,

Love

ಕಿರಿಯ ವಯಸ್ಸಿನಲ್ಲಿ ಐಪಿಎಸ್ ಪಾಸಾದ ಮೆರಿನಾ ಜೋಸೆಫ್ ಬಗ್ಗೆ ನಿಮಗೆಷ್ಟು ಗೊತ್ತು ?

ಕೆಲವರು ಐಪಿಎಸ್ ಅಧಿಕಾರಿ ಆಗುವ ಕನಸ್ಸು ಕಾಣುತ್ತಿದ್ದಾರೆ. ಆದರೆ, ಕೆಲವರು ಇದರಲ್ಲಿ ಯಶಸ್ವಿಯೂ ಅಗುತ್ತಾರೆ. ಮೆರಿನಾ ಜೋಸೆಫ್ ಇಂತಹವರಲ್ಲಿ ಒಬ್ಬರು. 22 ವರ್ಷದಲ್ಲಿ ಐಪಿಎಸ್ ಅಧಿಕಾರಿಯಾಗಿ ದೇಶದಲ್ಲಿ ಮಿಂಚುತ್ತಿದ್ದಾರೆ. ಮೆರಿನಾ ಒಂದೇ ಪ್ರಯತ್ನದಲ್ಲಿ ಐಪಿಎಸ್ ಪಾಸ್ ಆಗಿದ್ದಾರೆ. ಮೆರಿನಾ ದಿಲ್ಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲಿ ಕಲಿತವರು. ಬಿಎ ಆನರ್ಸ್ ಡಿಗ್ರಿ ಪಡೆದ ಬಳಿಕ ಮೆರಿನಾ ಐಪಿಎಸ್ ಆಗುವ ಕನಸ್ಸು ಕಂಡರು.

ಮೆರಿನಾ ಕೇರಳದಲ್ಲಿ ಹುಟ್ಟಿದವರು. ಅವರ ತಂದೆ ಕೃಷಿ ಸಚಿವಾಲಯದಲ್ಲಿ ಪ್ರಮುಖ ಸಲಹೆಗಾರನಾಗಿ  ಕೆಲಸಮಾಡುತ್ತಿದ್ದಾರೆ. ತಾಯಿ ಅರ್ಥಶಾಸ್ತ್ರ ಅಧ್ಯಾಪಿಕೆಯಾಗಿದ್ದಾರೆ. ಕಾಲೇಜಿ ದಿನದಲ್ಲಿ ಮೆರಿನಾ ಬ್ಯೂಟಿ ವಿದ್ ಬ್ರೇನ್ ಎನ್ನುವ ಟ್ಯಾಗ್ ಸಿಕ್ಕಿತ್ತು. ಪದವಿ ಬಳಿಕ ಮೆರಿನಾ ದಿಲ್ಲಿಯ ಒಂದಿ ಕೋಚಿಂಗ್ ಸೆಂಟರ್‍ನಲ್ಲಿ ತಯಾರಿ ನಡೆಸಿದರು. ಮರಿನಾ 2012ರಲ್ಲಿ ಆಲ್ ಇಂಡಿಯ ರ್ಯಾಂಕಿಂಗ್‍ನಲ್ಲಿ 188 ಸ್ಥಾನ ಪಡೆದು ಐಪಿಎಸ್ ಪರೀಕ್ಷೆ ಪಾಸಾದರು.

ಮೆರಿನಾ ಹೈದರಾಬಾದ್‍ನಲ್ಲಿ ಟ್ರೈನಿಂಗ್ ಪಡೆದಿದ್ದಾರೆ. ಇಲ್ಲಿ ಅವರು ಈಜು, ಆಯುಧ ಚಲಾವಣೆಯನ್ನುಕಲಿತಿದ್ದರು.

ಮೆರಿನಾ 2015ರಲ್ಲಿ  ಮದುವೆಯಾದರು. ಪದವಿ ಕಲಿಯುವಾಗಲೆಅವರು ತನ್ನ ಬಾಳ ಸಂಗಾತಿಯನ್ನು ಅಯ್ಕೆಮಾಡಿಕೊಂಡಿದ್ದರು. ಮದುವೆಯಾಗಲು ಒಂದು ಉತ್ತಮ ಸಂದರ್ಭವನ್ನು  ಕಾಯುತ್ತಿದ್ದರು. ಮೆರಿನಾ ವೈದ್ಯರನ್ನು ಮದುವೆಯಾಗಿದ್ದಾರೆ. ಮೆರಿನಾಗೆ ಆ ಸಂದರ್ಭದಲ್ಲಿ ಎಲ್ಲ ಹುಡುಗಿಯರ ಐಕಾನ್ ಎನ್ನುವಂತೆ ಜನಪ್ರಿಯತೆ ದೊರಕಿತ್ತು. ಈ ರೀತಿ 22 ವರ್ಷದಲ್ಲಿ ಐಪಿಎಸ್ ಪಾಸಾದ ಭಾರತದ ಮೊದಲ ಐಪಿಎಸ್ ಅಧಿಕಾರಿ ಎನ್ನುವ ಶ್ರೇಯ ಮೆರಿನಾರ ಬುಟ್ಟಿಗೆ ಬಿದ್ದಿದೆ.

 

ಹಲಸಿನ ಈ ಪ್ರಯೋಜನಗಳು ತಿಳಿದರೆ ನೀವು ಅದನ್ನು ತಿನ್ನದೆ ಇರಲಾರಿರಿ !

ಎಚ್ಚರ ! ಈ ನಾಲ್ಕು ವಸ್ತುಗಳು ಹೆಚ್ಚಾಗಿ ಬಳಸಿದರೆ ಪುರುಷತ್ವ ಕಳೆದುಕೊಳ್ತೀರಿ