,

LOL

ಚ್ಯೂಯಿಂಗ್ ಗಮ್‍ ಜಗಿಯುವವರು ಓದಲೇ ಬೇಕಾದ ಸುದ್ದಿ !

ಇಲ್ಲಿ ಚ್ಯೂಯಿಂಗ್ ಗಮ್‍ನ ಎಲ್ಲ ಬಣ್ಣ ಈಗಮ್ ವಾಲ್‍ನಲ್ಲಿ ಸಿಗುತ್ತದೆ

ಚಿತ್ರವಿಚಿತ್ರ ವಸ್ತುಗಳಲ್ಲಿ ಅಸಕ್ತಿ ಇರುವವರು ಮತ್ತು ಫೋಟೊಗ್ರಾಫಿಯಲ್ಲಿ ಅಸಕ್ತರಿಗೆ ಗಮ್ ವಾಲ್ ಆಕರ್ಷಣೆಯ ವಿಚಾರವಾಗಿದೆ. ಇನ್ನು ಈಗೋಡೆ ಎಲ್ಲರನ್ನು ಆಕರ್ಷಿಸುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.

ವಾಸ್ತವದಲ್ಲಿ ಈ ಗೋಟೆ ಅಮೆರಿಕದಲ್ಲಿದೆ. ಸಿಎಟಲ್‍ನ ಪೋಸ್ಟ್‍ಎಲಿಯ ಮಾರ್ಕೆಟ್ ಥಿಯೆಟರ್ ಹೊರಗೋಡೆಯನ್ನು  ಜನರು ತಾವು ಜಗಿದು ಉಳಿದ ಚೂಯಿಂಗ್ ಗಮ್ ಅಂಟಿಸಲು ಬಳಸುತ್ತಿದ್ದಾರೆ.

ಕೆಲವರು ಇದನ್ನು ಜೀವಂತ ಕಲೆ ಎಂದು ಕರೆಯುತ್ತಾರೆ. ಇಲ್ಲಿ ತರತರದ ಚೂಯಿಂಗ್ ಗಮ್‍ನ ಕಾಮನಬಿಲ್ಲು ಸೃಷ್ಟಿಯಾಗುತ್ತಿದೆ.ಆದರೆ ಇದು ಯಾವಾಗ ಬೇಕಾದರೂ ಬದಲಾಗಬಲ್ಲ ಸಾರ್ವಜನಿಕ ಕಲೆಯ ರೀತಿಯದ್ದಾಗಿದೆ.

1907  ಆಗಸ್ಟ್ 17ರಿಂದ ಅಮೆರಿಕದ ಅತ್ಯಂತ ಹಳೆಯ ಮಾರ್ಕೆಟ್ ನಡೆಯುತ್ತಿದೆ. ವಾಸ್ತವದಲ್ಲಿ ಇದು ರೈತರ ಮಾರ್ಕೆಟ್ ಆಗಿದೆ. 3.6 ಎಕ್ರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಬಜಾರು ನೋಡಲು ಜಗತ್ತಿನ ಬೇರೆ ಮಾರ್ಕೆಟ್‍ನಂತೆಯೇ ಆಗಿದೆ. ಇಲ್ಲಿ ಅಂಗಡಿಗಳಲ್ಲಿ ಹಲವು ರೀತಿಯ ತಾಜಾ ವಸ್ತುಗಳು ಸಿಗುತ್ತವೆ. ತಾಜಾ ಬೇರು ಮದ್ದುಗಳಿಂದ ಹಿಡಿದು ತಾಜಾ  ಹಿಡಿದ ಮೀನುಗಳು ಕೂಡಾ ಇಲ್ಲಿ ನೀವು ಖರೀದಿಸಬಹುದಾಗಿದೆ.

ಈಬಜಾರು ಇಲ್ಲಿರುವ ಗಮ್ ವಾಲ್ ಯಾನೆ ಚೂಯಿಂಗ್ ಗಮ್ ಗೋಡೆಗೆ ಪ್ರಸಿದ್ಧಿಯನ್ನು ಗಳಿಸಿಕೊಂಡಿದೆ.  ಈ ಗೋಡೆಯಲ್ಲಿ ಜನರು ತಾವು  ಜಗಿದುಳಿದ ಚೂಯಿಂಗ್ ಗಮ್ ಅಂಟಿಸುತ್ತಾರೆ. ಈ ಗೋಡೆಯನ್ನು  ಬಹಳಸ ಮಯದಿಂದ ಶುಚಿಗೊಳಿಸಿಲ್ಲ. ಇದು ಜನರಲ್ಲಿ  ಆಕರ್ಷಣೆಗೆ ಕಾರಣವಾಗಿದೆ.

ಜಗಿದು ಉಳಿದ ಚ್ಯೂಯಿಂಗ್ ಗಮ್‍ನಿಂದ ಏನೆಲ್ಲ ಮಾಡಬಹುದು ಅಲ್ವ?!

 

ಮೆಹಂದಿ ಬಳಸುತ್ತೀರಾ ?;ಹಾಗಾದರೆ ಇದನ್ನು ಓದಿ

ಉಗುರಿನಲ್ಲಿ ಈ ಬಿಳಿ ಕಲೆಗಳು ಯಾಕೆ ಬರುತ್ತೆ ಗೊತ್ತಾ?: ಉಗುರಿನಿಂದ ಯಾವ ರೋಗಗಳನ್ನು ಪತ್ತೆ ಹಚ್ಚಬಹುದು ನೋಡಿ !