,

LOL

ಪ್ರಯಾಣಿಕನ ಮನೆಗೆ  ಸಮೋಸಾ ಕಳಿಸಿಕೊಟ್ಟ ಓಲಾ ಕ್ಯಾಬ್ ಕಂಪೆನಿ !

 

ಓಲಾ ಕ್ಯಾಬ್ ಬುಕ್‍ಮಾಡಿದವರು ಚಾಲಕನೇ ಬುಕ್ ಕ್ಯಾನ್ಸಲ್ ಮಾಡಿದರೆ ಹಣ ಕೊಡಬೇಕಾಗುತ್ತದೆ. ಆದರೆ, ಚಾಲಕನೇ ಬುಕ್ ಕ್ಯಾನ್ಸಲ್ ಮಡಿದ ಬಳಿಕ ಕಂಪೆನಿ ಸಾರಿ ಹೇಳುವುದರೊಂದಿಗೆ ಸಮೋಸಾವನ್ನು ಕೂಡಾ ಕಳುಹಿಸಿದೆ.

ಇದೊಂದು ತಮಾಷೆಯ ವಿಷಯವಾದರೂ ಗುಡ್‍ಗಾಂವ್‍ನ ಒಬ್ಬ ವ್ಯಕ್ತಿ ಓಲಾ ಗಾಡಿಯನ್ನು ಬುಕ್ ಮಾಡಿದ್ದರು. ಅವರಿಗೆ ಏರ್‍ಪೋರ್ಟಿಗೆ ಹೋಗಬೇಕಿತ್ತು. ಆದರೆ  ಓಲಾ ಕ್ಯಾಬ್ ಚಾಲಕ ಬುಕ್ ಕ್ಯಾನ್ಸಲ್ ಮಾಡಿಸಿದ್ದ. ಆದರೆ ಅದನ್ನು ಅವರು ಬಹಳ ತಮಾಷೆಯಾಗಿ ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದರು.

ಅಕ್ಟೋಬರ್ 21ಕ್ಕೆ ಅಭಿಶೇಕ್‍ ಅಸ್ತಾನಾ ತನ್ನ ಸಹೋದರನೊಂದಿಗೆ ಏರ್‍ಪೋರ್ಟ್‍ಹೋಗಲಿಕ್ಕಾಗಿ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಚಾಲಕ ರೈಡ್ ಕ್ಯಾನ್ಸಲ್ ಮಾಡಿದ್ದನು. ಪರಿಣಾಮ ಕ್ಯಾನ್ಸಲ್ ಶುಲ್ಕವನ್ನು ಅವರು ತೆರಬೇಕಾಗಿ ಬಂದಿತ್ತು.

ಅಭಿಶೇಕ್ ಈ ಘಟನೆಯನ್ನು ಟ್ವಿಟರ್‍ನಲ್ಲಿ ಬಹಳ ತಮಾಷೆಯಲ್ಲಿ ಪೋಸ್ಟ್ ಮಾಡಿದ್ದರು. ನಿನ್ನೆಒಲಾ ನನ್ನಿಂದ ಕ್ಯಾನ್ಸಲೇಶನ್ ಶುಲ್ಕ ತೆಗೆದುಕೊಂಡಿತ್ತು. ಆದರೆ ನಾನು ಕ್ಯಾನ್ಸಲ್ ಮಾಡಿರಲಿಲ್ಲ. ಚಾಲಕ ಮಾಡಿದ್ದ. ಇದು  ಎಂತಹ ಪ್ರಸಂಗವೆಂದರೆ ನೀವು  ಸಮೋಸ ಕೇಳಿದ್ದೀರಿ. ಅಂಡಿಯವ ಇಲ್ಲ ಎನ್ನುವುದರೊಂದಿಗೆ ಹತ್ತು ರೂಪಾಯಿಯನ್ನು ತೆಗೆದುಕೊಂಡ. ಹೀಗಾಗಿದೆ ಪರಿಸ್ಥಿತಿ.

ಅಭಿಶೇಕ್‍ರ ಈ ಹಾಸ್ಯ ಟ್ವೀಟ್‍ಗೆ ಕಂಪೆನಿ ಸ್ಪಂದಿಸಿತು. ಕ್ಯಾನ್ಸಲೇಶನ್ ಶುಲ್ಕದೊಂದಿಗೆ ಎರಡು ಸಮೋಸಾವನ್ನು ಕೂಡಾ ಕಳುಹಿಸಿದೆ. ನಿಮ್ಮಿಂದ ಪಡೆದ ಹಣವನ್ನು ಮರಳಿ ಕಳುಹಿಸುತ್ತಿದ್ದೇವೆ. ನಿಮಗಾದ  ಅಡಚಣೆಗೆ ಕ್ಷಮೆಕೋರುತ್ತಿದ್ದೇವೆ. ಈಗ ನಾವು  ಸಮೋಸಾ ಎಲ್ಲಿಗೆ  ಕಳುಹಿಸಬೇಕಾಗಿದೆ ಎಂದು ಓಲಾ ಕಂಪೆನಿ ಕೇಳಿತ್ತು. ಜೊತೆಗೆ ಓಲಾ ಕಂಪೆನಿ ಸಾರಿ ನೋಟ್‍ನೊಂದಿಗೆ ಸಮೋಸಾವನ್ನುಕೂಡಾ ಕಳುಹಿಸಿತ್ತು. ಹೀಗೆ ಅಭಿಶೇಕ್‍ರ ಟ್ವೀಟ್‍ನಿಂದ ಕಂಪೆನಿ ಜಾಗೃತವಾಗಿತ್ತು.

ಹಾರುತ್ತಿರುವ ವಿಮಾನದ ಬಾಗಿಲು ಮನೆಯ ಮೇಲೆ  ಬಿತ್ತು, ಮುಂದೇನಾಯ್ತು ನೋಡಿ ?

ಬೈಕ್ ಇಂಜಿನ್ ನಿಂದ ಸಣ್ಣ ವಿಮಾನ ನಿರ್ಮಿಸಬಹುದು ! : 1 ಲೀ ಪೆಟ್ರೋಲಿನಿಂದ ಎಷ್ಟು ದೂರ ಹಾರುತ್ತೆ ಗೊತ್ತಾ ?