,

ಒಂದುವೇಳೆ ಮನುಷ್ಯ ಮಂಗಳ ಗ್ರಹಕ್ಕೆ ಹೋದರೆ ಈ ರೀತಿ ಮನೆ ಮಾಡುವನು!

ಅಮೆರಿಕದ ಅಂತರಿಕ್ಷ ಸಂಶೋಧನಾ ಸಂಸ್ಥೇ ನಾಸದಲ್ಲಿ ಸ್ಟಾನ್‍ಫೋರ್ಡ್ ಸಿವಿಲ್ ಇಂಜಿನಿಯರ್ ಮತ್ತು ಇತರ ಸಂಶೋಧಕರು ಸೇರಿ ಮಂಗಳನಲ್ಲಿ ಮನೆ ಮಾಡಲು  ಕಾಂಕ್ರಿಟ್ ಅಥವಾ ಸಿಮೆಂಟಿನ ಬಳಕೆಯ ಸಾಧ್ಯತೆಯ ಶೋಧನಾಕಾರ್ಯ ಜರಗುತ್ತಿದೆ.

ನಾಸಾ 2030ಕ್ಕಾಗುವಾಗ ಮಂಗಳದಲ್ಲಿ ಮನುಷ್ಯ ಹೋಗಿ ಅಲ್ಲಿ ಉಳಿಯುವ ವ್ಯವಸ್ಥೆಯನ್ನು ಮಾಡುವ ಯೋಜನೆಯಲ್ಲಿ ಕೆಲಸ ನಿರತವಾಗಿದೆ.
ನಾಸಾ ಒಂದು ವೇಳೆ ತನ್ನ ಈ ಯೋಜನೆಯಲ್ಲಿ ಯಶಸ್ಸು ಕಂಡರೆಅಲ್ಲಿ ವಾಸಿಸಬೇಕಾದರೆ ಸಾವಿರಗಟ್ಟಲೆ ಟನ್ ಕಾಂಕ್ರಿಟ್‍ನ ಅಗತ್ಯ ಎದುರಾಗಬಹುದು. ಯಾಕೆಂದರೆ ಮಂಗಳ ಮತ್ತು ಚಂದ್ರನ ಮೇಲ್ಮೈಯಲ್ಲಿ ನಿರಂತರವಾಗಿ ಅಪಾಯಕಾರಿ ವಿಕಿರಣ ಮತ್ತು ಉಲ್ಕಾಪಾತ ಆಗುತ್ತಿರುತ್ತವೆ.
ಟನ್‍ಗಟ್ಟಲೆ ಸಿಮೆಂಟು ಅಲ್ಲಿಗೆ ಕೊಂಡುಹೋಗಲುಸಾಧ್ಯವಿಲ್ಲ:
ಸುದ್ದಿ ಸಂಸ್ಥೆ ಸಿನ್‍ಹುಆದ ಪ್ರಕಾರ ಭೂಮಿಯಿಂದ ಟನ್‍ಗಟ್ಟಲೆ ಸಿಮೆಂಟು ತೆಗೆದು ಕೊಂಡು ಮಂಗಳನಿಗೆ ಹೋಗಲು ಸಾಧ್ಯವಿಲ್ಲ.  ಆದರೆ ಅದನ್ನು ಮಂಗಳನಲ್ಲಿಯೇ ಮಾಡಬೇಕು ಎನ್ನುವುದು ಅತ್ಯುತ್ತಮ ಉಪಾಯವಾಗಿದೆ.

ಆದರೆ ಸಮಸ್ಯೆ ಇದೆ ಭೂಮಿಯಲ್ಲಿ ಸಿಮೆಂಟ್ ತಯಾರಿಯ ಈಗಿನ ಟೆಕ್ನಿಕ್‍ಗೆ ಭಾರೀ ತಾಪಬೇಕು. ಮತ್ತು ತುಂಬ ಇಂಧನದ ಅಗತ್ಯತೆ ಇದೆ. ಆದರೆ ಮಂಗಳಗ್ರಹದಲ್ಲಿ ಇಂಧನ ಬಹಳ ಕಡಿಮೆ ಇದೆ.
ಆದ್ದರಿಂದ ಶೋಧನೆಯಲ್ಲಿ ನಿರತ ಸಂಶೋಧಕರು ಡೆವಿಡ್ ಲೆಫ್ಟಸ್ ಮತ್ತು ಅವರ ಸಹದ್ಯೋಗಿ ಸ್ಟೇನ್‍ಫೋಡ್ ಯುನಿವರ್ಸಿಟಿಯ ಸಿವಿಲ್ ಏಂಡ್ ಎನ್ವಯರ್‍ಮೆಂಟ್ ಇಂಜಿನಿಯರ್ ಪ್ರೊ. ಮೈಕಲ್ ಲೆಪೆಕ್  ಜೈವಿಕ ಕ್ರಿಯೆ ಮೂಲಕ ಕಾಂಕ್ರಿಟ್ ನಿರ್ಮಾಣದ ವಿಧಿ ಕಂಡುಹುಡುಕಿದ್ದಾರೆ.
ಕೆಲವು ಜೀವ ಪ್ರೊಟಿನ್ ನೆರವನಲ್ಲಿ ವಸ್ತುಗಳನ್ನು ಎಲುಬು ಅಥವಾ ದಂತದಂತೆ ಬದಲಿಸಬಹುದು. ಆದ್ದರಿಂದ ಇಂತಹ ಕಾಂಕ್ರಿಟ್ ಮಾಡುವ ಶೋಧನೆ ನಡೆಸುತ್ತಿದ್ದಾರೆ. ಪ್ರಾಣಿಗಳ ರಕ್ತದಲ್ಲಿ ಕಾಣುವ ಪ್ರೊಟಿನ್ ಸಹಾಯದಿಂದ ಪ್ರಯೋಗ ನಡೆಸುತ್ತಿದ್ದಾರೆ.

ಮಂಗಳದಲ್ಲಿ ಚಂದ್ರನಲ್ಲಿ ಕಂಡು ಬರುವ ಮಣ್ಣನ್ನು ತಯಾರಿಸಿ ಅದಕ್ಕೆ ಪ್ರೊಟಿನ್ ಮಿಶ್ರಣಗೊಳಿಸಿದ್ದಾರೆ.  ಈ ಕಾಂಕ್ರಿಟ್ ರಸ್ತೆಗೆ ಹಾಕುವ ಕಾಂಕ್ರಿಟಿನಷ್ಟೇ ಗಟ್ಟಿಮುಟ್ಟಾಗಿದೆ. ಈ ಕಾಂಕ್ರಿಟ್‍ಗೆ ಉಲ್ಕೆಗಳು  ಮತ್ತು ವಿಕಿರಣಗಳನ್ನು ತಡೆಯು ಸಾಮರ್ಥ್ಯವಿದೆ

ಇಲ್ಲಿ ಮಹಿಳೆಯರೂ ನಿಂತೇ ಮೂತ್ರ ಮಾಡಬೇಕು

ಮದುಮಗಳ ದೇಸಿ ಬ್ರಾಂಡ್ ಡ್ಯಾನ್ಸ್ : ವೀಡಿಯೋ ನೋಡಿ