ಕಾರಿನಿಂದ ಮೊಬೈಲನ್ನು ಕಳ್ಳತನ ಮಾಡಿದ ಯುವಕನೊಬ್ಬ ಮೊಬೈಲ್ ನಲ್ಲಿದ್ದ ಅಶ್ಲೀಲ ಫೋಟೊ ತೋರಿಸಿ ಬ್ಲಾಕ್ ಮೇಲ್ ನಡೆಸಿರುವ ಘಟನೆ ನಡೆದಿದೆ.
ಆರೋಪಿ 20 ಲಕ್ಷರುಪಾಯಿ ಹಣ ಮತ್ತು ತನ್ನ ಜೊತೆ ಸೆಕ್ಸ್ ನಡೆಸಬೇಕೆಂದು ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಂತ್ರಗಾರಿಕೆ ಮೂಲಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೊದಲು 20 ಸಾವಿರ ನಗದನ್ನು ಆತನಿಗೆ ನೀಡಿ ನಂತರ ಉಳಿದ ಹಣಕ್ಕಾಗಿ ಬರುವಂತೆ ಆತನನ್ನು ಕರೆಸಲಾಗಿತ್ತು.
ಮೊಬೈಲ್ ನಲ್ಲಿ ಖಾಸಗೀ ಫೋಟೊ, ವಿಡಿಯೋಗಳನ್ನು ಇಟ್ಟುಕೊಳ್ಳಬಾರದು . ಒಂದು ವೇಳೆ ಮೊಬೈಲ್ ಕೆಟ್ಟುಹೋದರೆ ರಿಪೇರಿ ಮಾಡುವವರು ಕೂಡ ಇದೇ ರೀತಿ ಬ್ಲಾಕ್ ಮೇಲ್ ಮಾಡುವ ಸಾಧ್ಯತೆಗಳಿವೆ.