,

OMG

ದೇಶವನ್ನೇ ಬೆಚ್ಚಿಬೀಳಿಸಿದ ‘ನಕಲಿ ಆಧಾರ್’ ಜಾಲ !; ಇವರು ಆಧಾರ್ ಮಾಡುತ್ತಿದ್ದಿದ್ದು ಹೇಗೆ ಗೊತ್ತೇ ?

 

ಉತ್ತರ ಪ್ರದೇಶದಲ್ಲಿ ಫಿಂಗರ್‍ಪ್ರಿಂಟ್‍ಕ್ಲೋನಿಂಗ್ ಮಾಡಿ ನಕಲಿ  ಆಧಾರ್ ಕಾರ್ಡ್ ಮಾಡುವವರನ್ನು ಪೊಲೀಸರು ಬಂಧಿಸಿದ್ದಾರೆ

ಉತ್ತರಪ್ರದೇಶದ ಪೊಲೀಸರು ಇತ್ತೀಚೆಗೆ ನಕಲಿ ಆಧಾರ್ ಕಾರ್ಡ್ ಮಾಡುವ ಹತ್ತುಜನರ ಒಂದು ತಂಡವನ್ನು ಬಂಧಿಸಿದೆ. ಪೊಲೀಸರ ಪ್ರಕಾರ ಈ ಗ್ಯಾಂಗ್ ಯುಐಡಿಎಐನ ಬಯೊಮೆಟ್ರಿಕ್‍ನಿಂದ ಫಿಂಗರ್‍ಪ್ರಿಂಟ್ ಕ್ಲೋನಿಂಗ್ ಮಾಡುತ್ತಿತ್ತು.ಪೊಲೀಸರ ಪ್ರಕಾರ ಈ ಗ್ಯಾಂಗ್ ಯುಐಡಿಎಐ ಸೆಂಟರ್ ಆಪರೇಟರ್ ಫಿಂಗರ್ ಕ್ಲೋನಿಂಗ್ ಮಾಡಿ ಆಧಾರ್ ವೆಬ್‍ಸೈಟ್‍ನ್ನು  ತೆರೆಯುತ್ತಿತ್ತು ಮತ್ತು ಅದರಲ್ಲ ನಕಲಿ ಪಂಜೀಕರಣ ಮಾಡುತ್ತಿತ್ತು.

ಫಿಂಗರ್‍ಫ್ರಿಂಟರ್ ಸ್ಕಾನರ್,ಐರಿಸ್‍ಸ್ಕಾನರ್, ಲ್ಯಾಪ್‍ಟಾಪ್, ರಬರ್‍ಸ್ಟಾಂಪ್ ಆಧಾರ್‍ಕಾರ್ಡ್ ಜಿಪಿಎಸ್ ಉಪಕರಣ ಮತ್ತು ಭಾರೀ ಪ್ರಮಾಣದ ಮುದ್ರಣ ಸಾಮಾಗ್ರಿಯನ್ನುಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾತ್ರವಲ್ಲ 12 ಮೊಬೈಲ್ ಫೋನ್, 2 ಆಧಾರ್ ಕಾರ್ಡ್‍ಸ್ಕಾನರ್,ಎರಡು ರೆಟಿನಾ ಸ್ಕಾನರ್  ಮತ್ತು ಇತರವಸ್ತುಗಳು ಮತ್ತು ಡಿವೈಸ್‍ಗಳನ್ನು ಕೂಡ ವಶಪಡಿಸಿಕೊಂಡಿತ್ತು. ಈ ಎಲ್ಲ ವಸ್ತುಗಳು ಇವರಲ್ಲಿ ಬಹಳ ಉತ್ತಮ ನೆಟ್‍ವರ್ಕ್ ಇದೆ ಎನ್ನುವುದನ್ನು ಸಾಬೀತು ಪಡಿಸುತ್ತಿದೆ. ಯುಐಡಿಎಐಯ ಸುರಕ್ಷಿತತಂತ್ರವನ್ನು ನಕಲಿ ಮಾಡಿ ಆಧಾರ್ ನಕಲಿ ಕಾರ್ಡನ್ನು ತಯಾರಿಸುತ್ತಿದ್ದರು.

