,

Love

ಕೈದಿ ಮಹಿಳೆಯ ಮಗುವುಗೆ ಮೊಲೆಹಾಲುಣಿಸಿದ ಮಹಿಳಾ ಪೊಲೀಸ್ ಅಧಿಕಾರಿ!

ಜಗತ್ತಿನಲ್ಲಿ ಹಿಂಸಾತ್ಮಕ ಘಟನೆಗಳು ಹೆಚ್ಚುತ್ತಿದೆ. ವೈಮನಸ್ಸು ಭೇದಭಾವ  ಮತ್ತು ದ್ವೇಷ ಅಸೂಯೆಗಳೇ ಮೇಲೈಸಿದೆ.  ಇತ್ತೀಚೆಗೆ ಮನುಷ್ಯನಲ್ಲಿ ಮನುಷ್ಯನ ಬಗ್ಗೆ ವಿಶ್ವಾಸ ಅಳಿಸಿಹೋಗಿದೆ.

ಆದರೆ ಇಂತಹ ಸಂದರ್ಭಗಳಲ್ಲಿಯೂ ಕೆಲವು  ಚಿತ್ರಗಳು ನಮ್ಮಲ್ಲಿಯೂ ಮಾನವೀಯತೆ ಇದೆ ಎನ್ನುವುದನ್ನು ಎತ್ತಿಹಿಡಿಯುತ್ತಿವೆ.

ಹಸಿದು ಅಳತೊಡಗಿದ ಮಗುವಿಗೆ ಎದೆಹಾಲೂಡಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ತಾಯಿಯಿದ್ದಾಗ ಮಗುವಿಗೆ ಮಹಿಳಾಪೊಲೀಸರೊಬ್ಬರು ಎದೆಹಾಲುಣಿಸಿದ ಘಟನೆ ಚೀನದಲ್ಲಿ ನಡೆದಿದೆ.  ಮಗುವಿನ ತಾಯಿ ಕೋರ್ಟಿನಲ್ಲಿ ವಿಚಾರಣೆ ಎದುರಿಸುತ್ತಿದ್ದ ಸಮಯದಲ್ಲಿ  ತಾಯಿಯ ಅನುಮತಿ ಕೇಳಿ ಮಹಿಳಾ  ಪೊಲೀಸಧಿಕಾರಿ ಮಗುವಿಗೆ ಎದೆಹಾಲೂಡಿಸಿದ್ದಾರೆ.

ಬೀಜಿಂಗ್‍ನ ಹಾವೊ ಲಿನ ಎನ್ನು ಮಹಿಳಾ ಪೊಲೀಸಧಿಕಾರಿ  ವಿಚಾರಣಾ ಕೈದಿ  ಮಗು ಹಸಿದಿರುವುದನ್ನು ನೋಡಿ ಸುಮ್ಮನಿರದೆ ಎದೆಹಾಲುಣಿಸುವ ಮೂಲಕ ತನ್ನಿಂದಾದ ಮಾನವೀಯ ಸಹಾಯವನ್ನು ಮಾಡಿದ್ದಾರೆ.

ಸೆಪ್ಟಂಬರ್ 23ಕ್ಕೆ ಚೀನಾದ  ಶಾನ್ಶಿ ಜಿನ್‍ಶಾಂಗ್ ಇಂಟರ್ ಮೀಡಿಯೇಟ್ ಪೀಪಲ್ಸ್ ಕೋರ್ಟಿನಲ್ಲಿ ಘಟನೆ ನಡೆದಿದೆ. ಮಹಿಳಾ ವಿಚಾರಣಾ ಕೈದಿಯ ಮಗುವಿಗೆ ಮಹಿಳಾ ಪೊಲೀಸಧಿಕಾರಿ ಹಾಲೂಡಿಸುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಅಗುತ್ತಿದ್ದಂತೆ ವಿವಿಧ ಕಡೆಗಳಿಂದ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.

ಮಗುವಿಗೆ ಹಾಲೂಡಿಸುವ  ಮಹಿಳಾ ಪೊಲೀಸಧಿಕಾರಿ ಹಾವೊ ಲಿನಾರ ಚಿತ್ರಗಳು ಈಗ ವೈರಲ್ ಆಗಿದೆ.ತನ್ನ ಮಗುವಿಗೆ ಪೊಲೀಸಧಿಕಾರಿ ಈರೀತಿ ಮೊಲೆಹಾಲುಣಿಸುವುದು ನೋಡಿದ ಮಹಿಳಾ  ಕೈದಿಯ ಕಣ್ಣಿಂದ ಆನಂದಭಾಷ್ಟ ಇಳಿದಿತ್ತು.

ಮದುವೆಯಾಗುತ್ತೇನೆ ಎಂದು ಮೋಸಮಾಡಿದ ಹುಡುಗ: ಇದಕ್ಕೆ ಪ್ರಿಯತಮೆ ಮಾಡಿದ್ದೇನು ಗೊತ್ತಾ ?

ಮನೆಯಲ್ಲಿ ಕೂತು ಲಕ್ಷಾಂತರರುಪಾಯಿ ಸಂಪಾದಿಸುತ್ತಿದ್ದಾನೆ ಈ ಬಾಲಕ; ಹೇಗೆ ಗೊತ್ತಾ ?