, ,

Angry Cry Cute Geeky LOL Love OMG Win WTF

ಗೋವಿನ ಹೊಟ್ಟೆಯಲ್ಲಿ  ತೂತು ಮಾಡುವ ಅಮೆರಿಕನ್ನರು!; ಯಾಕೆ ಗೊತ್ತಾ?

 

ಆರ್ಗನೈನಿಕ್ ಪಾರ್ಮಿಂಗ್ ಅಥವಾ ಜೈವಿಕ ಕೃಷಿ ಹಲವುದೇಶಗಳಲ್ಲಿ ಪ್ರಚಲಿತವಿದೆ. ಈಗ ಕೆಲವು ದೇಶಗಳಲ್ಲಿ ದೀರ್ಘಕಾಲದ ಗದ್ದೆ, ಸುದಿರ್ಘಕಾಲ ನಡೆಯುವ ಗದ್ದೆಯ ಕುರಿತು ಬಹಳ ಪ್ರಯೋಗ ಮಾಡುತ್ತಿದ್ದಾರೆ. ಆದರೆ ಅಮೆರಿಕದಲ್ಲಿ ಹಲವು ಆರ್ಗೈನಿಕ್  ಹೈನುಗಾರಿಯ ಅನ್ವಯ ಗೋವಿನ ಶರೀರದಲ್ಲಿ ದೊಡ್ಡ ತೂತಮಾಡಲಾಗುತ್ತದೆ. ಬಹುಶಃ ನೀವು ಈ ರೀತಿಯ ಗೋವುಗಳನ್ನು ನೀವು ಟಿವಿಯಲ್ಲಿ ನೋಡಿರಬಹುದು. ಅದರ ಹೊಟ್ಟೆಯ ಬಳಿ ಒಂದು ತೂತು ಇರುತ್ತದೆ.

ಇದು ಗೋವಿನ ಆಯುಷ್ಯ ಹೆಚ್ಚಿಸಲು ಮಾಡಲಾಗುತ್ತದೆ. ವಿಜ್ಞಾನಿಗಳಿಗೆ ಗೋವಿನ  ಒಳಭಾಗವನ್ನು ತಪಾಸಿಸಲು ಬಹಳ ಕಷ್ಟ ಆಗುತ್ತದೆ. ಅಂತಹ ವೇಳೆ ಗೊವಿನ ಶರೀರದಲ್ಲಿ ತೂತು ಮಾಡಲಾಗುತ್ತದೆ. ಗೋವಿನ ಹೊಟ್ಟೆ ಹೊರ ಜಗತ್ತಿನೊಂದಿಗೆ ಸಂಬಂಧ ಹೊಂದಿರುತ್ತದೆ. ಈತೂತನ್ನು ಒಂದು ಪ್ಲಾಸ್ಟಿಕ್ ರಿಂಗ್‍ನಿಂದ ಮುಚ್ಚಲಾಗುತ್ತದೆ.  ಈ ಸರ್ಜರಿ ನಡೆದು ಒಂದು ತಿಂಗಳಲ್ಲಿ ಗೋವು ಪೂರ್ಣ ಚೇತರಿಸಿಕೊಳ್ಳುತ್ತದೆ.

ಗೋವಿನ ಹೊಟ್ಟೆಯ ತೂತಿನಲ್ಲಿ ಗೋವಿನ ಪಚನ ಕ್ರಿಯೆಯನ್ನು ವಿಜ್ಞಾನಿಗಳು ಕಂಡು ಹುಡುಕುತ್ತಾರೆ ಮತ್ತು ಗೋವಿಗೆ ಯಾವ ಆಹಾರ ಕರಗುತ್ತದೆ ಮತ್ತು ಯಾವ ಆಹಾರ ಹೊಟ್ಟೆಯಲಿ ಕರಗುವುದಿಲ್ಲ ಎನ್ನುವುದನ್ನು ಅವರು ಪತ್ತೆಹಚ್ಚುತ್ತಾರೆ. ಹೊಟ್ಟೆಯಲಿರುವ ಬ್ಯಾಕ್ಟೀರಿಯಗಳ ಕುರಿತು ಕೂಡಾ ಅವರು ಬಹಳ ಸುಲಭದಲ್ಲಿ ತಿಳಿಯುತ್ತಾರೆ.

ಆದರೆ ಗೋವಿನ ಹೊಟ್ಟೆ ತೂತುಮಾಡುವ ಪ್ರಕ್ರಿಯೆಯನ್ನು ಜನರು ವಿರೋಧಿಸುತ್ತಾರೆ ಕೂಡಾ. ಆದರೆ ಹೀಗೆ ತೂತು ಮಾಡುವ ಕಾರ್ಯ ಕೆಲವು ವರ್ಷಗಳಿಂದ ಪ್ರಚಲಿತದಲ್ಲಿದೆ. ಕೆಲವರು ಇಂತಹ ಸರ್ಜರಿಯಿಂದ ಗೋವಿಗೆ ಯಾವ ಹಾನಿಯಾಗುವುದಿಲ್ಲ ಎಂದು ಹೇಳುತ್ತಾರೆ.

ಸರ್ಜರಿಯಾದ ನಾಲ್ಕೈದು ವಾರಗಳಲ್ಲಿ ಗೋವು  ಪೂರ್ಣ ಚೇತರಿಸಿಕೊಳ್ಳುತ್ತದೆ.  ಈ ಪ್ರಕ್ರಿಯೆ ಡೈರಿ ಕಂಪೆನಿಗಳ ಲಾಭಕ್ಕಾಗಿಮಾಡಲಾಗುತ್ತದೆ. ಗೋವಿಗೆ ತೂತ ಮಾಡುವುದು ಕೃಷಿಯಲ್ಲಿ ಒಂದು ವಿಧಾನದಂತೆ ಚಾಲ್ತಿಯಲ್ಲಿದೆ.

ಯಾರೇ  ಟೀಕಿಸಿದ್ರು ಅಮೆರಿಕದ ಎನಿಮಲ್ ವೆಲ್ಪೇರ್ ಆಕ್ಟ್‍ನಲಿ ಒಂದು ಕಾನೂನು ಮಾತ್ರ ಇದೆ. ಇದು ಪ್ರಾಣಿಗಳ ರಕ್ಷಣೆಗಾಗಿ ರಚಿಸಲಾದ ಕಾನೂನು ಆದರು ಗೋವುಗಳನ್ನು ಗದ್ದೆ ಯಂತಹ ಕೆಲಸಗಳಿಗಾಗಿ ಬಳಸುವುದರಿಂದ ಈ ಕಾನೂನು ಅನ್ವಯವಾಗುವುದಿಲ್ಲ.  ಅಂದರೆ ಪ್ರಾಣಿಗಳೊಂದಿಗೆ ತೋರಿಸುವ ಕ್ರೌರ್ಯವನ್ನುನಿಲ್ಲಿಸಲಿಕ್ಕೆ ಅಮೆರಿಕದಲ್ಲಿ ಸರಿಯಾದ ಕಾನೂನೇ ಇಲ್ಲ.

ಮರೆವು ರೋಗಕ್ಕೆ ರಾಮಬಾಣ ಈ ಅಣಬೆಗಳು!

ಯಾವುದೇ ಕ್ಷಣದಲ್ಲಿ ನಿಮ್ಮ ಮಾಹಿತಿಯನ್ನು ಬಹಿರಂಗಪಡಿಸಲಿದೆ ಸರಹ ಆ್ಯಪ್ !