ಈ ಗ್ಯಾಂಗ್‍ನ ಮುಖ್ಯಸ್ಥ ಮತ್ತು ಮಾಸ್ಟರ್ ಮೈಂಡ್ ಕಾನ್‍ಪುರದ ಸೌರಭ್ಸಿಂಗ್ ಮತ್ತ ಜುಅಮಿತಾಬ್ ಯಶ್‍ಆಗಿದ್ದಾರೆ ಬೇರೆ ಬೇರೆ ಜಿಲ್ಲೆಗಳಿಂದ ನಕಲಿ ಆಧಾರ್ ಕಾರ್ಡ್‍ಮಾಡಿಕೊಟ್ಟಿದ್ದಾರೆ. ಜನರಿಗೆ ಅದು ನಕಲಿಯೊ ಅಸಲಿಯೊ ಎಂದು ತಿಳಿದು ಕೊಳ್ಳುವುದು ಬಹಳ ಕಷ್ಟವಿದೆ. ಪ್ರತಿಯೊಬ್ಬ ಗ್ರಾಹಕರಿಂದ ಐವತ್ತು ರಿಂದ ನೂರೈವತ್ತು ರೂಪಾಯಿ ಪಡೆದು ಆಧಾರ್ ಕಾರ್ಡ್‍ಮಾಡಿಕೊಡುತ್ತಿದ್ದರು.

ಇತ್ತೀಚೆಗೆ ಎಸ್‍ಟಿಎಫ್‍ಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಡುವ ಸುದ್ದಿ ಕಿವಿಗೆ ಬಿದ್ದಿತ್ತು. ನಂತರ ಪೊಲೀಸರು ಮತ್ತು ಎಸ್‍ಟಿಎಫ್ ತಂಡ  ನಕಲಿ ಆಧಾರ್ ಕಾರ್ಡ್ ಮಾಡುವ ತಂಡವನ್ನು ಪತ್ತೆಹಚ್ಚಿ ಹಿಡಿದಿದೆ. ಆಧಾರ್ ಕಾರ್ಡ್‍ಮಾಡಲು ಬಳಸುತ್ತಿದ್ದ  ತಂತ್ರಜ್ಞಾನ ಜಟಿಲವಾದುದು ಆಗಿತ್ತು. ಅಧಿಕೃತ ಆಪರೇಟರ್‍ಗಳ ಫಿಂಗರ್ ಪ್ರಿಂಟ್ ಕ್ಲೋನ್ ಮಾಡಿ ಆಧಾರ್ ಕಾರ್ಡ್  ವೆಬ್‍ಸೈಟ್ ಲಾಗ್ ಆನ್ ಮಾಡುತ್ತಿದ್ದರು.ಆಧಾರ್ ಮಾಡಲು ಎನ್‍ರಾಲ್‍ಮೆಂಟ್ ಮಾಡಿಸುತ್ತಿದ್ದರು.

ಆಧಾರ್ ಎನ್‍ರಾಲ್‍ಮೆಂಟ್‍ಗೆ ಬೇರೆ ಬೇರೆ ಏಜೆನ್ಸಿಗಳು ತಮ್ಮ ಸೆಂಟರ್ ತೆರೆಯುತ್ತವೆ. ಸೆಂಟರ್‍ನಲ್ಲಿ ಫಾಮ್ ತುಂಬಿಸಿದ ಬಳಿಕ ಫಿಂಗರ್‍ಪ್ರಿಂಟ್‍ಮತ್ತು ಐರಿಸ್(ಕಣ್ಣಿನಗೊಂಬೆ) ಬಯೊಮೆಟ್ರಿಕ್ ತೆಗೆಯಲಾಗುತ್ತದೆ. ಇದಕ್ಕಾಗಿಆಪರೇಟರ್ ಯುಐಡಿಎಐಯನ್ನು ಸಂಪರ್ಕಿಸಬೇಕಾಗಿದೆ.

ಡಿಜಿಟಲ್ ವ್ಯವಹಾರಕ್ಕೆ ಕೇಂದ್ರ ಸರಕಾರ ಒತ್ತು ನೀಡಿವೆ. ಆದರೆ ನಕಲಿ ಆಧಾರ್ ಕಾರ್ಡ್ ಮಾಡುವವರು ಇರುವುದರಿಂದ ಇದು ಬಹಳ ಕಷ್ಟದ ವಿಚಾರವಾಗಬಹುದು. ನಕಲಿ ಆಧಾರ್ ಕಾರ್ಡ್‍ಮಾಡುವವರನ್ನು ಹಿಡಿದದ್ದರಿಂದ ಆಧಾರ್‍ಕಾರ್ಡ್ ನಿರ್ಬಂಧದ ಮೇಲೆ ಸವಾಲೆದ್ದಿದೆ.

ಜನರ ಮನಗೆದ್ದ ಐಎಎಸ್ ಅಧಿಕಾರಿ. ಯಾಕೆ ಗೊತ್ತಾ ?

ಸತತ ಮೂರು ದಿವರ ನಾಯಿಯನ್ನು ರೇಪ್ ಮಾಡಿದ ರಿಕ್ಷಾ ಚಾಲಕ; ಸಿಸಿಟಿವಿ ವೀಡಿಯೋ ಬಹಿರಂಗ!