ನೀವು ಕ್ಯಾಲಿಕ್ಯುಲೇಟರ್ನ ಕೀಪೇಡ್ನಲ್ಲಿ ಎಲ್ಲ ಅಂಕೆಗಳು ಕೆಳಗಿನಿಂದ ಮೇಲಕ್ಕೆ ಬರೆದಿರುವುದನ್ನು ನೀವು ಗಮನಿಸಿರಬಹುದು. ಮತ್ತು ಮೊಬೈಲ್ನಲ್ಲಿ ಇದು ಉಲ್ಟಾ ಆಗಿರುವುದು ನೋಡಿರಬಹುದು. ಆದರೆ ಜೀರೊ ಎರಡರಲ್ಲಿಯೂ ಒಂದೇ ಕಡೆಯಿರುತ್ತದೆ. ಹಾಗಿದ್ದರೆ ಹೀಗೆ ಯಾಕಿರಬಹುದು.
ಹಳೆಯ ಮೆಕ್ಯಾನಿಕಲ್ ಕೇಸ್ ರಿಜಿಸ್ಟರ್ ಡಿಸೈನ್ ಮಾಡುವವರು ಅತಿ ಹೆಚ್ಚು ಬಳಕೆ ಮಾಡುವ ನಂಬರನ್ನು ಕೆಳಗೆ ಇರಿಸಿದರು ಆದ್ದರಿಂದ ಸೊನ್ನೆ ಎಲ್ಲದ್ದರಲ್ಲಿಯೂ ಕೆಳಗೆ ಆಯಿತು. ಉಳಿದ ನಂಬರ್ಗಳನ್ನು ಕೆಳಗಿನಿಂದ ಮೇಲಕ್ಕೆ ಬರೆಯಲಾಯಿತು.123 ಹೀಗೆ. ಯಾಕೆಂದರೆ ಕ್ಯಾಲಿಕ್ಯುಲೇಟರ್ಬಳಸುವವರ ಕಣ್ಣಿಗೆ ಝೀರೊ ಭಾರೀ ಬೇಗನೆ ಕಾಣಿಸಿಕೊಳ್ಳಬೇಕೆನ್ನುವುದು ಡಿಸೈನ್ರ ಅಭಿಪ್ರಾಯವಾಗಿತ್ತು.
ನಂತರ ಇಲೆಕ್ಟ್ರಾನಿಕ್ ಕ್ಯಾಲಿಕ್ಯೂಟರ್ ಆವಿಷ್ಕಾರಗೊಂಡಿತು. ಅವರು ಕೂಡಾ ಈ ಪದ್ಧತಿಯನ್ನು ಹಾಗೆಯೇ ಉಳಿಸಿಕೊಂಡರು. ಕ್ಯಾಲಿಕ್ಯೂಟರ್ನಲ್ಲಿ ಎಲ್ಲ ನಂಬರ್ ಕೆಳಗಿನಿಂದ ಮೇಲಕ್ಕಿರುತ್ತದೆ.
ಇನ್ನು ಟೆಲಿಫೋನ್ನಲ್ಲಿ ತಿರುಗುವ ಡಯಲಿಂಗ್ನ ಮೊದಲ ನಂಬರ್ ಇರುತ್ತಿತ್ತು. ಅದು ತಿರುಗಿ ಝೀರೊದಲ್ಲಿ ಬಂದು ನಿಲ್ಲುತ್ತಿತ್ತು.
ಈಗ ಸಾಮಾನ್ಯ ಫೋನ್ನಲ್ಲಿ ಮೇಲಿಂದ ಕೆಳಕ್ಕೆ ನಂಬರ್ ಇರಿಸಲು ಇಂಜಿನಿಯರ್ಗಳು ನಿರ್ಧರಿಸಿದರು.ಹಲವು ಡಿಸೈನ್ಗಳನ್ನು ಪರಿಶೀಲಿಸಿದ ಬಳಿಕ ಮೇಲಿಂದ ಕೆಳಕ್ಕೆ ನಂಬರ ಬರೆಯುವ ನಿರ್ಧಾರಕ್ಕೆ ಬಂದರು.ಒಂದುವೇಳೆ ನೀವು ನಿಮ್ಮ ಲ್ಯಾಪ್ಟಾಪ್ನಲ್ಲಿ ಎಡ ಬದಿಗೆನೋಡಿದರೆ ಅಲ್ಲಿಯೂ ನಿಮಗೆ ಕ್ಯಾಲಿಕ್ಯೂಟರ್ ನೀಡಲಾಗಿದೆ. ಅಲ್ಲಿಯೂ ನಂಬರ್ ಕೆಳಗಿನಿಂದ ಮೇಲಕ್ಕಿದೆ. ಎಲ್ಲ ಸಾಮಾನ್ಯ ಕ್ಯಾಲಿಕ್ಯೂಟರ್ಗಳಲ್ಲಿರುವಂತೆ.