,

Angry Cry Cute Geeky LOL Love OMG Win WTF

ನಿವೃತ್ತಿಯ ನಂತರ ಸೇನೆಯ ನಾಯಿಗಳನ್ನು ವಿಷ ಕೊಟ್ಟು ಸಾಯಿಸುವುದು ಯಾಕೆ ಗೊತ್ತೇ?

ದೇಶ ಕಾಯುವ ಸೈನಿಕರಲ್ಲಿ ಮನುಷ್ಯರು ಮಾತ್ರ ಇರುವುದಲ್ಲ ಬದಲಾಗಿ ಅವರ ಪ್ರತಿ ಹೆಜ್ಜೆಗಳಲ್ಲೂ ಸಂಗಾತಿಯಯಾಗಿ ಹೆಜ್ಜೆ ಹಾಕುತ್ತಾ ತಮ್ಮ ಪ್ರಾಣ ಅರ್ಪಿಸುವ ಶ್ವಾನಗಳೂ ಕೂಡಾ ಸೈನಿಕರಷ್ಟೇ ಪಾಲುದಾರಾಗಿವೆ. ಈ ಶ್ವಾನಗಳು ಸೈನಿಕರಿಗೆ ಶತ್ರುಗಳು ಅಡಗಿಸಿಟ್ಟಿರುವ ಬಾಂಬುಗಳನ್ನು, ಭಯೋತ್ಪಾದಕರ ಅಡಗುತಾಣಗಳನ್ನು ಹುಡುಕುವ ಇತ್ಯಾದಿ ಕಾರ್ಯಗಳನ್ನು ಮಾಡುತ್ತವೆ. ನಾಯಿಗಳ ಈ ನಿಯತ್ತಿನ ಕಾರಣದಿಂದ್ದಾಗಿ ಮನುಷ್ಯನ ಗೆಳೆಯನಾಗಿದೆ. ತನ್ನ ನೈಜ ಗೆಳೆಯ ಒಂದೊಮ್ಮೆ ಸಹಾಯ ಮಾಡಲು ಹಿಂದೇಟು ಹಾಕಬಹುದು, ಆದರೆ ನಾಯಿಗಳು ಯಾವತ್ತೂ ಹಿಂಜರಿಯುವುದಿಲ್ಲ.ಇದರ ಹೊರತಾಗಿ ದೇಶದ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿದ್ದ ನಾಯಿಗಳನ್ನು ನಿವೃತ್ತಿಯ ನಂತರ ವಿಷವುಣಿಸಿ ಚಿರ ನಿದ್ರೆಗೆ ಜಾರಿಸುತ್ತಾರೆ. ಯಾಕಾಗಿ ಹೀಗೆ ಮಾಡುತ್ತಾರೆಂದು ಬನ್ನಿ ನೋಡೋಣ.

ಸೇನೆಯ ನಾಯಿಗಳಲ್ಲಿ ಮೂರು ವಿಧದ ನಾಯಿಗಳು ಮತ್ತು ಅವುಗಳ ಆರೈಕೆ:
ಇವುಗಳಲ್ಲಿ ಲೆಬ್ರಡೋರ್, ಜರ್ಮನ್ ಶೆಫರ್ಡ್ ಹಾಗೂ ಬೆಲ್ಜಿಯನ್ ಶೆಫರ್ಡ್ ತಳಿಯ ನಾಯಿಗಳಿರುತ್ತವೆ. ಸೇನೆಗೆ ಸೇರಿಸಲ್ಪಡುವ ನಾಯಿಗಳನ್ನು ವಿಶೇಷವಾಗಿ ನೋಡಿಕೊಳ್ಳಲಾಗುತ್ತದೆ. ಅವುಗಳ ಊಟೋಪಚಾರ, ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ವಿಶೇಷ ಗಮನವಹಿಸಲಾಗುತ್ತದೆ. ಪ್ರತಿ ಕ್ಷಣವೂ ಸೇನಾಧಿಕಾರಿಗಳಂತೆ ಅಲರ್ಟ್ ಆಗಿರುವಂತೆ ವಿಶೇಷ ತರಬೇತಿ ನೀಡಲಾಗುತ್ತದೆ.

