ ವರ್ಷ ಮೋಸ್ಟ್ ಅವೇಟೆಡ್ ಸಿನೆಮಾಗಳಲ್ಲಿಸೇರಿದೆ. ಮೊದಲ ಭಾಗಕ್ಕೆ ಹೋಲಿಸಿದೆ ಎರಡನೆ ಭಾಗದಲ್ಲಿ ತಮನ್ನಾರ ಪಾತ್ರ ದೊಡ್ಡದಾಗಿಲ್ಲ. ಇಲ್ಲಿ ಮುಖ್ಯಪಾತ್ರವನ್ನು ಅನುಷ್ಕಾ ಶೆಟ್ಟಿ ಮಾಡುತ್ತಿದ್ದಾಳೆ. ಆದರೆ ತಮನ್ನಾರ ಬಗ್ಗೆ ಇಲ್ಲಿ ಹೇಳುತ್ತೇವೆ. ತಮನ್ನಾ ಹೆಚ್ಚು ದಕ್ಷಿಣ ಭಾರತದ ಸಿನೆಮಾಗಳಲ್ಲಿ £ಟಿಸಿದ್ದಾರೆ. ಆದರೆ ಹಿಂದಿ ಸಿನೆಮಾದಿಂದ ಅವರು ತಮ್ಮ ಕ್ಯಾರಿಯರ್ ಆರಂಭಿಸಿದ್ದರು. 2005ರಲ್ಲಿ ಅವರು ಚಾಂದ್‍ಸೆ ರೋಶನ್ ಚೆಹರಾ ಎನ್ನುವ ಸಿನೆಮಾದಲ್ಲಿ ನಟಿಸಿದ್ದರು. ಅದು ಹೆಚ್ಚು ದಿನ ಸಿನೆಮಾಮಂದಿರಗಳಲ್ಲಿಓಡಲಿಲ್ಲ. ನಂತರ ತಮನ್ನಾ ದಕ್ಷಿಣ ಭಾರತದತ್ತ ಮುಖ ಹಾಕಿದರು. ಅಲ್ಲಿ ಅವರು ಯಶಸ್ವಿ ತಾರೆಯಾದರು.

ಹಲವು ದಕ್ಷಿಣಾ ಭಾರತದ ಭಾಷೆ ಸಿನೆಮಾಗಳನ್ನು ಹಿಟ್ ನೀಡಿದರು. ಅಲ್ಲಿನ ಎಲ್ಲ ಸೂಪರ್‍ಸ್ಟಾರ್‍ಗಳೊಂದಿಗೆ ಆಕೆ ನಟಿಸಿದರು. ಅಲ್ಲಿ ಯಶಸ್ವಿಯಾದ ಬಳಿಕ ತಮನ್ನಾ ಹಿಂದಿಗೆ ಮರಳಿದರು. 2013ರಲ್ಲಿ ತಮನ್ನಾ ಸಾಜಿದ್ ಖಾನ್ ನಿರ್ದೇಶನ್ ಹಿಮ್ಮತ್‍ವಾಲಾದಲ್ಲಿ ನಟಿಸಿದರು. ಅದರಲ್ಲಿ ಸೂಪರ್‍ಸ್ಟಾರ್ ಅಜಯ್ ದೇವಗನ್ ಇದ್ದರು. ಸಾಜಿದ್ ತನ್ನ ಸಿನೆಮಾವನ್ನು ತಮನ್ನಾರ ಮೊದಲ ಸಿನೆಮಾ ಎಂದು ಹೇಳಿಕೊಂಡಿದ್ದರು. ಮೊದಲು ಆಕೆ ನಟಿಸಿದ್ದನ್ನು ಬಾಲಿವುಡ್ ಮಂದಿ ಬಹಿರಂಗಪಡಿಸಿರಲಿಲ್ಲ. ನಂತರ  ಹಮ್‍ಶಕಲ್‍ನಲ್ಲಿ ತಮನ್ನಾ ನಟಿಸಿದರು. ಅದು 2014ರಲ್ಲಿ ಬಿಡುಗಡೆಯಾಯಿತು. ಅಕ್ಷಯ್ ಕುಮಾರ್‍ರೊಂದಿಗೆ ಒಂದು ಸಿನೆಮಾದಲ್ಲಿ ನಟಿಸಿದ್ದು ಅದು ಕೂಡಾ ಪ್ರಯೋಜನ ಆಗಲಿಲ್ಲ.

Humshakals

ನಂತರ 2015ರಲ್ಲಿ ಬಾಹುಬಲಿ ದ ಬಿಗಿನಿಂಗ್ . ಇದು ತಮಿಳು ಮತ್ತು ತೆಲುಗು ಭಾಷಿಕರಿಗಾಗಿ ತಯಾರಿಸಿದ ಸಿನೆಮಾ ಆದರೆ ಇದರ ಹಿಂದಿ ಡಬ್ ದೇಶಾದ್ಯಂತ ಧೂಳೆಬ್ಬಿಸಿತು. ಟೆಕ್ನಿಕಲಿ ಈ ಸಿನೆಮಾ ತಮನ್ನಾರದ್ದೇ ಆದರೆ ಅದು ಹಿಂದಿ ಭಾಷೆಯ ಸಿನೆಮಾ ಅಲ್ಲ. ಕಳೆದ ವರ್ಷ ತಮನ್ನಾ ಸೋನು ಸೂದ್ ಮತ್ತುಪ್ರಭುದೇವರ ಜೊತೆಗೆ ತೂತಕ್ ತೂತಕ್ ತೂತಿಯ ನಲ್ಲಿ ನಟಿಸಿದರು. ಆದರೆ ಈ ಸಿನೆಮ ಕೂಡಾ ಹಿಟ್ ಆಗಲಿಲ್ಲ. ಆದರೆ ತಮನ್ನಾ ಪ್ಲಾಪ್ ಆಗಿಯೂ ಹಿಟ್ ಆಗಿದ್ದಾರೆ.

 

ಮದುಮಗಳ ದೇಸಿ ಬ್ರಾಂಡ್ ಡ್ಯಾನ್ಸ್ : ವೀಡಿಯೋ ನೋಡಿ

ಮೊದಲು ‘ಹುಚ್ಚ’ ಅನ್ನುತ್ತಿದ್ದವರು ಈಗ ‘ಹಾಟ್ಸಾಫ್’ ಅನ್ನುತ್ತಿದ್ದಾರೆ !: ಇವರು ಮಾಡಿರೋ ಸಾಧನೆ ಏನು .?