,

ನೀವು ವಾಹನಕ್ಕೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸುತ್ತಿದ್ದೀರಾ ? ಇದನ್ನೊಮ್ಮೆ ಓದಿ

ಹೊಸದಿಲ್ಲಿ:ಸಾಮಾಜಿಕ ಮಾಧ್ಯಮಗಳ ಪ್ರಯೋಜನವೆಂದರೆ ಜನರು ಒಬ್ಬರೊಗೊಬ್ಬರು ಸಂಪರ್ಕ ಇರಿಸಿಕೊಂಡು ತಮಗೆಸಿಕ್ಕಿದ ಮಾಹಿತಿಗಳನ್ನು ಇತತರಿಗೆ ಹಂಚಿಕೊಳ್ಳುತ್ತಾರೆ ಎನ್ನುವುದು. ಅದೇವೇಳೆ ಈ ಮಾಧ್ಯಮಗಳಲ್ಲಿ ಹಲವು ರೀತಿಯ ಅಪಪ್ರಚಾರಗಳು, ಸುಳ್ಳುವದಂತಿಗಳು ಹರಡುತ್ತದೆ. ಜನರು ಇದನ್ನು ಕೂಡಾ ಆಚೀಚೆ ನೋಡದೆಶೇರ್ ಮಾಡಿ ಬಿಟ್ಟಿರುತ್ತಾರೆ.ಇದಕ್ಕೆ ಒಂದು ತಾಜಾ ಉದಾಹರಣೆ ಇಂಡಿಯನ್ ಆಯಿಲ್ ಕಂಪೆನಿಯ ಉದಾಹರಣೆಯಾಗಿದೆ.
ಇಂಡಿಯನ್ ಆಯಿಲ್ ಕಂಪೆನಿಯ ಎಚ್ಚರಿಕೆ ಏನಿತ್ತು?
ನೀವು ನಿಮ್ಮ ವಾಹನಕ್ಕೆ ಫುಲ್ ಟಾಂಕಿ ಪೆಟ್ರೋಲ್ ತುಂಬಿಸಬೇಡಿರಿ. ಹೀಗೆ ಮಾಡಿದರೆ ನೀವು ಚಲಾಯಿಸಿಕೊಂಡು ಹೋಗುವ ವೇಳೆ ನಿಮ್ಮ ವಾಹನದ ಟ್ಯಾಂಕ್ ಸ್ಫೋಟಗೊಳ್ಳುತ್ತದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಂಪೆನಿಯದೆನ್ನುವಂತೆ ಮೆಸೇಜ್ ಹಾಕಲಾಗಿತ್ತು. ಇನ್ನೇನು ಬರೆಯಲಾಗಿತ್ತು: ಮುಂದಿನ ದಿನಗಳಲ್ಲಿ ಉಷ್ಣತೆ ಜಾಸ್ತಿಯಾಗಲಿದೆ. ನಿಮ್ಮ ವಾಹನಕ್ಕೆ ಪೆಟ್ರೋಲ್ ಫುಲ್ ಮಾಡಬೇಡಿ, ಪೆಟ್ರೋಲ್ ಸ್ಫೋಟಕ್ಕೆ ಕಾರಣವಾಗಬಹುದು. ಆದ್ದರಿಂದ ನಿಮ್ಮ ವಾಹನಕ್ಕೆ ದಯವಿಟ್ಟು ಅರ್ಧದಷ್ಟು ಟ್ಯಾಂಕ್ ತುಂಬಿಸಿ.ಈವಾರದಲ್ಲಿ ಆಗಿರುವ ಐದು ಸ್ಫೋಟಗಳಿಗೆ ಕಾರಣ ಹೆಚ್ಚು ಪೆಟ್ರೋಲ್ ಟಾಂಕಿಯಲ್ಲಿದುದು ಆಗಿದೆ. ಟ್ಯಾಂಕ್ ತುಂಬಾ ಪೆಟ್ರೋಲ್ ಇದ್ದುದರಿಂದ ಗಾಳಿಹೋಗಲು ಸ್ಥಳವಿರಲಿಲ್ಲ. ಮಾತ್ರವಲ್ಲ ದಿವಸದಲ್ಲಿ ಒಂದು ಸಲ ಟ್ಯಾಂಕ್‌ನ್ನು ತೆರೆದು ಒಳಗೆ ಇರುವ ಗ್ಯಾಸ್‌ನ್ನು ಹೊರಗೆಹಾಕಿ.
ಇಂಡಿಯನ್ ಆಯಿಲ್ ನಿರಾಕರಣೆ:ಹೀಗೊಂದು ಮೆಸೇಜ್ ನಾವು ಬಿಟ್ಟೇ ಇಲ್ಲ. ಇವೆಲ್ಲ ಸುಳ್ಳುಸುದ್ದಿಗಳು ಎಂದು ಎಪ್ರಿಲ್ ಹತ್ತಕ್ಕೆ ಮಧ್ಯಾಹ್ನ ಹನ್ನೆರಡು ಗಂಟೆಗೆ ಟ್ವೀಟ್ ಮಾಡಿದೆ. ಇಂಡಿಯನ್ ಆಯಿಲ್ ಸುಳ್ಳುಸುದ್ದಿ ಇದಕ್ಕೆ ನೀವು ಗಮನ ಕೊಡಬೇಡಿ ಎಂದು ವಿನಂತಿಸಿದೆ.

ಫುಲ್ ಟ್ಯಾಂಕ್ ಪೆಟ್ರೋಲ್ ಸುರಕ್ಷಿತವೇ?
ಎಲ್ಲ ಆಟೊಮೊಬೈಲ್ ಕಂಪೆನಿಗಲು ವಾಹನ ಡಿಸೈನ್ ಮಾಡುವಾಗ ಎಲ್ಲಾ ವಿಷಯಗಳನ್ನು ಗಮನದಲ್ಲಿರಿಸುತ್ತದೆ. ಮತ್ತು ಸುರಕ್ಷೆಗೆ ಅಗತ್ಯವಾದ ಉಪಕರಣಗಳನ್ನು ಇಟ್ಟಿರುತ್ತದೆ. ಆದ್ದರಿಂದ ಫುಲ್ ಟ್ಯಾಂಕ್ ಪೆಟ್ರೋಲ್ ಏನೇನು ಹಾನಿಕರವಲ್ಲ. ಉಷ್ಣ ಮತ್ತು ಚಳಿಯ ಹವಾಮಾನದಲ್ಲಿಯೂ ಸುರಕ್ಷಿತವಾಗಿರುತ್ತದೆ ಎಂದು ಇಂಡಿಯನ್ ಅಯಿಲ್ ತಿಳಿಸಿದೆ.

ಎಸಿಡಿಟಿ ದೂರ ಮಾಡಲು ಮನೆಮದ್ದು

ಬಿಳಿಕೂದಲು ಸಮಸ್ಯೆಗೆ ಇಲ್ಲಿದೆ ಶಾಶ್ವತ ಪರಿಹಾರ!