, ,

OMG

ತಾಯಿಗಾಗಿ ಬಾವಿ ತೋಡಿದ ಧೀರ ಹೆಣ್ಣು ಮಕ್ಕಳು

 

ರಾಜಮೌಳಿಯ ಬಾಹುಬಲಿ ಸಿನೆಮಾದಲ್ಲಿ ಶಿವ ಜಲಾಭಿಷೇಕಕ್ಕೆ ತನ್ನ ತಾಯಿ ದೂರದಿಂದ ನೀರು ತರುತ್ತಿರುವುದನ್ನು ನೋಡಿದ ಬಾಹುಬಲಿ ಶಿವಲಿಂಗವನ್ನೇ ಹೊತ್ತು ನೀರಿನ ಬಳಿ ತಂದು ಇಟ್ಟದ್ದು ನಿಜ ಜೀವನದಲ್ಲಿ ಛತ್ತೀಸ್ ಗಡ ಜಿಲ್ಲೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಮಾಡಿ ತೋರಿಸಿದ್ದಾರೆ.

 

ತಮ್ಮ ತಾಯಿಗಾಗಿ ಭೂಮಿ ಅಗೆದು ಭಾವಿ ತೋಡಿದ್ದಾರೆ. ತಮ್ಮ ತಾಯಿ ಕಿಲೊಮೀಟರ್ ದೂರದಿಂದ ನೀರು ತರುವುದನ್ನು ನೋಡಿ ಬಾವಿ ತೋಡುವ ನಿರ್ಧಾರಕ್ಕೆ ಬಂದರು. ಅದೃಷ್ಟಕ್ಕೆ ಅವರಿಗೆ ಇಪ್ಪತ್ತು ಅಡಿಯಲ್ಲಿಯೇ ನೀರು ಸಿಕ್ಕಿದೆ. ಛತ್ತೀಸ್ ಗಡದ ಸಂಸದೀಯ ಸಚಿವ ಸಂಪಾದೇವಿ ಪಾವಲ್ ಹೆಣ್ಣುಮಕ್ಕಳ ಈ ಸಾಹಸವನ್ನು ಶ್ಲಾಘಿಸಿ ಎಲ್ಲ ರೀತಿಯ ಸಹಾಯಮಾಡುವುದಾಗಿ ಹೇಳಿದ್ದಾರೆ.

 

ಕೌಚೌಡದ ವ್ಯಾಪಾರಿ ಅಮರ್ ಸಿಂಗ ಗೋಂಡ ಮತ್ತು ಅವರ ಪತ್ನಿ ಜುಕಮುಲ್‌ರಿಗೆ ಶಾಂತಿ ಮತ್ತು ವಿಜ್ಞಾಂತಿ ಎಂಬ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಕಸಾಯಿಯಾಪಾರದಲ್ಲಿ ಕೇವಲಹದಿನೈದು ಮನೆಗಳು ಇವೆ. ಇಲ್ಲಿ ಮೂರು ಹ್ಯಾಂಡಲ್ ಬೋರ್ ಇವೆ. ಇವುಗಳಲ್ಲಿ ಒಂದು ಹಾಳಾಗಿವೆ. ಜನರು ನೀರಿಗಾಗಿ ಕಿಲೋಮೀಟರ್ ದೂರ ಹೋಗಬೇಕಾಗಿದೆ.

 

ಕುಟುಂಬಕ್ಕೆ ನೀರು ತರಲು ಶಾಂತಿ, ವಿಜ್ಞಾಂತಿ ಮತ್ತು ಅವರ ತಾಯಿ ದಿನಾಲೂ ಕಿಲೊಮೀಟರ್ ದೂರ ಹೋಗುತ್ತಿದ್ದರು. ಈ ಕಷ್ಟವನ್ನು ನೋಡಿ ಹತ್ತಿರದಲ್ಲಿಯೇ ಬಾವಿ ತೋಡಲು ನಿರ್ಧರಿಸಿ ಅದರಲ್ಲಿ ಈಗ ಯಶಸ್ವಿಯಾಗಿದ್ದಾರೆ.

 

 

ಮನೆಯ ಹತ್ತಿರ ಬಾವಿ ತೋಡುತ್ತೇವೆ ಎಂದು ಶಾಂತಿ ಮತ್ತು ವಿಜ್ಞಾಂತಿ ಹೇಳಿದಾಗ ಅವರ ತಂದೆ ತಾಯಿ ಸಹಿತ ಎಲ್ಲರೂ ತಮಾಷೆ ಮಾಡುತ್ತಿದ್ದಾರೆ ಎಂದು ತಿಳಿದಿದ್ದರು. ಆದರೆ ಅವರು ಬಾವಿ ತೋಡಲು ಹೊರಟಾಗ ಎಲ್ಲರು ನೆರವಿಗೆ ನಿಂತರು. ಹೀಗೆ ಅವರ ಪರಿಶ್ರಮ ಯಶಸ್ವಿಯಾಗಿದೆ.

ನಿಮ್ಮ ಮಕ್ಕಳು ಈ ರೀತಿ ಕುಳಿತುಕೊಳ್ಳುತ್ತಿದ್ದಾರಾ? ಹಾಗಾದರೆ ನೀವು ಇದನ್ನು ಓದಲೇಬೇಕು

ಎಚ್ಚರ! ಸಾಕು ನಾಯಿಗಳಿಗೆ ಮತ್ತಿಕ್ಕಬೇಡಿ