, ,

ನೀಲಿ ಆಧಾರ್ ಕಾರ್ಡ್ ಬಗ್ಗೆ ನಿಮಗೆಷ್ಟು ಗೊತ್ತು ? ; ಪ್ರತಿಯೊಬ್ಬರಿಗೂ ತಿಳಿದಿರಲೇ ಬೇಕಾದ ಮಾಹಿತಿ

ಕುಟುಂಬದ ಸದಸ್ಯರಿಗೆ ನೀಲಿ ಆಧಾರ್ ಕಾರ್ಡ್ ಅಗತ್ಯವಿದೆ: ನಿಮ್ಮ ಬಳಿ ಬ್ಲೂ ಆಧಾರ್ ಕಾರ್ಡ್ ಇದೆಯೇ?
ನಿಮಗೆ ಆಧಾರ್ ಕಾರ್ಡಿನ ಬಗ್ಗೆ ಖಂಡಿತಾ ಗೊತ್ತಿರಬಹುದು. ಆದರೆ ನೀಲಿ ಆಧಾರ್ ಕಾರ್ಡ್ ಬಗ್ಗೆ ನೀವು ಮೊದಲ ಬಾರಿ ಕೇಳಿರಬಹುದು. ಆಧಾರ ಕಾರ್ಡಿನ ಬೇಡಕೆ ಹೆಚ್ಚಿದಂತೆ ಯುಐಡಿ ಈಗ ನೀಲಿ ಆಧಾರ್ ಕಾರ್ಡ್‍ನ್ನುಇಶ್ಯೂ ಮಾಡಿದೆ. ಈ ಕಾರ್ಡ್ ಕುಟುಂಬದ ಐದು ವರ್ಷದ ಮಕ್ಕಳಿಗಾಗಿದೆ.

ಯುಐಡಿ ಎಐ ಬಿಡುಗಡೆಗೊಳಿಸಿದ ಈ ನೀಲಿ ಕಾರ್ಡುಗಳಿಂದ ಭವಿಷ್ಯದಲ್ಲಿ ಆಧಾರಿಗೆ ಸಂಬಂಧಿಸಿದ ಸೇವೆಗಳಲ್ಲಿ ಉಪಯೋಗವಿದೆ.

ಯುಎಐಡಿಎಐಯ ಅಧಿಕಾರಿಯೊಬ್ಬರು ಮಕ್ಕಳಿಗೆ ಮಾಡಿಸಿದ ನೀಲಿ ಆಧಾರ್ ಅವರ ವ್ಯಾಕ್ಸಿನ್‍ನಿಂದ ಹಿಡಿದು ನ್ಯೂಟ್ರಿಶನ್ ಪೇಟರ್ನ್ ತನಕ ಬಳಕೆಗೆ ಬರಲಿದೆ ಎಂದು ತಿಳಿಸಿದ್ದಾರೆ. ಇದಲ್ಲದೆ ನಾಪತ್ತೆಯಾದರೆ ಮಕ್ಕಳನ್ನು ಹುಡುಕಲು ಉಪಯುಕ್ತವಾಗಲಿದೆ. ಇಷ್ಟೇ ಅಲ್ಲ ನೀಲಿ ಆಧಾರ್ ಕಾರ್ಡಿನಲ್ಲಿ ಮೊಬೈಲ್ ನಂಬರ್ ಮತ್ತು  ಎಡ್ರೆಸ್  ಮಾಡಿಸಬಹುದಾಗಿದೆ.

 
ಇವರಿಗಾಗಿ ನೀಲಿ ಆಧಾರ:
ಯುಐಡಿಎಐ ನವಜಾತ ಶಿಶುವಿನಿಂದ ಐದು ವರ್ಷದ ಮಗುವಿನವರೆಗೆ ನೀಲಿ ಆಧಾರ್ ಕಾರ್ಡ್‍ನ್ನು ಇಶ್ಯೂ ಮಾಡಲು ಆರಂಭಿಸಿದ್ದು, ಐದು ವರ್ಷದವರೆಗೆ ಇದು ಚಾಲ್ತಿಯಲ್ಲಿರುತ್ತದೆ. ಮಗುವಿಗೆ ಐದು ವರ್ಷಆದ ಮೇಲೆ ವಿವರವನ್ನು ತಿಳಿಸಿ ಬಯೊಮೆಟ್ರಿಕ್ ಡಿಟೇಲ್ ಆಧಾರ್ ಕಾರ್ಡ್ ಮಾಡಿಸಬೇಕು. ಆಧಾರ್ ನಂಬರ್ ಮೊದಲಿನದ್ದೇ ಇರುತ್ತದೆ.

 
ಹೀಗೆ ಅರ್ಜಿ ಸಲ್ಲಿಸಿ:
ನೀಲಿ ಆಧಾರ್ ಕಾರ್ಡ್‍ನ್ನು ಮಾಡಿಸಲಿಕ್ಕಾಗಿ ನವಜಾತ ಮಗುವಿನಿಂದ ಐದುವರ್ಷ ಆಗುವವರೆಗೆ ಅಧಿಕೃತ ಆಧಾರ್ ಸೆಂಟರ್‍ಗೆ ಭೇಟಿ ನೀಡಿರಿ. ಅಲ್ಲಿ ನಿಮಗೆ ಅರ್ಜಿಫಾರಂ ಕೊಡುತ್ತಾರೆ. ಫಾರ್ಮನ್ನು ಭರ್ತಿ ಮಾಡಿ ಮಗುವಿನಫೋಟೊ, ಹೆಸರು, ವಿಳಾಸ, ವಿವರರ ಇತ್ಯಾದಿ ಬರೆಯಿರಿ. ಮಗುವಿನ ತಂದೆತಾಯಿ ,ಪೊಷಕರ ಫೋನ್ ನಂಬರ್ ಕೊಡಿ.

 
ಟೋಲ್‍ಫ್ರೀ ನಂಬ್ರ:
ಆಧಾರಿಗೆ ಸಂಬಂಧಿಸಿದ ದೂರುಗಳಿದ್ದರೆ ಯುಐಡಿಎಐಯಲ್ಲಿ ಕೆಲವು ಅವಕಾಶಗಳಿವೆ. ಮೊದಲು 1947 ಟೋಲ್ ಫ್ರೀ ನಂಬರಿಗೆ ಫೋನ್ ಮಾಡಿ ದೂರು ಕೊಡಿರಿ. ಅಥವಾ help@uidai.gov.in ಇಮೇಲ್ ಕೂಡಾ ಮಾಡಬಹುದು.

ದೇವಾಸ್ಥಾನದಲ್ಲೂ ಇಂತಹ ಕೆಲಸವೇ ?

ಜೇಣುನೊಣಗಳೇ ಈಕೆಯ ರವಿಕೆ !