ವಿಷವುಣಿಸಿ ಸಾಯಿಸಲಾಗುತ್ತದೆ:
ಯಾವುದೇ ಶ್ವಾನವು ಒಂದು ತಿಂಗಳಿಗಿಂತ ಹೆಚ್ಚು ಕಾಲ ಅನಾರೋಗ್ಯವಾಗಿದ್ದರೆ ಅಥವಾ ಡ್ಯೂಟಿ ಮಾಡಲು ಅಸಮರ್ಥವಾಗಿದ್ದರೆ, ಅಂತಹಾ ನಾಯಿಗಳನ್ನು ಎನಿಮಲ್ ಯುತೆನೇಶಿಯಾ ಎಂಬ ವಿಷ ಉಣಿಸಿ ಕೊಲ್ಲಲಾಗುತ್ತದೆ. ಯಾಕೆಂದರೆ ನಿವೃತ್ತಿಯ ನಂತರ ನಾಯಿಗಳನ್ನು ಕೊಲ್ಲುವುದು ಬ್ರಿಟೀಷರ ಕಾಲದಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.

ಇವುಗಳನ್ನು ಕೊಲ್ಲಲು ಎರಡು ಮುಖ್ಯ ಕಾರಣ:
1) ಈ ಶ್ವಾನಗಳಿಗೆ ಸೇನೆಯ ಬೇಸ್ ಗಳ ಸಂಪೂರ್ಣ ಲೊಕೇಶನ್ ತಿಳಿದಿರುತ್ತದೆ ಹಾಗೂ ಹಲವು ರಹಸ್ಯಗಳೂ ತಿಳಿದಿರುತ್ತದೆ. ಇದರಿಂದ ಅಪಾಯದ ಸಾಧ್ಯತೆಗಳಿರುತ್ತವೆ
2) ಸೇನೆಯು ನೀಡಿದ್ದ ಸೌಲಭ್ಯ, ಊಟೋಪಚಾರ ಹಾಗೂ ಆರೈಕೆಯನ್ನು ಇತರ ಯಾವುದೇ ಪ್ರಾಣಿ ಸಂಘಗಳು ನೀಡಲು ಸಾಧ್ಯವಿಲ್ಲ. ಹಾಗೂ ನಾಯಿಗಳು ಸೇನೆಯ ವಾತಾವರಣ ಹಾಗೂ ಅರೈಕೆಗೆ ಒಗ್ಗಿ ಕೊಂಡಿರುವ ಕಾರಣ ಇತರ ಸಂಸ್ಥೆಗಳಲ್ಲಿ ಜೀವಿಸುವುದು ಕಷ್ಟವಾಗಿರುವ ಕಾರಣ ಅವುಗಳನ್ನು ಕೊಲ್ಲಲಾಗುತ್ತದೆ. ಹಾಗೂ ಇತರರಿಗೆ ಹಸ್ತಾಂತರಿಸುವುದು ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿಯಾಗಿದೆ

ಶ್ವಾನಗಳನ್ನು ಕೊಲ್ಲುವ ಮೊದಲು ಎಲ್ಲಾ ರೀತಿಯ ಗೌರವ ಸಮ್ಮಾನಗಳನ್ನು ನೀಡಲಾಗುತ್ತದೆ. ಕೊಂದ ನಂತರ ಸೈನಿಕರನ್ನು ಬೀಳ್ಕೊಡುವ ರೀತಿಯಲ್ಲಿ ಎಲ್ಲಾ ಗೌರವಾಧಾರಗಳೊಂದಿಗೆ ಬೀಳ್ಕೊಡಲಾಗುತ್ತದೆ.

ಹಲವರ ನಿದ್ದೆಗೆಡಿಸಿದ್ದ ನಕಲಿ ಪೊಲೀಸ್  ಇನ್ಸ್‍ಪೆಕ್ಟರ್ ಸಿಕ್ಕಿಬಿದ್ದಿದ್ದೇಗೆ ಗೊತ್ತಾ ?

ರವಿಕೆ ಇಲ್ಲದೆ ಸೀರೆ ಉಟ್ಟು ಫೋಟೊ ತೆಗೆಯುವ ಹೊಸ ಚಾಲೆಂಜ್ !