ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಇತ್ತೀಚೆಗೆ ಹೊಸ ಹೊಸ ಸಂಶೋಧನೆಗಳು ಬೆಳಕಿಗೆ ಬರುತ್ತಲೇ ಇದೆ. ಹೊಸ ಹೊಸ ವಸ್ತುಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಲೇ ಇವೆ. ನ್ಯಾನೊ ಕಂಪ್ಯೂಟರ್, ಮೈಕ್ರೊಚಿಪ್ಗಳಿಂದ ನಡೆಯುವ ಟಿವಿ. ಎಂಟು ಜಿಬಿಯ ರ್ಯಾಮ್ನ್ನು ಹೊಂದಿರುವ ಸ್ಮಾರ್ಟ್ ಕಂಪ್ಯೂಟರ್, ವಯರ್ಲೆಸ್ ಹೆಡ್ ಫೋನ್ ಇತ್ಯಾದಿ ಬಂತು. ಈ ರೀತಿ ತಂತ್ರಜ್ಞಾನ ಅಥವಾ ಟೆಕ್ನಾಲಜಿ ಇಷ್ಟು ಮುಂದುವರಿದಿದ್ದು, ಇಂದು ಮನುಷ್ಯರ ಜೀವನ ಬಹಳ ಸೌಕರ್ಯಭರಿತವಾಗಿದೆ ಎನ್ನಬಹುದು. ಕಂಪ್ಯೂಟರ್ ಸೂಪರ್ ಕಂಪ್ಯೂಟರ್, ಲ್ಯಾಪ್ಟ್ಯಾಪ್- ಟ್ಯಾಬ್ ಮತ್ತು ಮೊಬೈಲ್ ಹೀಗೆ ಬಹಳಷ್ಟು ಸಂಶೋಧನೆಗಳು ಜನರ ಬಳಿ ತಲುಪಿವೆ. ಇದೀಗ ಜಗತ್ತಿನ ಅತಿ ಚಿಕ್ಕ ಕಂಪ್ಯೂಟರ್ ಕೋಲಾಹಲ ಮತ್ತು ಕುತೂಹಲಕ್ಕೆ ಕಾರಣವಾಗುತ್ತಿದೆ.
ಐಬಿಎಂ ಇಂತಹ 1ಘಿ1mm ಕಂಪ್ಯೂಟರ್ ತಯಾರಿಸಿದೆ ಇದು ಉಪ್ಪಿನ ಅರಳಿಗಿಂತಲೂ ಸಣ್ಣದು ಆಗಿರಲಿದೆ. ಒಂದು ಮಿಲಿಯನ್ ಟ್ರಾನ್ಸಿಸ್ಟರ್ ಸಾಮಥ್ರ್ಯ ಹೊಂದಲಿದೆ. ಮೈಕ್ರೋಸ್ಕೋಪ್ ಮೂಲಕ ಇದನ್ನು ಬೇಕಾಗುತ್ತದೆ. ಈ ಡಿವೈಸ್ನ್ನು ಕಂಪೆನಿ ಐಬಿಎಂ ಥಿಂಕ್ 2018ರ ಸಮ್ಮೇಳನದಲ್ಲಿ ಈಗಾಗಲೇ ಬಿಡುಗೊಳಿಸಿದೆ.
ಈ ಪುಟ್ಟ ಕಂಪ್ಯೂಟರ್ನಲ್ಲಿ ಹತ್ತು ಲಕ್ಷ ಟ್ರಾನ್ಸಿಸ್ಟರ್ ಇದೆ. ಅದನ್ನು ಸೂಕ್ಷ್ಮದರ್ಶಕ ಸಹಾಯದಲ್ಲಿ ಮಾತ್ರ ನೋಡಬಹುದಾಗಿದೆ. ಡಾಟದ ಮೇಲೆ ಇದು ನಿಗಾವಿರಸುತ್ತದೆ. ವಿಶ್ಲೇಷಣೆ ಮಾಡುತ್ತದೆ. ಹೀಗೆ ವಸ್ತುಗಳು ಅಸಲಿಯೇ ನಕಲಿಯೇ ಎಂದು ಗುರುತಿಸುವ ಶಕ್ತಿ ಅದಕ್ಕಿದೆ. ವಿದ್ಯುತ್ಗಾಗಿ ಫೋಟೊ ವಾಲ್ಟಯಿಕ್ ಸೆಲ್ ಇದೆ. ಇದರಲ್ಲಿ ಎಲ್ಲ ಇಡಿ ಮತ್ತು ಫೋಟೊ ಡಿಟೆಕ್ಟರ್ ಇದೆ.