,

Cry Cute Love Win

“ದೇಶಕ್ಕೆ ಸಂಸದೆ , ಮಗುವಿಗೆ ತಾಯಿ”; ಸಂಸತ್ತಿನಲ್ಲಿ ಎದೆಹಾಲುಣಿಸಿದ ತಾಯಂದಿರು

 

ಸಂಸತ್ತಿನಲ್ಲಿ ಎದೆಯಾಲು ಉಣಿಸಿ ಇಬ್ಬರು ಸಂಸದರು ವಿಶ್ವದ ಗಮನ ಸೆಳೆದಿದ್ದಾರೆ .  ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸುತ್ತುವ ಬ್ರೆಜಿಲ್ ದೇಶದ ಸಚಿವೆ ಮ್ಯಾನುಯೆಲಾ ಅವಿಲಾ ರವರು ಎದೆಹಾಲು ಉಣಿಸುವ ಚಿತ್ರವನ್ನು ಕೆಲವು ಸ್ಥಳೀಯ ಮಾಧ್ಯಮಗಳು ವರದಿ ಂಆಡಿತ್ತು ನಂತರ ಅದು ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ.

 

ಇನ್ನೋಂದು ಪ್ರತ್ಯೇಕ ಘಟನೆ ಆಸ್ಟ್ರೇಲಿಯಾ ಸಂಸತ್ತಿನಲ್ಲಿ ನಡೆದಿದೆ. ಸಂಸತ್ತಿನಲ್ಲಿ ನಿರ್ಣಯ ಮಂಡಿಸುವಾಗಲೇ ಮಗುವಿಗೆ ಎದೆ ಹಾಲುಣಿಸುವ ಮೂಲಕ ಆಸ್ಟ್ರೇಲಿಯಾದ ಸಂಸದೆ ಲ್ಯಾರಿಸ್‌ ವಾಟರ್ಸ್‌ ತಮ್ಮ ಜವಬ್ಧಾರಿ ಬಗ್ಗೆ ವಿಶ್ವಕ್ಕೆ ತಿಳಿಸಿದ್ದಾರೆ.

ಲ್ಯಾರಿಸ್‌ ಅವರು ತಮ್ಮ  ಮಗುವಿಗೆ ಎದೆ ಹಾಲುಣಿಸುತ್ತಲೇ ಸದನದಲ್ಲಿ ನಿರ್ಣಯವೊಂದನ್ನು ಮಂಡಿಸಿದ್ದರು.

‘ಮಗುವಿಗೆ ಎದೆ ಹಾಲುಣಿಸುವಾಗಲೇ ನಿರ್ಣಯ ಮಂಡಿಸಬೇಕಾಯಿತು. ನನ್ನ ಮಗುವಿಗೆ ಆಶೀರ್ವದಿಸಿ’ ಎಂದು ಲ್ಯಾರಿಸ್‌ ಅವರು ಟ್ವೀಟ್‌ ಮಾಡಿದ್ದಾರೆ.

 

“ನಿರಂತರ ಬದಲಾವಣೆ ಕಾಣುತ್ತಿರುವ ಕಾಲಮಾನದಲ್ಲಿ ತಾಯ್ತನದ ಜವಾಬ್ದಾರಿಗಳನ್ನು ನಿಭಾಯಿಸುವುದಕ್ಕೆ ಯಾವುದೇ ಮುಲಾಜಿನ ಅವಶ್ಯಕತೆ ಇಲ್ಲ. ಹಾಲುಣಿಸುವುದು ವೃತ್ತಿಯಷ್ಟೇ ಒಂದು ಕರ್ತವ್ಯ ಎಂದು ಜಗತ್ತಿಗೆ ತಿಳಿಸುತ್ತಿರುವ ಈ ದೀರ ಹೆಣ್ಣಿಗೆ ಶರಣು.” ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಶೇರ್ ಮಾಡಿದ್ಧಾರೆ.

 

 

ಶರೀರದಲ್ಲಿ ಈ ಏಳು ಜಾಗದಲ್ಲಿ ಮಚ್ಚೆಗಳಿದ್ದರೆ ಎನೇನು ಪ್ರಯೋಜನ ಇದೆ ನೋಡಿ!

ಈ ರೆಸ್ಟೋರೆಂಟ್ ನಲ್ಲಿ ಸಿಗುವ ಸ್ಪೆಷಲ್ ಅಹಾರಗಳೇನು ಗೊತ್ತೇ ?