,

Love

ಕೈಯೇ ಇಲ್ಲ ; ಎಲ್ಲಾ ಕೆಲಸ ಕಾಲಿನಿಂದಲೇ ಮಾಡ್ತಾರೆ ಇವರು !

ಹುಟ್ಟಿನಿಂದ ಎರಡು ಕೈಗಳನ್ನು ಕಳೆದುಕೊಂಡಿರುವವರಿಗೆ ಕೈಗಳಿರಬೇಕಿತ್ತೆಂದು ಅನಿಸುವುದಿಲ್ಲ. ಜನರು ಕೈರೇಖೆಗಳಲ್ಲಿ ಅದೃಷ್ಟವನ್ನು ಅರಸುತ್ತಾರೆ. ಈ ವ್ಯಕ್ತಿ ಕೈಯಿಲ್ಲದಿದ್ದರೂ ಭಾರೀ ಅದೃಷ್ಟವಂತ. ಮದನ್‌ಲಾಲ್‌ಗೆ ನಲ್ವತ್ತೈದು ವರ್ಷ . ಕೆಲಸದಲ್ಲಿ ದರ್ಜಿ, ಊರು ಫತೇಹ್ ಗಾಂವ್

 

ವಿಧಿ ಮದನ್‌ಲಾಲ್‌ರಿಗೆ ಕೈಗಳನ್ನೇ ಕೊಟ್ಟಿಲ್ಲ. ಆದರೆ ಈ ವ್ಯಕ್ತಿ ಇಡೀ ಜಗತ್ತಿಗೆ ಅಪೂರ್ವ ಉದಾಹರಣೆಯಾಗಿದ್ದಾರೆ.ಮದನ್‌ಲಾಲ್ ಕೈಗಳಿಲ್ಲದೆ ತನ್ನ ಮುಷ್ಠಿಯಿಂದ ಎಲ್ಲ ಕೆಲಸ ಮಾಡಿ ಬಿಡುತ್ತಾರೆ. ಬೀವು ಇದನ್ನು ವೀಡಿಯೊದಲ್ಲಿ ನೋಡಬಹುದು. ಒಬ್ಬ ದರ್ಜಿ ಕೈಗಳಿಲ್ಲದೆ ಹೇಗೆ ಹೊಲಿಯುವುದಪ್ಪಾ. ಈ ವಿಷಯವೇ ವಿಚಿತ್ರ ಅನಿಸುವಂತಹದ್ದು.

 

ಎರಡು ಕೈಗಳಿಲ್ಲ ಎನ್ನುವ ಕಾರಣಕ್ಕೆ ಮದನ್‌ಲಾಲ್‌ರಿಗೆ ಶಾಲೆಗೆ ಪ್ರವೇಶ ಸಿಕ್ಕಲಿಲ್ಲ. ಆದರೆ ಅವರುಒಂದು ಯಶಸ್ವಿ ಜೀವನ ನಡೆಸುತ್ತಿದ್ದಾರೆ. ಮದನ್‌ಲಾಲ್ ಊಟಕ್ಕೂ ಕಾಲನ್ನೇ ಬಳಸುತ್ತಾರೆ. ಕಾಲಿಂದಲೇ ಸಿಗರೇಟು ಸೇದುತ್ತಾರೆ. ಇದಲ್ಲದೆ ಮದನ್‌ಲಾಲ್ ತನ್ನ ಕುಟುಂಬ ಸದಸ್ಯರ ಕೆಲಸದಲ್ಲಿ ನೆರವಾಗುತ್ತಾರೆ. ಇಷ್ಟೇ ಅಲ್ಲ, ಮನಸ್ಸು ವಿಕಲವಲ್ಲದಿದ್ದರೆ, ಅಂಗವಿಕಲತೆ ದೊಡ್ಡ ವಿಷಯವಲ್ಲ ಎಂದು ಮದನ್‌ಲಾಲ್ ಹೇಳುತ್ತಾರೆ. ಒಬ್ಬ ಸಾಮಾನ್ಯ ವ್ಯಕ್ತಿ ಕೂಡಾ ಅವರಷ್ಟು ಕೆಲಸ ಮಾಡಲಾರರು.. ಅಸಾಮಾನ್ಯನಾಗಿ ಮದನ್‌ಲಾಲ್ ಇವೆಲ್ಲ ಮಾಡುತ್ತಿದ್ದಾರೆ. ಮದನ್‌ಲಾಲ್ ನಾನು ಅಂಗವಿಕಲ ಎನ್ನುವ ಕಾರಣಕ್ಕೆ ನಮ್ಮ ಕುಟುಂಬಕ್ಕೆ ಹೊರೆಯಲ್ಲ. ಬದಲಾಗಿ ತಮ್ಮ ಹೆಗಲಲ್ಲಿ ಇತರರ ಹೊರೆಯನ್ನು ಅವರು ಹೊತ್ತುಕೊಂಡಿದ್ದಾರೆ.

 

ಜನರು ಜೀವನದಲ್ಲಿ ಚಿಕ್ಕ ಕಷ್ಟ ಸಮಸ್ಯೆ ಎದುರಿಸುತ್ತಾರೆ. ಇದಕ್ಕಾಗಿ ಕೈಕಾಲು ಬಿಡುತ್ತರೆ. ಇವರೆಲ್ಲ ಮದನ್‌ಲಾಲ್‌ರ ಆತ್ಮವಿಶ್ವಾಸವನ್ನು ನೋಡಿ ತಿಳಿಯಬೇಕು. ಮದನ್‌ಲಾಲ್ ಕಾಲಲ್ಲೇ ಇಸ್ಪೀಟ್ ಆಡಬಲ್ಲರು.

ಆಟಿಕೆ ಲೇಸರ್ ಲೈಟ್ ತಂದ ಅಪಾಯ: ದೃಷ್ಠಿ ಕಳೆದುಕೊಂಡ ಬಾಲಕಿ

ಹುಡುಗಿಯರು ಈ ಹುಡುಗನ ಹಿಂದೆ ಬೀಳುತ್ತಿದ್ದಾರೆ ಯಾಕೆ ಗೊತ್ತಾ?